- -40%
ಆಳ್ವಾರರು ಮತ್ತು ಹರಿದಾಸರು
0Original price was: ₹50.00.₹30.00Current price is: ₹30.00.ಆಳ್ವಾರರು ಮತ್ತು ಹರಿದಾಸರು
ಹರಿದಾಸರು, ಆಳ್ವಾರುಗಳು, ಶರಣರು, ಉತ್ತರ ಭಾರತೀಯ ಭಕ್ತಿ ಸಾಹಿತ್ಯ ರಚಯಿತರಾದ ಸಂತರು, ಭಕ್ತರು – ಇವರೇ ನಮ್ಮ ಸಂಸ್ಕೃತಿಯನ್ನು ಆಪತ್ಕಾಲದಲ್ಲಿ ವಿದೇಶೀಪ್ರಭಾವ, ಮತಾಂತರ ಹಾವಳಿಯಿಂದ ರಕ್ಷಿಸಿದವರು. ಯೋಗಿಗಳು, ಜ್ಞಾನಿಗಳು. ಪ್ರಕೃತ ಗ್ರಂಥದಲ್ಲಿ ನಾನು ಆಳ್ವಾರರುಗಳ ಮತ್ತು ಹರಿದಾಸರ ಕೊಡುಗೆಗಳು, ಶೈಲಿ ವ್ಯತ್ಯಾಸಗಳು, ಪರಸ್ಪರ ಪ್ರಭಾವಸಾಧ್ಯತೆಗಳನ್ನು ಕುರಿತು ಹಲವು ದಶಕಗಳ ಹಿಂದೆ ಉಡುಪಿಯಲ್ಲಿ ನೀಡಿದ ಉಪನ್ಯಾಸಗಳ ಮರುಮುದ್ರಣವಿದು.
ಎಲ್ಲ ವೇದಾಂತವೂ ಅದಕ್ಕೆ ಪೂರಕವಾದ ತರ್ಕ ವ್ಯಾಕರಣಾದಿ ಶಾಸ್ತ್ರಗಳೂ ಪರಿಪೂರ್ಣತೆ ಹೊಂದಿ, ಪರಿಸಮಾಪ್ತಿ, ಸಮಗ್ರ ಪ್ರತ್ಯಕ್ಷಾನುಭವದ ರೂಪದಲ್ಲಿ ಉಪಾಸಕನಿಗೆ ದೊರಕುವುದೇ “ಯೋಗ”ದಲ್ಲಿ. ಹಾಗೆಂದರೆ ಬರೀ “ಆಸನ”ಗಳಲ್ಲ, ದೇಹ ವ್ಯಾಯಾಮ ಅಲ್ಲ. ಅಷ್ಟಾಂಗ ಯೋಗವಿಜ್ಞಾನಕ್ಕೇ ಭಕ್ತಿ ಎಂದು ಬೇರೊಂದು ಹೆಸರು. ಪಾತಂಜಲಯೋಗಕ್ಕೂ ಪೂರ್ವದ್ದು ಅಧ್ಯಾತ್ಮ ವೈದಿಕ ಯೋಗ. “ಮನಸ್ಸನ್ನು ದೇವರಿಂದ ತುಂಬುವುದೇ ಯೋಗ”. (ಯುಜ್ ಸೇರಿಸುವುದು). ಮನಸ್ಸನ್ನು “ಖಾಲಿ” ಮಾಡುವುದಲ್ಲ!
- -40%
ಭಾರತ, ಇಸ್ಲಾಂ ಮತ್ತು ಗಾಂಧಿ
0Original price was: ₹150.00.₹90.00Current price is: ₹90.00.ಭಾರತ, ಇಸ್ಲಾಂ ಮತ್ತು ಗಾಂಧಿ:
ಶ್ರೀ ಅರವಿಂದರ ಭವಿಷ್ಯವಾಣಿ
ಮತ್ತು ಇತರ ಲೇಖನಗಳು
ಗಾಂಧಿಯವರ ಮೇಲೂ ಹೆಚ್ಚು ಬೆಳಕು ಚೆಲ್ಲುವ, ದಿಗ್ದರ್ಶಕವಾದ ಸೂಕ್ತ ಲೇಖನಗಳು ಎಂದು ಭಾವಿಸುತ್ತೇನೆ. ಈಗ ನಮ್ಮೆದುರು ಇರುವುದು ರಾಷ್ಟ್ರ ರಕ್ಷಣೆಯ ಮಹಾ ಹೊಣೆ. ಅದಕ್ಕೆ ವಿಘ್ನವಾಗಿರುವ ಎಲ್ಲ ದುಷ್ಟ ವಿಚಾರಗಳನ್ನೂ, ಅಂಥ ಪರಂಪರೆಗಳನ್ನೂ, ಅವುಗಳನ್ನು ಹುಟ್ಟು ಹಾಕಿದವರನ್ನೂ ನಿರ್ದಾಕ್ಷಿಣ್ಯವಾಗಿ ಬಯಲು ಮಾಡಿ, ಅವುಗಳನ್ನು ಮೆಟ್ಟಿಯೇ ನಾವು ಮುಂದೆ ನಡೆದ ಹೊರತು ನಮಗೆ ಭವಿಷ್ಯವಿಲ್ಲ. ಕಣ್ಣು ಮುಚ್ಚಿ ಒಪ್ಪುವ, ಯಾರನ್ನೂ ಪೂಜಿಸುವ ಅಂಧಶ್ರದ್ಧೆ ಭಾರತೀಯ ಪರಂಪರೆಗೆ ದೂರವಾದುದು. - -40%
ತಲೆಬುರುಡೆ ಬಿಡಿಸಿದ ಕೊಲೆ ರಹಸ್ಯ
0Original price was: ₹175.00.₹105.00Current price is: ₹105.00.ತಲೆ ಬುರುಡೆ
ಬಿಡಿಸಿದ ಕೊಲೆ ರಹಸ್ಯ
ಮೂಲ : ಶ್ರೀ ಕೆ. ರಾಮಯ್ಯ ರೈ
ಅನುವಾದ: ಕೆದಂಬಾಡಿ ಜತ್ತಪ್ಪ ರೈ
ಸಮಾಜದ ಈ ಸ್ವಾಸ್ಥ್ಯ ಕಾಪಾಡಲು ನಾವೇ ಪೊಲೀಸ್ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಪೊಲೀಸರು ನಾಗರಿಕರ ಸ್ನೇಹಿತರಾಗಿದ್ದರೆ ಅದರಿಂದ ಎಲ್ಲರಿಗೂ ಹಿತ. ಒಳ್ಳೆಯ ಪೊಲೀಸ್ ಅಧಿಕಾರಿಗಳಿಗೆ ಯಾವತ್ತೂ ಜನರ ನೈತಿಕ ಬೆಂಬಲ ಸಿಕ್ಕಿಯೇ ಸಿಗುತ್ತದೆ. ಪೊಲೀಸರೇ ನಾಗರಿಕರ ಸಹಕಾರ ಪಡೆಯದೆ ದೂರ ಸರಿದರೆ ಈ ಮಾತು ವಿರೋಧಾಭಾಸದ್ದು ಅನಿಸುತ್ತದೆ.
ಆದರೆ ನಮ್ಮ ನಡುವೆ ಶ್ರೀ ಕೆ. ರಾಮಯ್ಯ ರೈ ಅವರಂಥ ದಕ್ಷ, ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳೂ ಇದ್ದರು. ಅವರ ಅನುಭವ ನೆನಪುಗಳೇ ಇಂದಿನವರಿಗೆ ಆದರ್ಶವಾಗಲಿ. ಅವರ ಸ್ವಾನುಭವದ ಸತ್ಯಕಥೆ ‘ತಲೆಬುರುಡೆ’ ಕಾದಂಬರಿ ರೂಪದಲ್ಲಿ ಸ್ವಾರಸ್ಯಕರವಾಗಿ ಹರಿದು ಬಂತು.