ಚೌಕಟ್ಟಿನಾಚೆ
ಕಥಾ ಸಂಕಲನ
ಉಮೇಶ್ ದೇಸಾಯಿ ಆಧುನಿಕ ಕಾಲದ ತಲ್ಲಣಗಳನ್ನು ಕತೆಗಳ ಮೂಲಕ ಹಿಡಿಯಲು ಹೊರಡುತ್ತಾರೆ. ಅವರದು ಅಪಾರ್ಟ್ ಮೆಂಟು ಬದುಕಿನ ಅಪರೂಪದ ಕಥಾ ಪ್ರಪಂಚ. ಅಪಾರ್ಟುಮೆಂಟು ಬದುಕು ಅನ್ನುವ ಪದವೇ ನಗರಾಧುನಿಕ ಜೀವನಶೈಲಿಯನ್ನೂ ಅದರ ಏಕತಾನತೆ, ಒತ್ತಡ ಮತ್ತು ಏಕಾಂತಗಳನ್ನು ಸೂಚಿಸುತ್ತದೆ. ನಗರ ಜೀವನದ ಅತಿದೊಡ್ಡ ಸಂಕಟವೆಂದರೆ ಏಕಾಂತ, ಕಡಿದ ಕೊಂಡಿಗಳು, ಚದುರಿದ ಸಂಬಂಧಗಳು ಮತ್ತು ಬೆಸೆಯಲಾಗದ ಮನಸ್ಸುಗಳು ಎಂಬುದನ್ನು ಹೇಳುವಂಥ ಅನೇಕ ಕತೆಗಳು ಈ ಸಂಕಲನದಲ್ಲಿವೆ.