ರಾಧೆ!
ಕೃಷ್ಣನ ಕೊಳಲುಲಿಗೆ ಮನ ಸೋತ ರಾಧೆ
ಮಾಡಿದಳು ಮಧುಸೂಧನನ ಮನಸ್ಸಿನ ವಧೆ
ಸದಾ ಧ್ಯಾನದಲಿ ಮುರುಳಿಯ ಕಾತರದಿ ಕಾದೆ
ಬಣ್ಣದೋ ಕುಳಿಯ ರಾಸಲೀಲೆಯಲಿ ಕುಣಿದೆ
ಪ್ರೇಮದುಯ್ಯಾಲೆಯಲಿ ಜೊತೆಗೂಡಿ ತೂಗಿದೆ
ಅಂತರಂಗದ ಶುದ್ಧ ಪ್ರೀತಿಯಲ್ಲಿ ಪಯಣಿಸಿದೆ
ಕಾಯಕ ನಿಷ್ಠೆಯ ನೀತಿ ಪಥವ ಸ್ವಾಮಿಗೆ ತೋರಿದೆ
ದೇಹ ಚಪಲ ಬಿಟ್ಟು ಕೃಷ್ಣನ ಮನದರಸಿಯಾದೆ
ಪರಮಾತ್ಮನ ಸರ್ವಸ್ವದಲೂ ಲೀನಳಾದೆ
ಲೋಕಕೆ ಪ್ರೇಮದ ನಿಜ ಅರ್ಥ ತಿಳಿಸಿದೆ.
Uma Bhaykhande