• -40%

    ಪಾಲಕರಿಗಾಗಿ

    0

    ಪಾಲಕರಿಗಾಗಿ…….
    (ಮಕ್ಕಳ ಶೈಕ್ಷಣಿಕ ಅಡಿಪಾಯ)
    ಕಿರಿಯ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳ ಶಿಕ್ಷಣಕ್ಕೆ ಭದ್ರವಾದ ತಳಹದಿ ಒದಗಿಸಿದರೆ ಮುಂದೆ ಅವರ ವ್ಯಕ್ತಿತ್ವ ವಿಕಾಸದ ದಾರಿ ಸುಗಮಗೊಳ್ಳಲು ಸಾಧ್ಯ. ಈ ಬಗ್ಗೆ ಸಾಕಷ್ಟು ಚಿಂತನೆ ನಡೆಸಿ, ತಮ್ಮ ಮೂವತ್ತೇಳು ವರ್ಷಗಳ ಶಿಕ್ಷಕ ವೃತ್ತಿಯ ಅನುಭವದ ಜೊತೆಗೆ ತಾಯಿಯಾಗಿ, ಅಜ್ಜಿಯಾಗಿ ಪಾಲಕರ ಹೊಣೆಗಾರಿಕೆಯನ್ನು ಸರಿಯಾಗಿ ಅರ್ಥಮಾಡಿಕೊಂಡ ಡಾ|| ಜಯಶ್ರೀ ಎಸ್. ಮುದಿಗೌಡರ, ಅಪೂರ್ವವಾದ ಕಾಳಜಿಯಿಂದ, ಸ್ಪಷ್ಟವಾದ ತಿಳವಳಿಕೆಯಿಂದ ಪ್ರಸ್ತುತ ಗ್ರಂಥವನ್ನು ರಚಿಸಿದ್ದಾರೆ. “ಬೆಸುಗೆಯ ನಿಟ್ಟು” ಎಂಬ ಮೊದಲ ಭಾಗದಲ್ಲಿ ೧) ಮನೆ ಮತ್ತು ತಾಯಿ ೨) ಶಿಕ್ಷಣ ಕ್ಷೇತ್ರ-ಹಿತಚಿಂತಕರು ಹಾಗೂ ೩) ಸಮಾಜ-ಹಿರಿಯರು ಅವಶ್ಯವಾಗಿ ಲಕ್ಷಿಸಬೇಕಾದ ಸಂಗತಿಗಳನ್ನು ಉಪಯುಕ್ತ ಸಲಹೆಗಳೊಂದಿಗೆ ವಿವರಿಸಲಾಗಿದೆ. ಬೋಧನೆಯ ಗರಿಷ್ಠ ಸಾಧನೆಯು ಶಿಕ್ಷಕರ ಸಂದರ್ಭೋಚಿತವಾದ ಬೋಧನಾ ಕಲೆಯ ಚಾಕಚಕ್ಯತೆಯಲ್ಲಿ ಮತ್ತು ಅವರ ವೃತ್ತಿ ಕಳಕಳಿಯಲ್ಲಿ ಅಡಗಿರುವುದನ್ನು ಎತ್ತಿ ತೋರಿಸಲಾಗಿದೆ.

    Original price was: ₹80.00.Current price is: ₹48.00.
    Add to basket
  • -40%

    ಓಡಬೇಡ ಎದುರಿಸು…

    0

    ಓಡಬೇಡ ಎದುರಿಸು…
    ಉತ್ತುಂಗ ಬದುಕಿಗೆ ಧೀಮಂತ ಚಿಂತನೆಗಳು
    ಈ ಕೃತಿಯು ಪರಮ ಪೂಜ್ಯ ಸ್ವಾಮಿ ವಿಜಯಾನಂದ ಸರಸ್ವತಿಯವರು ತಮ್ಮ ಆಶ್ರಮ ಕಳೆದ ಹಲವಾರು ವರ್ಷಗಳಿಂದ ಪ್ರಕಟಿಸುತ್ತಿರುವ ‘ನವ ಚಿಂತನ’ ತ್ರೈಮಾಸಿಕ ಪತ್ರಿಕೆಗೆ ಬರೆಯುತ್ತ ಬಂದಿರುವ ಸಂಪಾದಕೀಯ ಲೇಖನಗಳಿಂದ ಆಯ್ದ ಮೌಲಿಕ ಲೇಖನಗಳನ್ನು ಒಳಗೊಂಡಿದೆ. ವರ್ತಮಾನದಲ್ಲಿ ಕುಸಿಯುತ್ತಿರುವ ನೈತಿಕಪ್ರಜ್ಞೆಯನ್ನು, ರಾಷ್ಟ್ರಪ್ರೇಮವನ್ನು, ನಿರ್ಭಯತೆಯನ್ನು, ವಿವೇಕವನ್ನು, ವಿನಯವನ್ನು, ಧೀರೊದ್ಧಾತ್ತ ನಾಯಕತ್ವದ ಗುಣಗಳನ್ನು ವಿಶೇಷವಾಗಿ ಯುವಮನಸ್ಸುಗಳಲ್ಲಿ ಮರುಬಿತ್ತನೆ ಮಾಡುವ ತೀವ್ರತರವಾದ ತುಡಿತ ಪ್ರಸ್ತುತ ಲೇಖನಗಳಲ್ಲಿ ವ್ಯಾಪ್ತವಾಗಿರುವುದನ್ನು ಯಾರೂ ಪರಿಭಾವಿಸಬಾರದು. ಬದುಕಿನ ಹತಾಶೆಗೆ, ಅರಿವಿನ ಅಭಾವಕ್ಕೆ, ಮನುಷ್ಯತ್ವದ ಕೊರತೆಗೆ, ಬದುಕಿನ ಅನರ್ಥಕತೆಗೆ, ತಂದೆ-ತಾಯಿಗಳ ಬೇಜವಾಬ್ದಾರಿಕೆಗೆ, ಅಭಿಮಾನಶೂನ್ಯತೆಗೆ, ಮಾನಸಿಕ ಅನಾರೋಗ್ಯಕ್ಕೆ ಸರಿಯಾದ ಚಿಕಿತ್ಸೆ ನೀಡಬಲ್ಲ ಮತ್ತು ಬದುಕಿಗೆ ದಾರಿದೀಪವಾಗಬಲ್ಲ ಕೃತಿ ಇದಾಗಿದೆ.

    Original price was: ₹110.00.Current price is: ₹66.00.
    Add to basket
  • -40%

    ವಿಚ್ಛೇದನಾ ಪರಿಣಯ

    0

    ವಿಚ್ಛೇದನಾ ಪರಿಣಯ
    ಕತೆಯನ್ನು ಹುಡುಕುವ ಒಂದು ಕಾದಂಬರಿ
    ಸುಮಾರು ಏಳೆಂಟು ತಿಂಗಳ ಕಾಲಾವಧಿಯಲ್ಲಿ ಬರೆದ ಈ ಕಾದಂಬರಿಯ ಈ ರೂಪಕ್ಕೆ ಕಾರಣರಾದವರು ರಚನೆಯ ಬೇರೆ ಬೇರೆ ಹಂತಗಳಲ್ಲಿ ಓದಿ ತಮ್ಮ ಮೆಚ್ಚುಗೆ-ಟೀಕೆ-ನಿರೀಕ್ಷೆಗಳನ್ನು ತಿಳಿಸಿದ ಆತ್ಮೀಯರು. ಈ ಆತ್ಮೀಯರಿಗೆಲ್ಲ ಕೃತಜ್ಞನಾಗಿದ್ದೇನೆ.

    Original price was: ₹70.00.Current price is: ₹42.00.
    Add to basket
  • -40%

    ಚಂದಪ್ಪನ ಶಾಲೆ

    0

    ಚಂದಪ್ಪನ ಶಾಲೆ
    ಈ ಮಕ್ಕಳ ಕವಿತಾ ಪುಸ್ತಕದಲ್ಲಿ ಒಟ್ಟು ಒಪ್ಪತ್ತೊಂಬತ್ತು ಕವಿತೆಗಳಿವೆ. ಅವರ ಪರಿಸರ ಪ್ರೇಮ, ಗಿಡಮರಗಳಿಂದ ಆಗುವ ಲಾಭ, ಅಜ್ಜ, ಅಜ್ಜಿಯರ ಸಂಭ್ರಮ, ಊರಲ್ಲಿಯ ಶೆಟ್ಟಿ ಅಂಗಡಿ, ಅನ್ನದಾತ ರೈತನ ಜೀವನ, ಅಂಚೆಯವನ ಕಾರ್ಯ, ವನಮಹೋತ್ಸವ, ಮುಂತಾದ ವಿಶಿಷ್ಟವೆನ್ನಬಹುದಾದ ಆದರ್ಶಗುಣಗಳು ಈ ಪುಸ್ತಕದಲ್ಲಿ ಒಡೆಮೂಡಿವೆ. ಇನ್ನೊಂದು ವಿಶೇಷತೆಯೆಂದರೆ ಆಯಾ ಕವಿತೆಗೆ ಹೋಲುವ ರೇಖಾ ಚಿತ್ರಗಳು ಮಕ್ಕಳ ಗಮನ ಸೆಳೆಯುತ್ತವೆ.

    Original price was: ₹40.00.Current price is: ₹24.00.
    Add to basket
  • -40%

    ಕನ್ನಡ ವ್ಯಾಕರಣ

    0

    ಕನ್ನಡ ವ್ಯಾಕರಣ
    ಶೈಕ್ಷಣಿಕ ಅಭಿವೃದ್ಧಿಗೆ ಭದ್ರ ನೆಲೆಗಟ್ಟನ್ನು ಒದಗಿಸುವಂಥದ್ದು ಪ್ರಾಥಮಿಕ ಶಾಲಾ ಹಂತ. ನಂತರ ಪ್ರೌಢಶಾಲೆ ಕಾಲೇಜು ಘಟ್ಟಗಳಲ್ಲಿ ಭಾಷಾ ಅಭಿವೃದ್ಧಿ ಪೂರ್ಣತೆಯತ್ತ ಸಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಇಂಗ್ಲೀಷ ಮಾಧ್ಯಮ ಶಾಲೆಗಳತ್ತ ಪಾಲಕರ ಒಲವು ಹೆಚ್ಚಾಗುತ್ತಿದೆ. ಇದರಿಂದಾಗಿ ಪ್ರಾಥಮಿಕ ಹಂತದಲ್ಲಿ ಪ್ರಾದೇಶಿಕ ಕನ್ನಡ ಭಾಷೆ, ಸಾಹಿತ್ಯ, ವ್ಯಾಕರಣದ ಮೂಲಜ್ಞಾನ ದೊರಬೇಕಾದಷ್ಟು ದೊರೆಯದೆ ಹೋಗುವದರಿಂದ ಇಂದು ಬಹುಪಾಲು ವಿದ್ಯಾರ್ಥಿಗಳ ಕನ್ನಡ ಓದು ಬರಹದ ಸ್ಥಿತಿಗತಿ ಅಷ್ಟಕ್ಕಷ್ಟೆ. ಅಷ್ಟೇ ಏಕೆ, ಪದವೀಧರರ ಕನ್ನಡ ಬರವಣಿಗೆ ಹೇಗಿರುತ್ತದೆಂಬುದು ಎಲ್ಲರ ಅನುಭವಕ್ಕೆ ಬಂದ ವಿಷಯ. ಇಂತಹ ಸಂದರ್ಭದಲ್ಲಿ ಐದರಿಂದ ಹತ್ತನೇ ತರಗತಿ ವರೆಗಿನ ಮಕ್ಕಳಿಗೆ ಕನ್ನಡ ವ್ಯಾಕರಣದ ಮೂಲ ಸ್ವರೂಪವನ್ನು ತಿಳಿಸಿ ಕೊಡುವ “ಕನ್ನಡ ವ್ಯಾಕರಣ” ಎಂಬ ಕೃತಿಯನ್ನು ಡಾ.ಜಯಶ್ರೀ ಎಸ್. ಮುದಿಗೌಡರರವರು ಹೊರತಂದಿದ್ದು ಅತ್ಯಂತ ಮಹತ್ವದ ವಿಷಯ.

    Original price was: ₹40.00.Current price is: ₹24.00.
    Add to basket
  • -40%

    ಬೆಳೆವ ಸಿರಿ ಮೊಳಕೆಯಲ್ಲಿ

    0

    ಬೆಳೆಯ ಸಿರಿಯನ್ನು ಮೊಳಕೆಯಲ್ಲೇ ನೋಡಬಹುದಂತೆ. ಹಾಗೆಯೇ ಮಕ್ಕಳ ಭವಿಷ್ಯವನ್ನು ಅವರು ಬೆಳೆವ ಸಮಯದಲ್ಲೇ ಕಾಣಬಹುದು.‘ಅಜ್ಜಾ ಕಥೆ ಹೇಳು’ ಎಂದ ಮೊಮ್ಮಕ್ಕಳು ದುಂಬಾಲು ಬಿದ್ದಾಗ, ಅವರಿಂದಲೇ ಒಂದು ಕಥೆಯನ್ನು ರಚಿಸಬಹುದಲ್ಲ ಅನ್ನಿಸಿ ಪ್ರಯತ್ನಿಸಿದೆ.
    -ಹ. ಶಿ. ಭೈರನಟ್ಟಿ

    Original price was: ₹40.00.Current price is: ₹24.00.
    Add to basket
  • -40%

    ರೂಪಾಯಿಕ್ಕೊಂದ ಕವನ

    0

    ರೂಪಾಯಿಕ್ಕೊಂದ ಕವನ 
    ಇಲ್ಲಿಯ ಕವನಗಳು ತಮ್ಮದೇ ಆದ ದಾಟಿಯಲ್ಲಿ ಸಮಾಜಕ್ಕೆ ಕಿವಿಮಾತು. ಮಾಮಿರ್ಕವಾಗಿ ಚಾಟಿ ಏಟನ್ನು ನೀಡುವದರ ಜೊತೆಗೆ ಸಮಾಜ ತಿದ್ದುವ ಕೆಲಸವನ್ನು ಮಾಡಿದ್ದು ಕಂಡು ಬರುತ್ತದೆ. ಮುಂಬೈ ದಾಳಿ ತಿರುಗೇಟು ನಾನು ಮತ್ತು ನನ್ನ ಮನಸು ಈ ಕವಿತೆಗಳು ಮತ್ತು ಸ್ಥಿತಿಯನ್ನು ಯಥಾವತ್ತಾಗಿ ಚಿತ್ರಿಸಿದ್ದು ಬಿಸಿರೊಟ್ಟಿ ಕವನ ಆಸೆಯನ್ನು ಪೂರೈಸಿಕೊಳ್ಳಲು ಸಮಯ ಅಡ್ಡ ಗೊಡೆಯಾಗಿ ನಿಂತು ನಮಗೆ ಅನುದಿನದ ಬದುಕಿನಲ್ಲಿ ಹೇಗೆ ಛೇಡಿಸುತ್ತದೆ ಎಂದು ಮಾರ್ಮಿಕವಾಗಿ ಬರೆದಿದ್ದಾರೆ.
    ಕಾಲ ಎನ್ನುವ ಕವನದಲ್ಲಿ ಕಾಲ ಎಂದೂ ಯಾರೂ ಹೇಳಿದರೂ ನಿಲ್ಲದೇ ಓಡುವ  ಎಂದೂ ನಿಲ್ಲದ ಕಾಲನ ಆಟವನ್ನು ತುಂಬಾ ಚೆನ್ನಾಗಿ ಚಿತ್ರಿಸಲಾಗಿದೆ.

    Original price was: ₹60.00.Current price is: ₹36.00.
    Add to basket
  • -40%

    ಶ್ರೀ ಉತ್ತರಾದಿಮಠ

    0

    ಶ್ರೀ ಉತ್ತರಾದಿಮಠ  :

    ಶ್ರೀ ಮಜ್ಜಗದ್ಗುರು ಶ್ರೀ ಮನ್ಮಧ್ವಾಚಾರ್ಯರ ಮೂಲಮಹಾ ಸಂಸ್ಥಾನ, ಸರ್ವಜ್ಞ ಪೀಠ – ಶ್ರೀ ಉತ್ತರಾದಿಮಠ ಸಂಕ್ಷಿಪ್ತ ಪರಿಚಯ ಈ ಕೃತಿಯಲ್ಲಿದೆ. ಇದನ್ನು ಕೃಷ್ಣ ಕೊಲ್ಹಾರಕುಲಕರ್ಣಿ ಅವರು ರಚಿಸಿದ್ದಾರೆ.

    Original price was: ₹70.00.Current price is: ₹42.00.
    Add to basket
  • -40%

    ಗದುಗಿನ ನಾರಾಯಣರಾವ ಹುಯಿಲಗೋಳ

    0

    ಗದುಗಿನ ಹುಯಿಲಗೋಳ ನಾರಾಯಣರಾವ
    ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ‘ ನಾಡಗೀತೆ ಖ್ಯಾತಿಯ ಶ್ರೀ ಹುಯಿಲಗೋಳ ನಾರಾಯಣರಾವ ಕರ್ನಾಟಕದ ಏಕೀಕರಣ ಚಳುವಳೀಯಲ್ಲಿ ಮನದುಂಭಿ ಪಾಲುಗೊಂಡು ಕನ್ನಡ ಭಾಷೆಯ ಅಭಿವೃದ್ದಿ ಹಾಗೂ ಕನ್ನಡಿಗರಲ್ಲಿ ಸ್ವಂತಿಕೆಯ ಬಗೆಗೆ ಅಭಿಮಾನ ಮೂಡಿಸುವ ಅಭಿಯಾನದಲ್ಲಿ ಬಹುವಿಧಿಯಾಗಿ ಶ್ರಮಿಸಿದರು. ನಾಟಕಗಳನ್ನು ಬರೆದು ಆಡಿಸಿದರು. ಉತ್ತರ ಕರ್ನಾಟಕದಲ್ಲಿ ಸಾಮಾಜಿಕ ನಾಟಕಗಳ ರಚನೆಯಲ್ಲಿ ಮೊದಲಿಗರಾಗಿ ನಾಟಕಗಳ ಮೂಲಕ ಜನಜಾಗೃತಿ ಮಾಡಿದರು. ಶಿಕ್ಷಣ ಪ್ರಸಾರಕ್ಕೆ ಬುನಾದಿ ಹಾಕಿಕೊಡುವಲ್ಲಿ ಪ್ರೇರಕಶಕ್ತಿಯಾದರು . ಗಾಂಧೀಜಿಯವರ ತತ್ವಾದರ್ಶಗಳನ್ನು ತಮ್ಮ ಬದುಕಿನಲ್ಲಿ ಅಂತರ್ಗತಿಸಿಕೊಂಡು ಕರ್ನಾಟಕದ ಏಕೀಕರಣ ಆಂದೋಲನದಲ್ಲಿ ತಮ್ಮ ಪಾಲಿನ ಕರ್ತವ್ಯವನ್ನು ಕಾಯಾ-ವಾಚ-ಮನಸಾ ಮಾಡಿ ವಂದ್ಯರಾಗಿದ್ದಾರೆ.

    Original price was: ₹25.00.Current price is: ₹15.00.
    Add to basket
  • -40%

    ಸುಂದರ ಭೂಮಿ

    0

    ಸುಂದರ ಭೂಮಿ
    (ಕವನ ಸಂಕಲನ)
    ಈ ಕವನಗಳಲ್ಲಿ ತಿಳಿಹಾಸ್ಯವಿದೆ, ಆಳವಾದ ಚಿಂತನ ಮಂಥನಗಳಿವೆ, ಎದೆ ತಲುಪಿ ಮನವರಳಿಸುವ ಸೂಕ್ಷ್ಮ ಸಂವೇದನಾ ಭಾವನೆಗಳಿವೆ, ಸಮಾಜ, ದೇಶದ ಭವಿಷ್ಯದ ಕುರಿತ ದುಗುಡ ಇದೆ, ಸ್ವಾರ್ಥಿಗಳ, ಆಷಾಢಭೂತಿಗಳ ವಿಡಂಬನೆಯಿದೆ. ಕೆಲವೇ ಸಾಲುಗಳಲ್ಲಿ ಓದುಗನನ್ನು ಸುದೀರ್ಘ ಚಿಂತನೆಗೆ ಹಚ್ಚಿ, ಆತ್ಮಾವಲೋಕನ ಮಾಡಿಕೊಳ್ಳುವಂತೆ ಪ್ರೇರೇಪಿಸುವ ಗುಣ ಈ ಕವನಗಳಲ್ಲಿವೆ.

    Original price was: ₹60.00.Current price is: ₹36.00.
    Add to basket
  • -40%

    ಸಂಗೀತ ಸಮ್ಮೋಹಿನಿ

    0

    ಸಂಗೀತ ಸಮ್ಮೋಹಿನಿ :
    (ವೈಜ್ಞಾನಿಕ ಕಾದಂಬರಿ)

    ೨೦೨೦ರ ಸುಮಾರಿಗೆ ಕಂಪ್ಯೂಟರ್ ವಿಜ್ಞಾನ ಸ್ಥಿತ್ಯಂತರ ಪಡೆಯುತ್ತದೆ. ದ್ವಿಮಾನ (ಬೈನರಿ) ಬದಲು ತ್ರಿಮಾನ ಪದ್ಧತಿಯನ್ನು ಅಳವಡಿಸಿದಾಗ ಕಂಪ್ಯೂಟರುಗಳು ಸೃಜನಾತ್ಮಕತೆಯನ್ನು ಮೈಗೂಡಿಸಿಕೊಳ್ಳುತ್ತವೆ . ಮನುಷ್ಯರೊಂದಿಗೆ ಪೈಪೋಟಿಗಿಳಿಯುತ್ತವೆ. ಸಂಗೀತ ಕ್ಷೇತ್ರವು ಇದಕ್ಕೆ ಹೊರತಾಗುವುದಿಲ್ಲ. ಒಂದು ಡೂರೋ ‘ಸಮ್ಮೋಹಿನಿ‘ ರಾಗವನ್ನು ಸೃಷ್ಟಿಸಿ ಪ್ರಸ್ತುತಪಡಿಸುತ್ತದೆ. ಸಂಗೀತ ಕ್ಷೇತ್ರದಲ್ಲಿ ಹೊಸ ಅಲೆಯ ಕಂಪನಗಳನ್ನೆಬ್ಬಿಸುವ ಕಾದಂಬರಿ.

    Original price was: ₹80.00.Current price is: ₹48.00.
    Add to basket