-
-40%
ಒಂದು ತುತ್ತಿನ ಕತೆ
0ಕೃಷಿ ಪ್ರವಾಸ ಕಥನ ಮೂಲಕ ಅನ್ನದ ಅರಿವು ಬಿತ್ತುವ ವಿಶೇಷ ಪ್ರಯತ್ನವಿದು. ರಾಜ್ಯದ ಮೂಲೆ ಮೂಲೆಯ ಕೃಷಿ ನೆಲೆಯಿಂದ ಎತ್ತಿ ತಂದ ಜ್ಞಾನ ದಾಸೋಹ ಇಲ್ಲಿದೆ.
-
-40%
-
-40%
ಕಾಡು ತೋಟ
0ರಾಸಾಯನಿಕ ವಿಷವರ್ತುಲದಲ್ಲಿ, ಏಕಜಾತಿಯ ತೋಟಗಾರಿಕೆಯಲ್ಲಿ ಬಳಲಿದವರ ಮನಸ್ಸು ಬದಲಿಸುವ ಶಕ್ತಿ ಸಸ್ಯವೈವಿಧ್ಯದ ಕಾಡುತೋಟಕ್ಕಿದೆ. ಸಾವಯವದ ಸಹಜತೆಯನ್ನು ಕಳವೆಯ ಕಾಡು ಕಣ್ಣಲ್ಲಿ ವಿವರಿಸುವ ಶಿವಾನಂದರ ಈ ಕೃತಿ ನಾಳಿನ ಕೃಷಿ ಬದುಕಿಗೆ ಬೆಳಕು. ಕಾಡುತೋಟದ ಆಸಕ್ತರಿಗೆ ಕೈದೀವಿಗೆ.
-
-40%
ಜೀವ ನದಿಗಳ ಸಾವಿನ ಕಥನ
0ನದಿ ಸಂರಕ್ಷಣೆಗೆ ಶ್ರಮಿಸುತ್ತಿರುವ ಜಲಮಿತ್ರರಿಗೆ ರಾಜ್ಯದ ನದಿ ಪರಿಸರ ಪರಿಸ್ಥಿತಿ ಕುರಿತ ಪುಸ್ತಕ. ನದಿ ನೋಡಲು ಇರುವ ಅವಕಾಶಗಳನ್ನು ಇಲ್ಲಿ ವಿವಿಧ ಮುಖಗಳಲ್ಲಿ ಗಮನಿಸಬಹುದು ಜೀವ ನದಿಗಳನ್ನು ಮರೆತು ಹೆದ್ದಾರಿ ವೇಗದ ಅವಸರದಲ್ಲಿ ಓಡುವವರನ್ನು ಸ್ವಲ್ಪ ನಿಲ್ಲಿಸಿ ನದಿಯ ಮಾತನ್ನು ಎದೆಗೆ ತಲುಪಿಸುವ ಪುಟ್ಟ ಪ್ರಯತ್ನ ಶಿವಾನಂದ ಕಳವೆ ಅವರು ಮಾಡಿದ್ದಾರೆ.
-
-40%
ಮಧ್ಯಘಟ್ಟ
050-80 ವರ್ಷಗಳ ಹಿಂದಿನ ಘಟನೆಗಳು, ಸ್ವಾರಸ್ಯಕರ ಪ್ರಸಂಗಗಳಿಂದ ‘ಮಧ್ಯಘಟ್ಟ’ ಕಾಡಿನೂರಿನ ಕಾದಂಬರಿ ರೂಪುಗೊಂಡಿದೆ. ಮಧ್ಯಘಟ್ಟ ಕಾಲು ಶತಮಾನಗಳಿಂದ ಒಡನಾಡಿದ ಹಳ್ಳಿ ಬದುಕಿನ ಕುರಿತ ಕಾದಂಬರಿ. ಕಾಡು, ಸಸ್ಯ, ನದಿ ನೀರಿನಲ್ಲಿ ದಾರಿಯೇ ಇಲ್ಲದ ಕಾಲದ ಕಾಡು ಬದುಕನ್ನು ಕಣ್ಣೆದುರು ಹಿಡಿಯುವ ಮಹತ್ವದ ಕಾರ್ಯ ಮಾಡಿದ್ದಾರೆ. ಸಾಮಾಜಿಕ ಇತಿಹಾಸದ ಅದ್ಭುತ ಚಿತ್ರಣ ಇಲ್ಲಿದೆ.
-
-40%
ರಾಜಧರ್ಮ ರಾಜನೀತಿ: ೨
0ರಾಜಧರ್ಮ-ರಾಜನೀತಿ:೨
ಈ ಪುಸ್ತಕದ ಶೀರ್ಷಿಕೆ ಓದಿ `ರಾಜಮಹಾರಾಜರ ಕಾಲದ ಹಳೆಯ ನೀತಿಯ ಶಾಸ್ತ್ರಪುಸ್ತಕ’ ಎಂದು ಯಾರೂ ಮೂಗುಮುರಿಯಬೇಕಿಲ್ಲ. ಆಳುವವರು ಆರಿಸಿ ಬಂದರೂ, ಪಾರಂಪರ್ಯವಾಗಿ ಹಕ್ಕಿನಿಂದ ಅಧಿಕಾರಕ್ಕೆ ಬಂದರೂ, “ಆಳಿಕೆ” ಎಂಬುದಿರುತ್ತದಲ್ಲ? ಅದಕ್ಕೆ ನೀತಿ, ನಿಯಮ, ಸಂಯಮ, ವಿಧಾನ, ಅಲ್ಲಿ ನ್ಯಾಯ, ಧರ್ಮ ಪರಿಪಾಲನೆ, ವ್ಯವಸ್ಥೆಯ ರಕ್ಷಣೆ, ಪ್ರಜಾಹಿತ ಎಂಬ ಕವಚಗಳೋ, ಕಡಿವಾಣಗಳೋ ಬೇಕಲ್ಲ? ಸಂವಿಧಾನ ಇರುತ್ತದೆ, ಮೀರುವವರು ಆಡಳಿತಾರೂಢರೇ ಆದರೇನು ಗತಿ? ಐಪಿಸಿ ಎಂಬ ಅಪರಾಧ ಸಂಹಿತೆ ಇರುತ್ತದೆ. ಆದರೆ ಕ್ರಿಮಿನಲ್ ಗಳೇ ಆರಿಸಿಬರುತ್ತಾರಲ್ಲ? ಯಾವ ಸಂಹಿತೆ ಇವರಿಗೇನು ಮಾಡಿದೆ? ಈ ನಿಟ್ಟಿನಲ್ಲಿ ಸರಿ-ತಪ್ಪು-ವಿವೇಕಗಳನ್ನು ಜಾಲಾಡಿ ಬರೆಯುವುದಕ್ಕೆ ನನ್ನ ಅಂಕಣಕ್ಕೆ ಈ ಶೀರ್ಷಿಕೆಯನ್ನಾರಿಸಿಕೊಂಡೆ. ಆ ಅಂಕಣಗಳನ್ನು ಈ ಪುಸ್ತಕ ಒಳಗೊಂಡಿದೆ.
-
-40%
ದೇವಕಿಯ ಚಿಂತನೆಗಳು
0ದೇವಕಿಯ ಚಿಂತನೆಗಳು
ವಸುದೇವ, ದೇವಕಿ, ಯಶೋದೆ, ನಂದ, ಕಂಸ, ಮಾಲತಿ, ಮಾಧವಿ, ವಾಸಂತಿ, ಭದ್ರ, ವಜ್ರ, ಬಾಹು ಇಲ್ಲಿ ಪಾತ್ರಧಾರಿಗಳು. ಎಲ್ಲರೂ ಕುಣಿಯುವುದು ಕೃಷ್ಣನ ಸುತ್ತವೇ. ಅವನೇ ಸೂತ್ರಧಾರ, ಪ್ರಧಾನ ಪಾತ್ರಧಾರಿ ಸಹ.
-
-40%
ಡಬ್ಲ್ಯು. ಬಿ. ಯೇಟ್ಸ್ ನ ಕಾವ್ಯದ ಮೇಲೆ ಭಾರತೀಯ ತತ್ತ್ವಶಾಸ್ತ್ರ ಪ್ರಭಾವದ ಸಾಧ್ಯತೆ
0ಡಬ್ಲ್ಯು. ಬಿ . ಯೇಟ್ಸ್ ನ ಕಾವ್ಯದ ಮೇಲೆ ಭಾರತೀಯ ತತ್ತ್ವಶಾಸ್ತ್ರ ಪ್ರಭಾವದ ಸಾಧ್ಯತೆ
ಯೇಟ್ಸನಿಗೆ ಭಾರತೀಯ ಪ್ರಭಾವಮೂಲಗಳು ಕೇವಲ ಕಾವ್ಯಸಾಮಗ್ರಿಯ ಮಟ್ಟದಲ್ಲಿ ಉಳಿದರೆ, ಎಲಿಯಟ್ಟನಿಗೆ ಅವು ತತ್ತ್ವನಿಷ್ಕರ್ಷೆಯ, ಜೀವನದರ್ಶನದ ಸ್ಫೂರ್ತಿಯೂ ಆಗಿದೆಯೆಂದು ಕಂಡಮೇಲೆ ವೇದೋಪನಿಷತ್ತುಗಳ ಬೆಲೆ, ಪಾಶ್ಚಾತ್ಯ ಸಂಸ್ಕೃತಿಯ ಮೋಹದ ಸುಳಿಯಲ್ಲಿ ಸಿಕ್ಕ ಅಂದಿನ ನನಗೆ ಅಪಾರವಾಗಿ ಕಂಡು, ನನ್ನನ್ನೇ ನಾನು ಅರಿಯುವ ಪ್ರಯತ್ನದಲ್ಲಿ ಈ ಕವಿದ್ವಯರ ಪಾತ್ರವನ್ನು ಚಿರಸ್ಮರಣೀಯವನ್ನಾಗಿಸಿದೆ. ನಷ್ಟಪ್ರಾಯನಾಗಿದ್ದ ನನ್ನನ್ನು ಇಂದಿನ ಸ್ಥಿತಿಗೆ ತಲುಪಿಸಿರುವ ಈ ಕವಿಗಳನ್ನು ಎಂದೆಂದೂ ಮರೆಯಲಾರೆ; ಇವರ ವಿಷಯಕ ನಿಬಂಧವನ್ನು ಬರೆದ ನನಗೆ ದೊರೆತ ಈ ಫಲ, ಡಾಕ್ಟೊರೇಟ್ಗಿಂತ ಅಮೌಲ್ಯವಾದ ಫಲ, ಇದೇ! ಈ ಮಾತನ್ನು ಧನ್ಯತೆಯಿಂದ ಬರೆಯುವ ಭಾಗ್ಯ ನನ್ನದು. ನಾಲ್ಕುಜನಕ್ಕೆ ಈ ಅಲ್ಪಕೃತಿಯಿಂದ ಪ್ರಯೋಜನವಾದರೆ, ಮುಂದೆ ಎಲಿಯಟ್ಟನ ವಿಷಯಕ್ಕೂ, ಇತರ ಆಂಗ್ಲ ಕವಿಗಳ ಬಗೆಗೂ ಈ ಮಾದರಿಯ ಗ್ರಂಥಗಳನ್ನು ಬರೆಯುವ ವಿಚಾರವಿದೆ. ಗೆಳೆಯ ಪ್ರೊ. ಶಿವಾನಂದ ಗಾಳಿಯವರು ಈ ಬಗೆಗೆ ಹಗಲೆಲ್ಲ ಪ್ರೋತ್ಸಾಹಿಸುತ್ತ ಬಂದಿದ್ದಾರೆ. ಈ ಪುಸ್ತಿಕೆಗೆ ಸಿಗುವ ಪುರಸ್ಕಾರ, ಪ್ರೋತ್ಸಾಹ ಅದನ್ನು ನಿರ್ಧರಿಸಲಿದೆ.
-
-40%
ಗಾಂಧಿಯನ್ನು ನಿಜವಾಗಿ ಕೊಂದವರು ಯಾರು?
0ಗಾಂಧಿಯನ್ನು ನಿಜವಾಗಿ ಕೊಂದವರು ಯಾರು?
ನಾನು ರಾಜಕಾರಣಿಯೂ ಅಲ್ಲ. ರಾಜಕಾರಣ ವಿಶ್ಲೇಷಣೆಯು ನನ್ನ ಪ್ರಧಾನ ಕ್ಷೇತ್ರವೂ ಅಲ್ಲ. ಸಾಹಿತ್ಯದ ಅಧ್ಯಯನ, ಅದರ ಪ್ರಯೋಜನವನ್ನು ಸಾರ್ವಜನಿಕರಿಗೆ ರಾಷ್ಟ್ರೀಯ ಹಿತದೃಷ್ಟಿಯಿಂದ ಬಡಿಸುವ ಕಾಯಕ, ನಿರಂತರ ಚಿಂತನ-ಋಷಿಮುನಿಗಳ ಪ್ರಾಚೀನ ಪರಂಪರೆಯಲ್ಲಿ ಬಂದ ಲೋಕ ಸಂಗ್ರಹ ವಿಚಾರಗಳ, ಭಾವನೆಗಳ, ಅಧ್ಯಾತ್ಮಶಕ್ತಿಯ ಜಾಗೃತಿಗಳ ಕಾಯಕವನ್ನು ನನಗೆ ಸಾಧ್ಯವಾದ ಮಟ್ಟಿಗೆ ಮಾಡಿಕೊಂಡು ಲೋಕಕ್ಕೆ ಸ್ಪಂದಿಸುವ ಒಬ್ಬ ನಿವೃತ್ತ ಪ್ರಾಧ್ಯಾಪಕ. ಇದೆಲ್ಲ ನಿಮಗೆ ಗೊತ್ತೇ ಇದ್ದೂ ನಾನಿಲ್ಲಿ ನೆನಪಿಸುವ ಅಗತ್ಯ ಏಕೆ ಇದೆ? ಎಂದು ಹೇಳಲೇ ಬೇಕಾಗಿದೆ.
ಅನೇಕ ಮುಗ್ಧ ಭಾರತೀಯರಂತೆ ನಾನೂ ಮ|| ಗಾಂಧಿಯವರನ್ನು ಮೆಚ್ಚಿಕೊಂಡ ಕಾಲ ಇತ್ತು. ‘ಗಾಂಧಿ, ನೆಹ್ರೂ’ ಎಂದೊಡನೆ `ಜೈ ಎನ್ನುವ ಬಾಲ್ಯ ಇತ್ತು. ೧೯೫೦ರ ಸುಮಾರಿಗೆ ನೆಹ್ರೂ ಭ್ರಮೆ ಬಿಡಲಾರಂಭಿಸಿತ್ತು. ಈ `ನೆಹ್ರೂ’ ಮೂಲ ಯಾವುದು? `ಇವರು ನಿಜ ರಾಷ್ಟ್ರ ಭಕ್ತರೇ? ಸ್ವತಂತ್ರ ಚಿಂತಕರೇ? ತ್ಯಾಗಶೀಲರೇ? ಶೀಲವುಳ್ಳ, ವಿಶ್ವಸನೀಯ ನಾಯಕರೇ?’ ಎಂದು ಪ್ರಶ್ನೆ ಕೇಳಿಕೊಳ್ಳುತ್ತಾ ಹೋದಂತೆ, ಓದು ವ್ಯಾಪ್ತಿ, ಚಿಂತನ, ಚರ್ಚೆ, ಸಮಾಲೋಚನೆಗಳು ನಡೆಯುತ್ತಾ ಬಂದಂತೆ, `ಇವರು ಗಾಂಧಿ ಪ್ರಭಾವದ ದುರ್ಬಳಕೆಯ ಮಹಾಸ್ವಾರ್ಥಿ, ಎಷ್ಟೂ ಭಾರತೀಯತೆಯ ಪರಿಚಯವಿಲ್ಲದ ಢೋಂಗೀ ರಾಜಕಾರಣಿ’ ಎಂಬುದಕ್ಕೆ ಅವರದೇ ನಡೆವಳಿಕೆಗಳು, ರಾಷ್ಟ್ರಾವನತಿ, ತಪ್ಪು ಹೆಜ್ಜೆಗಳು ಪ್ರಮಾಣೀಕರಿಸುತ್ತಾ ಬಂದವು. ಘಾತಕತನ, ಸಾಕ್ಷಿಗಳ ಕುಕ್ಕುವ ಬೆಳಕಿನಲ್ಲಿ ದೇವರೆಂದು ಭಾವಿಸಿದ್ದವನಿಗೆ ದೆವ್ವದ ಸಾಕ್ಷಾತ್ಕಾರವಾಯ್ತು. ಆಗುತ್ತಲೇ ಇದೆ. ಈ ಬೆಳಕಿನಲ್ಲೇ `ಸುಭಾಷರ ಕಣ್ಮರೆ’ ಪುಸ್ತಕವನ್ನು ನಾನು ಬರೆದದ್ದು. ರಾಮಾಯಣ, ಮಹಾಭಾರತ, ಭಾಗವತಗಳ ಆಸುರೀ ಶಕ್ತಿಗಳು, ಅವುಗಳ ಶಕ್ತಿ, ಹಿಡಿತ, ಅವುಗಳ ಬೇರು, ವಿಷಫಲಗಳು ಈಗಣ ಭಾರತದಲ್ಲೂ ಕಾಣಲಾರಂಭಿಸಿ, ನಾನು ಕ್ಷೇತ್ರಾಂತರದಲ್ಲೂ ದುಷ್ಟ ಪಾತ್ರಗಳ ಪರಿಚಯಕ್ಕೆ ಕೈ ಹಾಕುವ ಕೆಲಸಕ್ಕೆ ಬಂದುದು ಆಕಸ್ಮಿಕವಾಗಿ ಕಂಡರೂ ದೈವಪ್ರೇರಣೆಯೂ ಕಾಣಲಾರಂಭಿಸಿದೆ.