ರಂಗೋಲಿ ಮರಿಗೆ…!
ರಂಗೋಲಿ ಹಾಕುವುದು ಒಂದು ನಾಜೂಕಿನ ಕಲೆ. ಹೆಬ್ಬೆರಳು, ತೋರುಬೆರಳಿನ ನಡುವೆ ರಂಗೋಲಿ ಪುಡಿಯನ್ನು ಉದುರಿಸುತ್ತಾ ಚುಕ್ಕಿ, ಗೆರೆಗಳನ್ನು ಸೇರಿಸುತ್ತಾ ಚಿತ್ತಾರವಾಗಿಸುವ ಕೈಚಳಕ. ಹಿಂದಿನ ಕಾಲದಲ್ಲಿ ರಂಗೋಲಿ ಪುಡಿಯನ್ನು ಇಡಲು ವಿಶೇಷ ಅಕಾರ, ವಿನ್ಯಾಸದ ಪರಿಕರಗಳಿದ್ದವು. ಇವನ್ನು ರಂಗೋಲಿ ಮರಿಗೆ (ಬಟ್ಟಲು) ಎನ್ನುತ್ತಿದ್ದರು. ಇಲ್ಲಿರುವುದು ವಿಶೇಷ ವಿನ್ಯಾಸದಲ್ಲಿ ರೂಪಿತವಾದ ಒಂದು ಮರದ ರಂಗೋಲಿ ಮರಿಗೆ. ಇದರಲ್ಲಿ ಮೂರೂ ವಿಭಾಗಗಳಿದ್ದು. ಚಿತ್ತಾರ ಬಿಡಿಸಲು ಅವಶ್ಯವಾದ ರಂಗೋಲಿ, ಅರಿಶಿನ, ಕುಂಕುಮವನ್ನು ಒಟ್ಟಿಗೆ ಇಡುವಂತಹ ವ್ಯವಸ್ಥೆಯ ಜೊತೆಗೆ ಅತ್ತ ಇತ್ತ ಸರಿಸುವ ಮುಚ್ಚಳದ ವ್ಯವಸ್ಥೆಯೂ ಇದೆ. ಆಧುನಿಕತೆಯ ಭರಾಟೆಯಲ್ಲಿ ರಂಗೋಲಿ ಸಂಸ್ಕೃತಿ ನಿಧಾನವಾಗಿ ಹಿನ್ನೆಲೆಗೆ ಸರಿಯುತ್ತಿದ್ದು ಪರಿಸರ ಸ್ನೇಹಿ. ಮರಮುತ್ತಿನ ವಸ್ತುಗಳ ಜಾಗದಲ್ಲಿ ಪ್ಲಾಸ್ಟಿಕ್ ವಸ್ತುಗಳು ಬಂದು ಪೂರ್ವಜರು ಬಳಸುತ್ತಿದ್ದ ವಸ್ತುಗಳು ಮೂಲೆಗುಂಪಾದವು. ಮುಂದಿನ ಜನಾಂಗಕ್ಕೆ ಪರಿಚಯಿಸಲಾದರೂ ಇಂತಹ ವಸ್ತುಗಳನ್ನು ಕಾಪಿಡುವ ಅಗತ್ಯವಿದೆ.
ಹೊಸ್ಮನೆ ಮುತ್ತು