ಸುಮಾರು ಎಂಭತ್ತು-ತೊಂಬತ್ತು ವರ್ಷಗಳ ಹಿಂದೆ ಇಡೀ ರಾಷ್ಟ್ರವೇ ಸ್ವಾತಂತ್ರ್ಯಕ್ಕಾಗಿ ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಒಂದಾಗಿ ಹೋರಾಡುತ್ತಿತ್ತು. ಈ ವಿಷಯದಲ್ಲಿ ಕರ್ನಾಟಕವೂ ಹಿಂದೆ ಬಿದ್ದಿರಲಿಲ್ಲ. ರಾಜಕೀಯದಷ್ಟೇ ಸಾಂಸ್ಕೃತಿಕವಾಗಿಯೂ ತನ್ನ ಹಿರಿಮೆಯನ್ನು ಕರ್ನಾಟಕ ಮೆರೆದಿತ್ತು. ಉತ್ತರ ಕರ್ನಾಟಕದಲ್ಲಿ ಅನೇಕ ಹಿರಿ-ಕಿರಿಯ ಲೇಖಕರು, ಬರಹಗಾರರು ತಮ್ಮ ಬರಹಗಳ ಮೂಲಕ ಜನ ಜಾಗೃತಿಯಲ್ಲಿ ತೊಡಗಿದ್ದರು. ದ.ರಾ. ಬೇಂದ್ರೆ ಪ್ರಮುಖರಲ್ಲಿ ಒಬ್ಬರು. ತಮ್ಮ ಸಮಾನ ಮನಸ್ಕರ ಜತೆ ಸೇರಿಕೊಂಡು ಗೆಳೆಯರ ಗುಂಪು ಸ್ಥಾಪಿಸಿದರು. ಈ ಗೆಳೆಯರ ಗುಂಪಿನ ಸಾಧನೆ ಇಂದಿಗೂ ಒಂದು ಇತಿಹಾಸ. ಸ್ವಲ್ಪೇ ದಿನ ಕಾರ್ಯ ವಹಿಸಿದರೂ ಗೆಳೆಯರ ಗುಂಪು ಸಾಂಸ್ಕೃತಿಕವಾಗಿ ಬಹು ದೊಡ್ಡ ಹೆಸರನ್ನು ಮಾಡಿತು. ಈ ಗುಂಪಿನ ಸದಸ್ಯರೆಲ್ಲ ನಂತರ ದಿನಗಳಲ್ಲಿ ಪ್ರಖ್ಯಾತ ಲೇಖಕರಾದರು. ಸಾಧನೆ ಇಲ್ಲಿಯೇ ನಿಲ್ಲಲಿಲ್ಲ. ದ.ರಾ. ಬೇಂದ್ರೆ ನಂತರದ ದಿನಗಳಲ್ಲೂ ನೂರಾರು ಲೇಖಕರಿಗೆ ಮಾರ್ಗದರ್ಶಕರಾದರು. ಸ್ವಧರ್ಮ ಮತ್ತು ಜಯ ಕರ್ನಾಟಕ ಪತ್ರಿಕೆಗಳು ಗೆಳೆಯರ ಗುಂಪಿನ ಪತ್ರಿಕೆಗಳು. ನಾಡ ಹಬ್ಬ ಆಚರಿಸಿದ ಹೆಮ್ಮೆ ಗೆಳೆಯರ ಗುಂಪಿಗೆ. ಈ ಎಲ್ಲ ಸಾಧನೆ, ಆದರ್ಶಗಳೇ ಮನೋಹರ ಗ್ರಂಥಮಾಲೆಯ ಸ್ಥಾಪನೆಗೆ ಕಾರಣವಾದವು.
- -10%
ತಲೆದಂಡ
0Original price was: ₹130.00.₹117.00Current price is: ₹117.00.ತಲೆದಂಡ :
ತಲೆದಂಡ ನಾಟಕದ ನಿಜವಾದ ವಸ್ತು ಸಾಮಾಜಿಕ ಹಾಗೂ ರಾಜಕೀಯ ಕ್ರಾಂತಿ ಹಾಗೂ ಈ ಕ್ರಾಂತಿಯ ವೈಫಲ್ಯದ ಒಂದು ಸ್ಥಿತಿ. ನಿಜವಾದ ಕ್ರಾಂತಿ ಕೊನೆಯಿಲ್ಲದ ಒಂದು ಪ್ರತಿಕ್ರಿಯೆಯಾಗಿರುವುದರಿಂದ ಹಾಗೂ ಅದರ ಪರಿಣಾಮಗಳು ದೂರಗಾಮಿಯಾಗಿರುವುದರಿಂದ ಸೋಲು ಅದರ ಒಂದು ಅವಸ್ಥೆಯನ್ನು ಮಾತ್ರ ಸೂಚಿಸುತ್ತದೆ. ತಾನು ಹುಟ್ಟು ಹಾಕಿದ ಕ್ರಾಂತಿ ಒಂದಿಲ್ಲೊಂದು ದಿನ ಯಶಸ್ವಿಯಾಗುತ್ತದೆ ಎಂದು ಬಸವಣ್ಣ ನಂಬಿದ್ದಾನೆ. ಒಂದು ದಿವಸ ಈ ವರ್ಣಾಶ್ರಮ ಧರ್ಮ ಈ ಜಾತಿ ವ್ಯವಸ್ಥೆ ಇವೆಲ್ಲ ಅಳಿದು ಹೋಗುತ್ತವೆ. ಈ ಮಾತು ವೀರಶೈವ ಶರಣರ ಕ್ರಾಂತಿಗೂ ಅನ್ವಯಿಸುವಂತದು. ನಾಟಕ ಕ್ರಾಂತಿಯ ಸ್ವರೂಪ ಹಾಗೂ ಅದರ ಸೋಲು ಗೆಲುವುಗಳಿಗೆ ಕಾರಣವಾದ ಸಾಮಾಜಿಕ ಹಾಗೂ ರಾಜಕೀಯ ಶಕ್ತಿಗಳ ಶೋಧನವಾಗಿರುವುದರಿಂದ ಅದು ಸಾವ್ರತ್ರಿಕತೆಯನ್ನು ಪ್ರಸ್ತುತಪಡಿಸುತ್ತದೆ.
- -10%
ಬಾರೋ ಸಾಧನಕೇರಿಗೆ ಮತ್ತು ನಿಷ್ಕ್ರಿಯ ಘಾತಕಿ
0Original price was: ₹60.00.₹54.00Current price is: ₹54.00.ಬಾರೋ ಸಾಧನಕೇರಿಗೆ –
‘ಬಾರೋ ಸಾಧನಕೇರಿಗೆ… ಮತ್ತು ‘ನಿಷ್ಕ್ರಿಯ ಘಾತಕಿ’ ಎಂಬ ಬಾನುಲಿ ನಾಟಕಗಳನ್ನು ವಿಶೇಷವಾಗಿ ಆಕಾಶವಾಣಿಗೆಂದು ಬರೆದು ತೆಗೆದದ್ದು. ‘ನಿಷ್ಕ್ರಿಯ ಘಾತಕಿ’ ೨೦೧೦ರಲ್ಲಿ ಧಾರವಾಡ ಆಕಾಶವಾಣಿಯಿಂದ ಪ್ರಸಾರಗೊಂಡು ರಾಜ್ಯಮಟ್ಟದ ಆಕಾಶವಾಣಿ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿ, ಕೇಂದ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿತ್ತು.
ಸಧ್ಯದ ವಾತಾವರಣದಲ್ಲಿ ಎಲ್ಲರ ಮುಖ ಐ. ಟಿ. ಕ್ಷೇತ್ರದತ್ತ ಹಾಗೂ ಪಶ್ಚಿಮದ ದೇಶಗಳತ್ತ ಮುಖ ಮಾಡಿರುವಾಗ ದೇಶೀಯ ಆಕರ್ಷಣೆ ತನ್ನ ಕಳೆಯನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಹೇಗೆ ಮತ್ತೆ ಮಾತೃಭೂಮಿ ತನ್ನ ನಿರಂತರವಾದ ಸೂಜಿಗಲ್ಲಿನ ಆಕರ್ಷಣೆಯಿಂದ ಪರದೇಶಿಗಳಾದವರನ್ನು ತನ್ನ ಹತ್ತಿರ ಎಳೆದುಕೊಳ್ಳುತ್ತದೆ ಎಂಬ ವಸ್ತುವನ್ನಿಟ್ಟುಕೊಂಡು ಬರೆದ ನಾಟಕ ‘ಬಾರೋ ಸಾಧನಕೇರಿಗೆ । ಮರಳಿ ನಿನ್ನೀ ಊರಿಗೆ, ಬೇಂದ್ರೆಯವರ ಕವನದ ಸಾಲುಗಳ ಶೀರ್ಷಿಕೆಯಾಗಿಸಿಕೊಂಡು ಹೆಣೆದ ಪ್ರಾರಂಭದ ವಾಕ್ಯವನ್ನು ನಾಟಕ ಅರ್ಥಪೂರ್ಣವಾಗಿದೆ.
ಹಾಗೆಯೇ ‘ನಿಷ್ಕ್ರಿಯ ಘಾತಕಿ’ ಎಂಬ ನಾಟಕ ಜನಸಾಮಾನ್ಯರ ಅಲಿಪ್ತತೆ ಹೇಗೆ ಜೀವನದ ಸ್ವಾಸ್ಥ್ಯವನ್ನು ಹಾಳು ಮಾಡುವದಕ್ಕೆ ಕಾರಣವಾಗುತ್ತದೆ ಎಂಬುದನ್ನು ಮನನೀಯವಾಗಿ ನಿರೂಪಿಸುತ್ತದೆ. - -10%
- -10%
ಅಂಜುಮಲ್ಲಿಗೆ
0Original price was: ₹90.00.₹81.00Current price is: ₹81.00.ಅಂಜುಮಲ್ಲಿಗೆಯ ವಸ್ತು ಸಮಕಾಲೀನವಾದದ್ದು. ಕಾರ್ನಾಡ ಅವರು ಇಂಗ್ಲೆಂಡಿನಲ್ಲಿದ್ದು ನಡೆದ ಒಂದು ಸತ್ಯ ಸಂಗತಿ ಈ ನಾಟಕದ ವಸ್ತು ಎಂದು ಕಾರ್ನಾಡ ಅವರೇ ಸೂಚಿಸಿದ್ದಾರೆ. ಆದರೂ ಇತಿಹಾಸ ಮತ್ತು ಪುರಾಣಗಳಲ್ಲಿ ಅದರ ಬೀಜಗಳಿರುವುದನ್ನು ಅವರು ಉದ್ದೇಶಪೂರ್ವಕವಾಗಿ ನಮ್ಮ ಲಕ್ಷ್ಯಕ್ಕೆ ತಂದಿದ್ದಾರೆ. ಯಾಮಿನಿ ಹಾಗೂ ಅವಳ ತಮ್ಮ ಸತೀಶ ಇವರ ಸಮಸ್ಯಾತ್ಮಕ ಸಂಬಂಧ ಈ ನಾಟಕದ ವಸ್ತು. ಈಜಿಪ್ತಿನ ಅರಸು ಮನೆತನದಲ್ಲಿ ಸಹೋದರ ಸಹೋದರಿಯ ವಿವಾಹ ನಿಶಿದ್ಧವಾಗಿರಲಿಲ್ಲ. ಕ್ಲಿಯೋಪಾತ್ರ ತನ್ನ ಸಹೋದರನನ್ನೇ ಮದುವೆಯಾಗಿದ್ದಳು ಎಂದು ಹೇಳುವ ಮೂಲಕ ಯಾಮಿನಿ ಸತೀಶರ ಸಂಬಂಧದ ಮೇಲೆ ಕಾರ್ನಾಡ ಅವರು ಬೆಳಕು ಚೆಲ್ಲಿದ್ದಾರೆ.
- -10%
ತುಘಲಕ್
0Original price was: ₹130.00.₹117.00Current price is: ₹117.00.ತುಘಲಕ್ –
ದೃಶ್ಯ : ಒಂದು
(ಕ್ರಿ.ಶ. ೧೩೨೭)
(ದಿಲ್ಲಿಯ ಒಂದು ನ್ಯಾಯಾಲಯ. ನ್ಯಾಯಾಲಯದ ಹೊರಗೆ ಜನರು ನೆರೆದಿದ್ದಾರೆ. ಹೆಚ್ಚಾಗಿ ಎಲ್ಲರೂ ಮುಸಲ್ಮಾನರು.)
ಮುದುಕ ಏನಾಗುವದಿದೆಯೋ ಏನೋ ಈ ನಾಡಿಗೆ !
ತರುಣ ಏಕೆ ಅಜ್ಜಾ , ನಿನಗೆ ಯಾವುದರ ಚಿಂತೆ ಹತ್ತಿದೆ ಈಗ ?
ಮುದುಕ ಏನು ಚಿಂತೆಯೋ ಏನು ಮಣ್ಣೋ, ಜಮಾಲ. ಇಷ್ಟು ವರ್ಷ ಬಾಳಿ, ಇಷ್ಟೆಲ್ಲ ಅರಸರನ್ನು ನೋಡಿ ಆಯಿತು. ಈಗ ಕಣ್ಣು ಮುಚ್ಚುವ ದಿನಗಳಲ್ಲಿ ಹೀಗೆ ಕಳ್ಳನ ಹಾಗೆ ಕಾಜಿಯ ಎದುರಿಗೆ ಕೈಕಟ್ಟಿ ನಿಲ್ಲುವ ಅರಸನನ್ನು ನೋಡಬಹುದು ಎಂದು ಕನಸಿನಲ್ಲೂ ಎಣಿಸಿರಲಿಲ್ಲ …………………………….. - -10%
ಸತ್ತು ಹುಟ್ಟಿದ್ದು
0Original price was: ₹200.00.₹180.00Current price is: ₹180.00.ಸತ್ತು ಹುಟ್ಟಿದ್ದು
(ವೈದ್ಯಕೀಯ ರೋಮಾಂಚಕಾರಿ ಕಾದಂಬರಿ)ಔಷಧೀಯ ವಿಭಾಗವು ಮಹಾನ್ ರೀತಿಯಲ್ಲಿ ಬೆಳೆದಿದೆ ಮತ್ತು ಇಂದು, ಅನೇಕಾನೇಕ ಔಷಧ. ಗುಳಿಗೆಗಳು ಭಾರತೀಯ ಕಂಪೆನಿಗಳ ಮೂಲದಿಂದ ಒಯ್ಯಲ್ಪಡುತ್ತ, ಜಗತ್ತಿನ ಉದ್ದಗಲ ವಿಶಿಷ್ಟ ಭಾರತೀಯ ಔಷಧಗಳು ಮುಟ್ಟುತ್ತಿವೆ. ಔಷಧ ಕಂಪೆನಿಗಳು, ಹೊಸ ಜೀವಾಣುಗಳು ಅಥವಾ ಹೊಸ ಸದಾ ತೋರುವ ಹೊಸ ಗುಳಿಗೆಗಳ ಸಂಶೋಧನೆ ಮಾಡುತ್ತಾ ತುಂಬಾ ಹಣವನ್ನು ಖರ್ಚುಮಾಡಿವೆ. ಕೆಲ ಹೊಸ ಜೀವಾಣುಗಳು, ವಿಶಾಲ ವೈದ್ಯಕೀಯ ಪರೀಕ್ಷೆಗಳಿಂದ ಒಪ್ಪಿಗೊಂಡು ಪ್ರಕಾಶಕ್ಕೆ ಬರಲು ಕಾಯುತ್ತಿವೆ. ಆದರೆ ಅತಿನೂತನ ಔಷಧ ಗುಳಿಗೆಯ ಇನ್ನೂ ಮಾರ್ಕೆಟ್ಟಿಗೆ ಬರಬೇಕಷ್ಟೆ. ಹಾಗಿದ್ದರೂ, ವೈದ್ಯಕೀಯ ಪ್ರಯೋಗಗಳಿಗೆ ಭಾರತವು ಒಂದು ಮೆಚ್ಚಿನ ಗುರಿತಾಣವಾಗಿದೆ, ಹಾಗೂ ಎಲ್ಲ ಪ್ರಯೋಗಗಳಲ್ಲಿ ಸುಮಾರು ೨೦೧೦ ಭಾರತದಲ್ಲಿ ಮಾಡಲ್ಪಡುತ್ತವೆ. ನನ್ನ ಕಾದಂಬರಿಯಲ್ಲಿ ಹೇಳಲ್ಪಟ್ಟ ದುರದೃಷ್ಟದಿಂದ ಸಾಮಾನ್ಯ ಜನರನ್ನು ರಕ್ಷಿಸಲಿಕ್ಕಾಗಿ, ಈ ಪ್ರಯೋಗ ಪ್ರಕ್ರಿಯೆಯನ್ನು ಹೆಚ್ಚು ಸರಿಯಾಗಿ ನಿಯಮನಗೊಳಿಸಲು ಸರಕಾರವು ಪ್ರಯತ್ನಿಸಿದೆ.
ಇದು ಶ್ರೀಮತಿ ರೋಹಿಣಿ ನಿಲೇಕಣಿ ಅವರ ಪೆಂಗ್ವಿನ್ ಪ್ರಕಾಶಕರಿಂದ ಇಂಗ್ಲೀಷನಲ್ಲಿ “ಸ್ಟಿಲ್ ಬಾರ್ನ್” ಎಂಬ ಹೆಸರಿನಲ್ಲಿ ಪ್ರಕಟವಾಗಿದ್ದು ಇದನ್ನು ಆರ್ಯ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
- -10%
ಪಾಚಿ ಕಟ್ಟಿದ ಪಾಗಾರ
0Original price was: ₹300.00.₹270.00Current price is: ₹270.00.ಪಾಚಿ ಕಟ್ಟಿದ ಪಾಗಾರ :
(ಕಾದಂಬರಿ)ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಬದುಕನ್ನು ಕಣ್ಣಿಗೆ ಕಟ್ಟುವಂತೆ ಕಾದಂಬರಿಗಾರ್ತಿ ಮಿತ್ರಾ ವೆಂಕಟರಾಜ ಈ ಕಾದಂಬರಿಯಲ್ಲಿ ಬರುವ ಪಾತ್ರಗಳು ಜೀವನದಲ್ಲಿ ಎದುರಾಗುವ ಘಟನೆಗಳಿಗೆ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಮತ್ತು ಹಳ್ಳಿಯಲ್ಲಿ ಪ್ರಮುಖವಾಗಿರುವ ಕುಟುಂಬಗಳ ರೀತಿ ನೀತಿಗಳ ಇತರ ಸಾಧಾರಣ ಕುಟುಂಬಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ ಎಂಬುದನ್ನು ಸವಿವರವಾಗಿ ಚಿತ್ರಿಸಲಾಗಿದೆ. ಮಿತ್ರಾ ವೆಂಕಟರಾಜ ಅವರು ಎರಡು ಭಾಗಗಳಲ್ಲಿ ಕಾದಂಬರಿಯ ಒಟ್ಟು ಜೀವನದ ಪರಂಪರೆ ಅಳಿಸಿಹೋಗದಹಾಗೆ ಚಿತ್ರಿಸಿ ಮುಂದಿನ ತಲೆಮಾರಿಗೆ ದಾಖಲೆ ಉಳಿಸಿದ್ದಾರೆ.
- -10%
ಟಿಪೂ ಸುಲ್ತಾನ ಕಂಡ ಕನಸು
0Original price was: ₹100.00.₹90.00Current price is: ₹90.00.ಟಿಪೂ ಸುಲ್ತಾನ ಕಂಡ ಕನಸು :
1997 ರಲ್ಲಿ ಭಾರತೀಯ ಸ್ವಾತಂತ್ರ್ಯಕ್ಕೆ ಐವತ್ತು ತುಂಬಿದ ಸಂದರ್ಭದಲ್ಲಿ ಇಂಗ್ಲೆಂಡಿನ ಬಿ.ಬಿಸಿ. ರೇಡಿಯೋದವರು ನನಗೆ ಸ್ವಾತಂತ್ರ್ಯ ದಿನಂದು ಬಿತ್ತರಿಸಲಿಕ್ಕಾಗಿ ಒಂದು ನಾಟಕ ಬರೆದುಕೊಡಲು ಕೇಳಿಕೊಂಡರು. ನಾಟಕದ ವಸ್ತು ಆಂಗ್ಲ-ಭಾರತೀಯ ಸಂಬಂಧವನ್ನು ಕುರಿತದ್ದಾಗಿರಬೇಕು ಎಂಬ ಮಾತು ಸೂಚ್ಯವಾಗಿ ಬಂದಾಗ ನನಗೆ ಕೂಡಲೆ ಹೊಳೆದದ್ದು ಕರ್ನಾಟಕದ ಕೊನೆಯ ಸ್ವತಂತ್ರ ಶಾಸಕನಾದ ಟಿಪೂ ಸುಲ್ತಾನನ ದುರಂತ! ತನ್ನ ಇಡಿಯ ಬಾಳನ್ನು ಬಡಿದಾಟದಲ್ಲೇ ನೀಗಿಸಿದ ಈ ವ್ಯಕ್ತಿ ಗುಟ್ಟಾಗಿ ತನ್ನ ಕನಸುಗಳನ್ನು ಬರೆದಿಡುತ್ತಿದ್ದ ಎಂಬ ಮಾತನ್ನು ಏ.ಕೆ.ರಾಮಾನುಜನ್ರಿಂದ ಕೇಳಿದಂದಿನಿಂದ ನನಗೆ ಟಿಪೂವಿನಲ್ಲಿ ವಿಶೇಷ ಆಸಕ್ತಿ ಉಂಟಾಗಿತ್ತು. ಅದೇ ನಾಟಕ ರಚನೆಗೆ ಪ್ರೇರಣೆಯಾಯಿತು.
- -1%
ಹಯವದನ
0Original price was: ₹120.00.₹119.00Current price is: ₹119.00.ಹಯವದನ
ಶ್ರೀ ಗಿರೀಶ ಕಾರ್ನಾಡರ ‘ಹಯವದನ’ ನಾಟಕವು ಎಪ್ಪತ್ತರ ದಶಕದಲ್ಲಿ ಅವರು ಹೋಮಿಭಾಭಾ ಫೆಲೋಶಿಪ್ ಪಡೆದು ಧಾರವಾಡದಲ್ಲಿದ್ದಾಗ ಬರೆದದ್ದು. ಈ ನಾಟಕಕ್ಕೆ ರಾಷ್ಟ್ರಮಟ್ಟದ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿಯೂ ದೊರಕಿದೆ. ಶ್ರೀ ಸತ್ಯದೇವ ದುಬೆ, ಬಿ.ವಿ. ಕಾರಂತರಂಥ ನಿರ್ದೕಶಕರಿಂದ ಅನೇಕ ಪ್ರದರ್ಶನಗಳನ್ನು ಕಂಡಿದೆ. ಶ್ರೀ ದುಬೆಯವರ ಹಿಂದೀ ಪ್ರದರ್ಶನದಲ್ಲಿ ಶ್ರೀ ಅಮೋಲ ಪಾಲೇಕರ, ದಿ. ಅಮರೀಶಪುರಿ ಶ್ರೀಮತಿ ಸುನೀತಾ ಪ್ರಧಾನ ಮುಂತಾದವರು ಪಾತ್ರವಹಿಸಿ, ಈ ನಾಟಕದ ಪ್ರದರ್ಶನ ಅತ್ಯಂತ ಯಶಸ್ವಿಯಾಗಲು ಮತ್ತು ಬಹುಕಾಲ ಜನರ ಮನಸ್ಸಿನಲ್ಲಿ ಬೇರೂರಲು ಕಾರಣವಾಯಿತು.
- -10%
ನಾ ಬದುಕಲಿಕ್ಕೆ ಒಲ್ಲೆಪಾ
0Original price was: ₹80.00.₹72.00Current price is: ₹72.00.ನಾ ಬದುಕಲಿಕ್ಕೆ ಒಲ್ಲೆಪಾ –
ಇದು ದ್ವಿಪಾತ್ರ ನಾಟಕಗಳ ಸಂಕಲನ. ದ್ವಿಪಾತ್ರ ನಾಟಕಗಳಿಗೆ ಸಂಭಾಷಣೆಯೇ ಜೀವಾಳ . ಸಂಭಾಷಣೆ ಮೂಲಕವೇ ಕುತೂಹಲವನ್ನು ಹುಟ್ಟಿಸುವ ತಂತ್ರಗಾರಿಕೆಯೇ ನಾಟಕದ ಮೂಲ ವಸ್ತು. ಯಾವುದೇ ಒಂದು ಸಮಸ್ಯೆಯನ್ನು ಎದುರಿಗಿಟ್ಟುಕೊಂಡು ಅದರ ಪರ ಮತ್ತು ವಿರೋಧದ ವಾಗ್ವಾದದ ಮೂಲಕವೇ ನಾಟಕವನ್ನು ರಚಿಸುವ ಜಾಣಕಲಾತ್ಮಕಯೇ ನಾಟಕಕಾರಣನ ಹಿರಿಮೆ. ಈ ನಿಟ್ಟಿನಲ್ಲಿ ಲೋಹಿತ ನಾಯ್ಕರ್ ಯಶಸ್ವಿಯಾಗಿದ್ದಾರೆ.
ಈ ನಾಟಕಗಳು ಹವ್ಯಾಸಿ ರಂಗಭೂಮಿಗೆ ಸೂಕ್ತವಾಗಿವೆ.