ಸುಮಾರು ಎಂಭತ್ತು-ತೊಂಬತ್ತು ವರ್ಷಗಳ ಹಿಂದೆ ಇಡೀ ರಾಷ್ಟ್ರವೇ ಸ್ವಾತಂತ್ರ್ಯಕ್ಕಾಗಿ ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಒಂದಾಗಿ ಹೋರಾಡುತ್ತಿತ್ತು. ಈ ವಿಷಯದಲ್ಲಿ ಕರ್ನಾಟಕವೂ ಹಿಂದೆ ಬಿದ್ದಿರಲಿಲ್ಲ. ರಾಜಕೀಯದಷ್ಟೇ ಸಾಂಸ್ಕೃತಿಕವಾಗಿಯೂ ತನ್ನ ಹಿರಿಮೆಯನ್ನು ಕರ್ನಾಟಕ ಮೆರೆದಿತ್ತು. ಉತ್ತರ ಕರ್ನಾಟಕದಲ್ಲಿ ಅನೇಕ ಹಿರಿ-ಕಿರಿಯ ಲೇಖಕರು, ಬರಹಗಾರರು ತಮ್ಮ ಬರಹಗಳ ಮೂಲಕ ಜನ ಜಾಗೃತಿಯಲ್ಲಿ ತೊಡಗಿದ್ದರು. ದ.ರಾ. ಬೇಂದ್ರೆ ಪ್ರಮುಖರಲ್ಲಿ ಒಬ್ಬರು. ತಮ್ಮ ಸಮಾನ ಮನಸ್ಕರ ಜತೆ ಸೇರಿಕೊಂಡು ಗೆಳೆಯರ ಗುಂಪು ಸ್ಥಾಪಿಸಿದರು. ಈ ಗೆಳೆಯರ ಗುಂಪಿನ ಸಾಧನೆ ಇಂದಿಗೂ ಒಂದು ಇತಿಹಾಸ. ಸ್ವಲ್ಪೇ ದಿನ ಕಾರ್ಯ ವಹಿಸಿದರೂ ಗೆಳೆಯರ ಗುಂಪು ಸಾಂಸ್ಕೃತಿಕವಾಗಿ ಬಹು ದೊಡ್ಡ ಹೆಸರನ್ನು ಮಾಡಿತು. ಈ ಗುಂಪಿನ ಸದಸ್ಯರೆಲ್ಲ ನಂತರ ದಿನಗಳಲ್ಲಿ ಪ್ರಖ್ಯಾತ ಲೇಖಕರಾದರು. ಸಾಧನೆ ಇಲ್ಲಿಯೇ ನಿಲ್ಲಲಿಲ್ಲ. ದ.ರಾ. ಬೇಂದ್ರೆ ನಂತರದ ದಿನಗಳಲ್ಲೂ ನೂರಾರು ಲೇಖಕರಿಗೆ ಮಾರ್ಗದರ್ಶಕರಾದರು. ಸ್ವಧರ್ಮ ಮತ್ತು ಜಯ ಕರ್ನಾಟಕ ಪತ್ರಿಕೆಗಳು ಗೆಳೆಯರ ಗುಂಪಿನ ಪತ್ರಿಕೆಗಳು. ನಾಡ ಹಬ್ಬ ಆಚರಿಸಿದ ಹೆಮ್ಮೆ ಗೆಳೆಯರ ಗುಂಪಿಗೆ. ಈ ಎಲ್ಲ ಸಾಧನೆ, ಆದರ್ಶಗಳೇ ಮನೋಹರ ಗ್ರಂಥಮಾಲೆಯ ಸ್ಥಾಪನೆಗೆ ಕಾರಣವಾದವು.
- -10%
ತೇರು….
0Original price was: ₹170.00.₹153.00Current price is: ₹153.00.ತೇರು ಕಾದಂಬರಿಯನ್ನು ಓದಲಾರಂಭಿಸಿದಾಗ ಒಂದನೇ ಭಾಗದಲ್ಲಿ ಪತ್ರಕರ್ತ ಪಾಟೀಲರಿಗೆ ಧರಮನಟ್ಟಿ ಸ್ವಾಂವಪ್ಪಜ್ಜ, ಧರಮನಟ್ಟಿಯ ದೇಸಗತೀ ಕಥೀ ಹೇಳಲಾರಂಭಿಸಿದ. ಅದರ ಜೊತಿಗೆ ನಾಳೆ ನಮ್ಮೂರಾಗ ವಿಠ್ಠಲ ದೇವರ ತೇರ ಇದೆ ನೀವು ಬರಲೇ ಬೇಕು ಎಂದು ಹಠ ಹಿಡಿದು ಕರದುಕೊಂಡು ಹೋದ. ಅಂದು ರಾತ್ರಿ ಅಲ್ಲಿ ಗೊಂದಲಿಗ್ಯಾರು ಕಥಿ ಹೇಳತಾರ ಕೇಳುಣ ನಡಿರಿ ಎಂದು ಪಾಟೀಲರನ್ನು ಕರೆದುಕೊಂಡು ಹೋದ. ವಿಠಲ ದೇವರ ತೇರಿನ ವರ್ಣನೆಯನ್ನ ಆರಂಭಿಸಿ ತೊಗಲು ಬೊಂಗೆ ಆಡಿಸೋ ದ್ಯಾಮಣ್ಣನ ಮಗನ ಮರಣದವರೆಗೂ ಗೊಂದಲಿಗ್ಯಾರ ಪದದ ಧಾಟಿಯಲ್ಲೇ ಸಂಪೂರ್ಣ ಕಥೆ ಹೇಳಿದ್ದು ಕಾದಂಬರಿಗೆ ಬಹು ವಿಶೇಷ ಮೆರಗನ್ನು ಕೊಟ್ಟಿದೆ.
ಕಾದಂಬರಿಯಲ್ಲಿ ತೇರು ತಯಾರಿಸಿದ ನಂತರ ಮೊದಲ ತೇರು ಏಳೆಯಲು ಜನರು ಸೇರಿದಾಗ ಒಂಚೂರ ನೆಲಬಿಟ್ಟು ಕದಲೋದಿಲ್ಲ. ಅದಕ್ಕೆ ಪುರೋಹಿತರನ್ನ ವಿಚಾರಿಸಲಾಗಿ ಅದಕ್ಕೆ ಕೆಳಜಾತಿಯ ಮನುಜನ ಬಲಿ ಬೇಕು ಎಂದು ಕೇಳುತ್ತಿದೆ ತೇರು ಎಂದ ಹೇಳುತ್ತಾನೆ ಪುರೋಹಿತ. ಊರಲ್ಲಿ ಸುದ್ಧಿ ಹರಡಿ ಬೆಳಗಾಗುದರೊಳಗ ಎಲ್ಲ ಕೀಳುಕುಲದ ಜನಾಂಗ ಊರು ಬಿಟ್ಟು ಹೊರಟೋಗಿದ್ದರು. ಒಬ್ಬನೇ ಒಬ್ಬನು ಗೊಂಬೀರಾಮರಾ ದ್ಯಾವಯ್ಯ ದೇವಾಲಯದ ಆವರಣದಲ್ಲಿ ಸಿಕ್ಕನು. ಡಂಣಾಯಕ ಹಾಗು ಅವನ ಹೆಂಡತಿ ಸೇರಿ ದ್ಯಾವಯ್ಯನಿಗೆ ೮ ಎಕರೆ ಜಮೀನು ನೀಡುವುದಾಗಿ ಆಸೆ ಚೆಲ್ಲಿ ಒಬ್ಬ ಮಗನನ್ನ ತೇರಿಗೆ ಬಲಿಕೊಡಲು ತಯಾರಿ ಮಾಡಿದರು. ದ್ಯಾವಯ್ಯನ ಹೆಂಡತಿ ಪಾರೋತೆವ್ವ ಗೋಳಾಡಿ ಅಳಲು ಪ್ರಾರಂಭಿಸುತ್ತಾಳೆ. ಗಂಡ ಅವಳನ್ನು ಬಡಿದು ಹೊಡೆದು ದೇವರಿಗೆ ಮಗನನ್ನ ಅರ್ಪಿಸೋಣ ಎಂದು ಹೇಳಿದನು. ಹಣದ ಆಸೆಗೋ ಏನೋ ಅಂದು ಮಡದಿಯ ಮಾತಿಗೆ ಬೆಲೆ ಕೊಡದೇ ಬಡಿದು ತೇರಿಗೆ ಮಗನನ್ನ ಅರ್ಪಿಸಿದರು. ಅಂದಿನಿಂದ ಇಂದಿನವರೆಗೂ ದ್ಯಾವಪ್ಪನ ಮನೆತನದವರೇ ಬಂದು ರಕ್ತತಿಲಕ ಅಂದ್ರೆ ಹಣೆಯನ್ನು ತೇರಿನ ಗಾಲಿಗೆ ಗುದ್ದಿ ರಕ್ತಾ ಬಂದ ನಂತರ ಆ ರಕ್ತವನ್ನು ದೇವರಿಗೆ ಹಚ್ಚಿದಾಗ ತೇರು ಮುಂದೆ ಬರ್ತಿತ್ತು ಎಂಬ ವಾಡಿಕೆ ಮುಂದುವರೆದಿತ್ತು.
- -10%
ಕೈಗೆ ಬಂದ ತುತ್ತು
0Original price was: ₹250.00.₹225.00Current price is: ₹225.00.ಕೈಗೆ ಬಂದ ತುತ್ತು
‘ಕೈಗೆ ಬಂದ ತುತ್ತು’ ಆತ್ಮಕಥನದಲ್ಲಿ ಗುರುಪ್ರಸಾದ ತಾವು ವೃತ್ತಿ ಜೀವನದಲ್ಲಿ ಕಂಡ ಹಲವಾರು ಕುತೂಹಲಕಾರಿ ಘಟನೆಗಳನ್ನೂ, ಅಪರಾಧಗಳ ತನಿಖೆಯನ್ನೂ ರೋಚಕವಾಗಿ ಬಣ್ಣಿಸಿದ್ದಾರೆ. ತಾವು ಹತ್ತಿರದಿಂದ ಕಂಡ ರಾಜಮಹಾರಾಜರು, ಪ್ರಧಾನಿಗಳು, ಪತ್ರಕರ್ತರು ಹಾಗೂ ಸಿನಿಮಾ ರಂಗದವರ ವ್ಯಕ್ತಿಚಿತ್ರಗಳನ್ನು ತಮ್ಮ ಸರಳ ಸುಂದರ ಶೈಲಿಯಲ್ಲಿ ಈ ಕೃತಿಯಲ್ಲಿ ದಾಖಲಿಸಿದ್ದಾರೆ.
ಈ ಕೃತಿಯ ಪ್ರತಿ ಪುಟವೂ ರೋಮಾಂಚನಕಾರಿಯಾಗಿದ್ದು, ಗುರುಪ್ರಸಾದರ ಆತ್ಮಕಥನ ಇಂದಿನ ಯುವಪೀಳಿಗೆಗೆ ಪ್ರೇರಣೆಯಾಗುತ್ತದೆ. ಈ ಕೃತಿಯಲ್ಲಿ ಹಾಸ್ಯವಿದೆ. ಗಾಂಭೀರ್ಯವಿದೆ. ಕುತೂಹಲವಿದೆ. ರೋಮಾಂಚನವಿದೆ ಹಾಗೂ ವಿಷಾದವೂ ಇದೆ. ಸಂಗ್ರಹ ಯೋಗ್ಯ ಕೃತಿ ಇದು. - -10%
ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ
0Original price was: ₹600.00.₹540.00Current price is: ₹540.00.ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ
ಕಾವ್ಯಮೀಮಾಂಸೆಯನ್ನು ಕುರಿತಂತೆ ಗಿರಿ ಅವರು ನಡೆಸುವ ವೈಜ್ಞಾನಿಕ ಶೋಧ, ಚಿಂತನೆ ಮಹತ್ವದ ಅಂಶಗಳನ್ನು ಹೊರ ಹಾಕುತ್ತದೆ. ಪ್ರಾಚೀನ ಭಾರತೀಯ ಮೀಮಾಂಸೆಯ ಸಾಧನೆಗಳನ್ನು ಮತ್ತು ಸಮಸ್ಯೆಗಳನ್ನು ಅಥವಾ ಕೊರತೆಗಳನ್ನು ಗಿರಿ ಅವರು ಶೋಧಿಸುತ್ತಾರೆ; ಸ್ಪಷ್ಟ ನಿಲುವಿನಲ್ಲಿ ಅವುಗಳನ್ನು ದಾಖಲಿಸುತ್ತಾರೆ.
- -10%
ಮೆಲುಕು
0Original price was: ₹200.00.₹180.00Current price is: ₹180.00.ಮೆಲುಕು
(ಲೇಖನಗಳು)ಈ ಪುಸ್ತಕವನ್ನು ಗಿರೀಶ ಕಾರ್ನಾಡ ಅವರು ಬರೆದಿದ್ದಾರೆ.
- -10%
ಕಣ್ಣಾ ಮುಚ್ಛೇ…. ಕಾಡೇ ಗೂಡೇ….
0Original price was: ₹250.00.₹225.00Current price is: ₹225.00.ಬಿ ಜಯಶ್ರೀ ಅವರಂತಹ ಶಕ್ತಿಯನ್ನು, ಸ್ವಾಭಿಮಾನಿಯನ್ನು, ಪ್ರತಿಭೆಯನ್ನು ಅಕ್ಷರಗಳಲ್ಲಿ ಬಂಧಿಸುವುದಾದರೂ ಹೇಗೆ? ನಾನು ಈ ಸವಾಲಿಗೆ ಮುಖಾಮುಖಿಯಾದಾಗಲೆಲ್ಲ ನನಗೆ ದೊಡ್ಡ ಬೆಂಬಲ ಮತ್ತು ಬೆನ್ನು ಚಪ್ಪರಿಸುವಂಥಾ ನಂಬಿಕೆಯ ಮಾತುಗಳು ಬಂದದ್ದು ಸ್ವತಃ ಜಯಶ್ರೀ ಅವರಿಂದ.
- -10%
ಶೋಕಚಕ್ರ
0Original price was: ₹60.00.₹54.00Current price is: ₹54.00.ಶೋಕಚಕ್ರ
ಮಹಾತ್ಮಾ ಗಾಂಧಿಯವರ ಚಳವಳಕ್ಕೆ ಪ್ರಾರಂಭವಾದದ್ದು ೧೯೨೦ರಲ್ಲಿ . ೧೯೨೪ರಲ್ಲಿ ೨೦ ನಿಮಿಷಗಳ ವರೆಗೆ ಅವರ ಸಂದರ್ಶವನ್ನು ಪಡೆದಿದ್ದೆ. ರಾಜಕೀಯಕ್ಕಿಂತ ಸಾಮಾಜಿಕ, ಅದಕ್ಕಿಂತ , ಅಂತರಂಗಿಕ ಸುಧಾರಣೆ ಅಗತ್ಯ ಎಂಬುದನ್ನು ಆಗ ನಾನು ಕಲಿತುಕೊಂಡ ಪಾಠ.
ಸ್ವಾತಂತ್ರ್ಯ ಪ್ರಾಪ್ತಿಯ ತರುವಾಯ ನಾನು ಬಹಳ ಆಶೆಯಿಂದ ಪರಿಸ್ಥಿತಿಯನ್ನು ನೋಡುತ್ತಲಿದ್ದೆ. ಯಾವುದೊ ಒಂದು ಕಾರಣಕ್ಕೆ ರಾಜಕೀಯ ಸ್ವಾತಂತ್ರ್ಯದ ಅವಸರವಿದ್ದು ಮಹಾತ್ಮಾಜಿಯವರು ಅದಕ್ಕೆ ಪ್ರಾಶಸ್ತ್ಯವನ್ನು ಕೊಟ್ಟಿದ್ದರು. ಈಗ ಆ ಜಂಜಾಟ ಮುಗಿಯುತ್ತಲ್ಲ? ಸಾವಿರಾರು ವರ್ಷಗಳಿಗೊಮ್ಮೆ ಅವತರಿಸುವ ಭಗವಂತನ ಅಂಶದಂತಿದ್ದ ಮಹಾತ್ಮಾಜಿಯವರಿಂದ ನಿಜವಾದ- ಅಂತರಂಗಿಕ-ಸುಧಾರಣೆ ಜನತೆಯಲ್ಲಿ ಮೂಡುವುದಲ್ಲ? ಹೀಗೆ ಉತ್ಸಾಹಗೊಳ್ಳುತ್ತಿರುವಾಗ ಜನವರಿ ೩೦, ೧೯೮೯ರ ದುರ್ಘಟನೆ ನಡೆದುಹೋಯಿತು. “ಜಗತ್ತಿನ ದೀಪ ನಂದಿತು.”
ಈ ಸಂದರ್ಭದ ಹಿನ್ನಲೆಯಲ್ಲಿ ದೇಶದ ಚುನಾವಣಾ, ಸ್ಥಾನಿಕ ಮುಂದಾಳುಗಳ ಸಾಂಸ್ಕೃತಿಕ ಮಟ್ಟ ಇದನ್ನೆಲ್ಲ ನೋಡಿ ಮೂಡಿದ ಭಾವನೆಗಳೇ ಈ ‘ಶೋಕಚಕ್ರ ‘ ನಾಟಕದಲ್ಲಿ ಮೂಡಿದೆ. ಇಲ್ಲಿಯ ಆಯಾ ಪಾತ್ರಗಳೇ ಪರಿಸ್ಥಿತಿಯನ್ನು ಚನ್ನಾಗಿ ಚಿತ್ರಿಸುವುವು. - -10%
ಬೀಜದೊಳಗಣ ವೃಕ್ಷ
0Original price was: ₹180.00.₹162.00Current price is: ₹162.00.ಬೀಜದೊಳಗಣ ವೃಕ್ಷ
ಶ್ರೀಮತಿ ಗೀತಾ ವಸಂತ ಅವರು ಬೇಂದ್ರೆ ಕಾವ್ಯದ ವಿರಾಟ್ ಸ್ವರೂಪದ ಬಗ್ಗೆ `ಬೀಜದೊಳಗಣ ವೃಕ್ಷ’ ಎಂಬ ಹೆಸರಿನಿಂದ ಅಧ್ಯಯನ ಗ್ರಂಥವೊಂದನ್ನು ಬರೆದು ಪ್ರಸ್ತುತ ಪಡಿಸುತ್ತಿದ್ದಾರೆ. ಈ ವಿಷಯದ ಬಗ್ಗೆ ಅವರು ತುಮಕೂರು ವಿಶ್ವವಿದ್ಯಾಲಯಕ್ಕೆ ಮಹಾಪ್ರಬಂಧವನ್ನು ಸಲ್ಲಿಸಿ ಡಿ.ಲಿಟ್. ಪದವಿ ಪಡೆದಿದ್ದಾರೆ. ಅದನ್ನು ಓದುಗರಿಗೆ ಉಪಯೋಗವಾಗುವ ರೀತಿಯಲ್ಲಿ ಮಾರ್ಪಡಿಸಿ ಕೃತಿ ರಚಿಸಿದ್ದಾರೆ.
- -10%
ತಾವರೆಯ ಬಾಗಿಲು
0Original price was: ₹200.00.₹180.00Current price is: ₹180.00.‘ತಾವರೆಯ ಬಾಗಿಲು’ ಕಾವ್ಯ ಕುರಿತು 40 ಪ್ರಬಂಧಗಳ ಸಂಕಲನ