ಸುಮಾರು ಎಂಭತ್ತು-ತೊಂಬತ್ತು ವರ್ಷಗಳ ಹಿಂದೆ ಇಡೀ ರಾಷ್ಟ್ರವೇ ಸ್ವಾತಂತ್ರ್ಯಕ್ಕಾಗಿ ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಒಂದಾಗಿ ಹೋರಾಡುತ್ತಿತ್ತು. ಈ ವಿಷಯದಲ್ಲಿ ಕರ್ನಾಟಕವೂ ಹಿಂದೆ ಬಿದ್ದಿರಲಿಲ್ಲ. ರಾಜಕೀಯದಷ್ಟೇ ಸಾಂಸ್ಕೃತಿಕವಾಗಿಯೂ ತನ್ನ ಹಿರಿಮೆಯನ್ನು ಕರ್ನಾಟಕ ಮೆರೆದಿತ್ತು. ಉತ್ತರ ಕರ್ನಾಟಕದಲ್ಲಿ ಅನೇಕ ಹಿರಿ-ಕಿರಿಯ ಲೇಖಕರು, ಬರಹಗಾರರು ತಮ್ಮ ಬರಹಗಳ ಮೂಲಕ ಜನ ಜಾಗೃತಿಯಲ್ಲಿ ತೊಡಗಿದ್ದರು. ದ.ರಾ. ಬೇಂದ್ರೆ ಪ್ರಮುಖರಲ್ಲಿ ಒಬ್ಬರು. ತಮ್ಮ ಸಮಾನ ಮನಸ್ಕರ ಜತೆ ಸೇರಿಕೊಂಡು ಗೆಳೆಯರ ಗುಂಪು ಸ್ಥಾಪಿಸಿದರು. ಈ ಗೆಳೆಯರ ಗುಂಪಿನ ಸಾಧನೆ ಇಂದಿಗೂ ಒಂದು ಇತಿಹಾಸ. ಸ್ವಲ್ಪೇ ದಿನ ಕಾರ್ಯ ವಹಿಸಿದರೂ ಗೆಳೆಯರ ಗುಂಪು ಸಾಂಸ್ಕೃತಿಕವಾಗಿ ಬಹು ದೊಡ್ಡ ಹೆಸರನ್ನು ಮಾಡಿತು. ಈ ಗುಂಪಿನ ಸದಸ್ಯರೆಲ್ಲ ನಂತರ ದಿನಗಳಲ್ಲಿ ಪ್ರಖ್ಯಾತ ಲೇಖಕರಾದರು. ಸಾಧನೆ ಇಲ್ಲಿಯೇ ನಿಲ್ಲಲಿಲ್ಲ. ದ.ರಾ. ಬೇಂದ್ರೆ ನಂತರದ ದಿನಗಳಲ್ಲೂ ನೂರಾರು ಲೇಖಕರಿಗೆ ಮಾರ್ಗದರ್ಶಕರಾದರು. ಸ್ವಧರ್ಮ ಮತ್ತು ಜಯ ಕರ್ನಾಟಕ ಪತ್ರಿಕೆಗಳು ಗೆಳೆಯರ ಗುಂಪಿನ ಪತ್ರಿಕೆಗಳು. ನಾಡ ಹಬ್ಬ ಆಚರಿಸಿದ ಹೆಮ್ಮೆ ಗೆಳೆಯರ ಗುಂಪಿಗೆ. ಈ ಎಲ್ಲ ಸಾಧನೆ, ಆದರ್ಶಗಳೇ ಮನೋಹರ ಗ್ರಂಥಮಾಲೆಯ ಸ್ಥಾಪನೆಗೆ ಕಾರಣವಾದವು.
-
-9%
-
-10%
-
-10%
-
-10%
-
-10%
-
-10%
ಭಾಷೆ ಮತ್ತು ಸಂಸ್ಕೃತಿ
0ಭಾಷೆ ಮತ್ತು ಸಂಸ್ಕೃತಿ :
ಇದು ಕುರ್ತಕೋಟಿಯವರ ಅಂಕಣ ಲೇಖನ ಕೃತಿ . ಇದರಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದ ಲೇಖನಗಳಿವೆ. ಬಿಡಿಬಿಡಿಯಾಗಿದ್ದ ಈ ಲೇಖನಗಳನ್ನು ಒಂದು ಸ್ವರೂಪದಲ್ಲಿ ಜೋಡಿಸಿ ಇಲ್ಲಿ ನೀಡಲಾಗಿದೆ. ವಿಜಯ ಕರ್ನಾಟಕ ಪತ್ರಿಕೆಯ ‘ಸಾಪ್ತಾಹಿಕ ವಿಜಯಕ್ಕೆ ಬರೆದ, ‘ಒಳನೋಟಗಳು’. ಎಂಬ ಹೆಸರಿನಲ್ಲಿ ಬರುತ್ತಿದ್ದ ಅಂಕಣಗಳೊಂದಿಗೆ ಇನ್ನೂ ಕೆಲವು ಲೇಖನಗಳನ್ನು ಈ ಕೃತಿಯಲ್ಲಿ ಸೇರಿಸಲಾಗಿದೆ.
-
-10%
ಆಡಾಡತ ಆಯುಷ್ಯ
0ಆಡಾಡತ ಆಯುಷ್ಯ
-ಗಿರೀಶ ಕಾರ್ನಾಡ
ಆಡಾಡತ ಆಯುಷ್ಯ – ಈ ಕ್ರತಿಯು ಗಿರೀಶ ಕಾರ್ನಾಡ ಅವರ ಆತ್ಮಕಥೆಯಾಗಿದ್ದು, ಆತ್ಮಕಥೆಯ ಪೂರ್ವಾರ್ಧವನ್ನು ಒಳಗೊಂಡಿದೆ
ಪ್ರಾಕ್ಕು
ನನ್ನ ತಾಯಿಯ ಹೆಸರು ಕೃಷ್ಣಾಬಾಯಿ. ಕೃಷ್ಣಾಬಾಯಿ ಮಂಕೀಕರ. ಕುಟುಂಬದ ಹಿರಿಯರೆಲ್ಲ ಆಕೆಯನ್ನು ‘ಕುಟ್ಟಾಬಾಯಿ’ ಎಂದೇ ಸಂಬೋಧಿಸುತ್ತಿದ್ದರು. ಆಮೇಲೆ ತನಗಿಂತ ಕಿರಿಯರಿಗೆ, ಮುಂದಿನ ತಲೆಮಾರಿಗೆ, ‘ಕುಟ್ಟಕ್ಕ’ ಆದಳು. ೧೯೮೪ರಲ್ಲಿ , ಅಂದರೆ ಆಕೆಗೆ ಎಂಭತ್ತೆರಡು ತುಂಬಿದಾಗ, ನನ್ನ ಅತ್ತಿಗೆ ಸುನಂದಾ ಆಕೆಯ ಬೆನ್ನು ಹತ್ತಿ ಆಕೆಯಿಂದ ಆತ್ಮಕತೆ ಬರೆಯಿಸಿಕೊಂಡಳು. ನನ್ನ ತಂದೆಯ ಒಂದು ಹಳೆಯ ಡಾಯರಿಯಲ್ಲಿ, ಅವನು ಅಲ್ಲಲ್ಲಿ ಲೆಕ್ಕ ಗೀಚಿ ಬಿಟ್ಟಿರುವ ಪುಟಗಳ ಖಾಲಿ ಜಾಗದಲ್ಲಿ, ಕೊಂಕಣಿಯಲ್ಲಿ ಬರೆದ ಸುಮಾರು ಮೂವತ್ತು ಪುಟಗಳ ಕೃತಿ ಅದು. ಆಕೆ ಅದನ್ನು ಬರೆಯುವಷ್ಟರಲ್ಲಿ ನಾನು, ನನ್ನ ಸಹೋದರ-ಸಹೋದರಿಯರು ಬಾಲ್ಯದುದ್ದಕ್ಕೂ ನಮ್ಮನ್ನು ಪೀಡಿಸಿದ ಭೀತಿಗಳಿಗೆ, ಆತಂಕಗಳಿಗೆ ಹಾಗೂ ಹೀಗೂ ಪರಿಹಾರ ಹುಡುಕಿದ್ದೆವು. ಆಕೆಯ ಆತ್ಮಚರಿತ್ರೆ ಈ ದುಗುಡಗಳ ಬಗ್ಗೆ ಸರಳವಾಗಿ, ಪ್ರಾಮಾಣಿಕವಾಗಿ ಮಾತನಾಡಿ ಅವುಗಳನ್ನು ಬಯಲಿಗೆಳೆದು ಪರೀಕ್ಷಿಸಲಿಕ್ಕೆ ಎಡೆ ಮಾಡಿಕೊಟ್ಟಿತು.
-
-10%
ಯಯಾತಿ – ನಾಟಕ
0ಯಯಾತಿ – ನಾಟಕ
ಇದು ಗಿರೀಶ ಕಾರ್ನಾಡ ರಚನೆಯ ನಾಟಕವಾಗಿದೆ.
-
-10%
ಅಗ್ನಿ ಮತ್ತು ಮಳೆ
0ಇದು ಗಿರೀಶ್ ಕಾರ್ನಾಡವರು ಬರೆದ ನಾಟಕವಾಗಿದೆ.ಶ್ರೀಯುತ ಗಿರೀಶ ಕಾರ್ನಾಡರು ೧೯೯೩ ರಲ್ಲಿ ಅಮೇರಿಕಾದ ಮಿನಿಯಾಪೋಲಿಸ್ ನಗರದ ಗಥ್ರೀ ಥಿಏಟರ್ ನಾಟ್ಯ ಸಂಸ್ಥೆಯವರಿಗಾಗಿ ಬರೆದ ನಾಟಕ.
-
-10%
ಕಥನ ಕಾರಣ
0ಕಥನ ಕಾರಣ –
(ಎಪ್ಪತ್ತು ಆಧುನಿಕ ಕನ್ನಡ ಸಣ್ಣಕತೆಗಳ ವಿಶ್ಲೇಷಣೆ)ಈ ಪುಸ್ತಕದಲ್ಲಿ ೭೦ ಬೇರೆ ಬೇರೆ ಲೇಖಕರ ಲೇಖನಗಳಿವೆ. ಇವು ಪತ್ರಿಕೆಯ ಸಾಪ್ತಾಹಿಕದಲ್ಲಿ ಓದಿ ಮರೆಯುವ ಲೇಖನಗಳಲ್ಲ . ಆಗಾಗ ಮತ್ತೆ ಮತ್ತೆ ಓದಿ ಮಥನ ಮಾಡಿಕೊಳ್ಳಬೇಕಾದ ಲೇಖನಗಳು. ಯಾವುದೇ ಸಾಹಿತ್ಯಿಕ ಓದು ಸಮಕಾಲೀನ ಸಮಾಜ–ಸಂಸ್ಕೃತಿ–ರಾಜಕಾರಣವನ್ನು ಸಂಪೂರ್ಣವಾಗಿ ಹೊರಗಿಡುವಂತಿಲ್ಲ ಎಂಬ ಎಚ್ಚರವನ್ನು ಈ ಕೃತಿ ತಿಳಿಸುತ್ತದೆ.
-
-10%
ಮಸುಕು ಬೆಟ್ಟದ ದಾರಿ
0ಮಸುಕು ಬೆಟ್ಟದ ದಾರಿ :
ಚಿಕ್ಕಮಗಳೂರಿನ ಸುಂದರ ಪರಿಸರದಲ್ಲಿ ಮೂಡುವ `ಮಸುಕು ಬೆಟ್ಟದ ದಾರಿ’ ಕಾದಂಬರಿ ತನ್ನ ವಸ್ತುವಿನಿಂದಾಗಿ ಅನನ್ಯವಾಗಿದೆ. `ಹೈಪರ್ ಥೈಮೆಸ್ಟಿಕ್ ಸಿಂಡ್ರೋಮ್’ ಎಂಬ ವಿಚಿತ್ರ, ಅತಿ ಅಪರೂಪದ ಮಿದುಳಿನ ಲಕ್ಷಣದ ಹುಡುಗ ನಿರಂಜನ ಇಲ್ಲಿನ ನಾಯಕ. ಮೆದು ಮನಸ್ಸು, ಸರಳ ಸೌಜನ್ಯದ ಪೊಲೀಸ್ ಕಾನ್ಸ್ಟೇಬಲ್ ರಾಜೀವ ಈತನ ತಂದೆ. ತಂದೆಯಾಗಿ ಮಗನನ್ನು ಜೀವನದಲ್ಲಿ ನಿಲ್ಲಿಸಲು ಆತ ಪಡುವ ಪಡಿಪಾಟಲು ಮೊದಲ ಭಾಗದಲ್ಲಿದೆ. ನಿರಂಜನನ ಎಲ್ಲ ನೆನಪುಗಳೂ ಶಾಶ್ವತ, ಭಾವನೆಗಳ ಸಮೇತ. ಇತರರಲ್ಲಿ ಇರುವಂತೆ ಶಾಶ್ವತ ನೆನಪು ಹಾಗೂ ತಾತ್ಕಾಲಿಕ ನೆನಪು ಎಂಬ ಭಾಗಗಳಿಲ್ಲ, ಕ್ರಮೇಣ ಮರೆತು ಹೋಗುವುದೂ ಇಲ್ಲ. ನಿಯಂತ್ರಣ ಕೂಡ ಇಲ್ಲದ ನೆನಪುಗಳ ಪ್ರವಾಹದಲ್ಲಿ ಸಿಕ್ಕಿಕೊಳ್ಳುವ ನಿರಂಜನ ಶಾಲೆಯಲ್ಲಿ ತುಂಬ ಹಿಂದೆ ಬೀಳುತ್ತಾನೆ. ಬೆಂಗಳೂರು ನಿಮ್ಹಾನ್ಸ್ ಡಾಕ್ಟರರು ಅವನ ಕಾಯಿಲೆಯನ್ನು ಸರಿಯಾಗಿ ನಿದಾನ ಮಾಡುತ್ತಾರಾದರೂ, ಪರಿಹಾರ ಅವರಿಗೂ ತಿಳಿಯದು. ನಿರಂಜನನ ತಾಯಿ ಸತ್ತದ್ದು, ರಾಜೀವ ಮರುಮದುವೆ ಆಗದಿರುವುದು, ಅವರ ನೆಂಟರುಗಳ ವಿವರ ಅವನ ಕೌಟುಂಬಿಕ ಹಿನ್ನೆಲೆಯನ್ನು ನೀಡುತ್ತದೆ.
-
-10%