ರೇಷ್ಮೆ ಗಣಪ….!
ವಿಶ್ವದ ಅತ್ಯಂತ ಆಕರ್ಷಕ ವಸ್ತ್ರವೆಂದರೆ ಅದು ರೇಷ್ಮೆಯೇ ಸರಿ. ರೇಷ್ಮೆ ವೈಭವ ಮತ್ತು ಭವ್ಯತೆಯ ಸಂಕೇತವಾಗಿದೆ. ರೇಷ್ಮೆ ಹುಳುಗಳು ಪತಂಗವಾಗುವ ಮೊದಲು ಸಣ್ಣ ದಾರದಿಂದ ತಮ್ಮನ್ನು ಸುತ್ತಿಕೊಂಡು ಗೂಡು ನಿರ್ಮಿಸಿಕೊಳ್ಳುತ್ತವೆ. ಈ ಗೂಡಿನಿಂದ ಎಳೆಗಳನ್ನು ತೆಗೆದು ವಸ್ತ್ರ ತಯಾರಿಸಲಾಗುತ್ತದೆ. ಈ ರೇಷ್ಮೆ ಗೂಡುಗಳು ಈಗ ಅಲಂಕಾರಕ್ಕೂ ಬಳಕೆಯಾಗಿವೆ. ಇತ್ತೀಚಿಗೆ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ನಡೆದ ಕೃಷಿಮೇಳದಲ್ಲಿ ಚಿಂತಾಮಣಿಯ ರೇಷ್ಮೆ ಕೃಷಿ ಮಹಾವಿದ್ಯಾಲಯದ ಕೌಂಟರ್ ನಲ್ಲಿ ಇರಿಸಿದ್ದ ಗಣಪನ ವಿಗ್ರಹ ನೋಡುಗರ ಗಮನ ಸೆಳೆಯುತ್ತಿತ್ತು. ಕಾರಣ, ಎಲ್ಲಕ್ಕಿಂತ ಭಿನ್ನವಾದ ಗಣಪ ಇಲ್ಲಿದ್ದ. ಗಣಪನ ವಿಗ್ರಹದ ಹೊರಭಾಗವನ್ನು ಬಣ್ಣ ಬಣ್ಣದ ರೇಷ್ಮೆಗೂಡಿನಿಂದ ಆಕರ್ಷಕವಾಗಿ ಕಾಣುವಂತೆ ಕಲಾತ್ಮಕವಾಗಿಯೂ, ಸುಂದರವಾಗಿಯೂ ಜೋಡಿಸಿದ್ದು. ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಕಾಲ ನೈಪುಣ್ಯತೆಯಿಂದಾಗಿ ಈ ರೀತಿಯ ಅಪರೂಪದ ವಿಘ್ನ ನಿವಾರಕ ಮೈದಳೆದಿದ್ದು ಮೆಚ್ಚಿವಂತಹದ್ದು.
ಹೊಸ್ಮನೆ ಮುತ್ತು