ಸುಮಾರು ಎಂಭತ್ತು-ತೊಂಬತ್ತು ವರ್ಷಗಳ ಹಿಂದೆ ಇಡೀ ರಾಷ್ಟ್ರವೇ ಸ್ವಾತಂತ್ರ್ಯಕ್ಕಾಗಿ ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಒಂದಾಗಿ ಹೋರಾಡುತ್ತಿತ್ತು. ಈ ವಿಷಯದಲ್ಲಿ ಕರ್ನಾಟಕವೂ ಹಿಂದೆ ಬಿದ್ದಿರಲಿಲ್ಲ. ರಾಜಕೀಯದಷ್ಟೇ ಸಾಂಸ್ಕೃತಿಕವಾಗಿಯೂ ತನ್ನ ಹಿರಿಮೆಯನ್ನು ಕರ್ನಾಟಕ ಮೆರೆದಿತ್ತು. ಉತ್ತರ ಕರ್ನಾಟಕದಲ್ಲಿ ಅನೇಕ ಹಿರಿ-ಕಿರಿಯ ಲೇಖಕರು, ಬರಹಗಾರರು ತಮ್ಮ ಬರಹಗಳ ಮೂಲಕ ಜನ ಜಾಗೃತಿಯಲ್ಲಿ ತೊಡಗಿದ್ದರು. ದ.ರಾ. ಬೇಂದ್ರೆ ಪ್ರಮುಖರಲ್ಲಿ ಒಬ್ಬರು. ತಮ್ಮ ಸಮಾನ ಮನಸ್ಕರ ಜತೆ ಸೇರಿಕೊಂಡು ಗೆಳೆಯರ ಗುಂಪು ಸ್ಥಾಪಿಸಿದರು. ಈ ಗೆಳೆಯರ ಗುಂಪಿನ ಸಾಧನೆ ಇಂದಿಗೂ ಒಂದು ಇತಿಹಾಸ. ಸ್ವಲ್ಪೇ ದಿನ ಕಾರ್ಯ ವಹಿಸಿದರೂ ಗೆಳೆಯರ ಗುಂಪು ಸಾಂಸ್ಕೃತಿಕವಾಗಿ ಬಹು ದೊಡ್ಡ ಹೆಸರನ್ನು ಮಾಡಿತು. ಈ ಗುಂಪಿನ ಸದಸ್ಯರೆಲ್ಲ ನಂತರ ದಿನಗಳಲ್ಲಿ ಪ್ರಖ್ಯಾತ ಲೇಖಕರಾದರು. ಸಾಧನೆ ಇಲ್ಲಿಯೇ ನಿಲ್ಲಲಿಲ್ಲ. ದ.ರಾ. ಬೇಂದ್ರೆ ನಂತರದ ದಿನಗಳಲ್ಲೂ ನೂರಾರು ಲೇಖಕರಿಗೆ ಮಾರ್ಗದರ್ಶಕರಾದರು. ಸ್ವಧರ್ಮ ಮತ್ತು ಜಯ ಕರ್ನಾಟಕ ಪತ್ರಿಕೆಗಳು ಗೆಳೆಯರ ಗುಂಪಿನ ಪತ್ರಿಕೆಗಳು. ನಾಡ ಹಬ್ಬ ಆಚರಿಸಿದ ಹೆಮ್ಮೆ ಗೆಳೆಯರ ಗುಂಪಿಗೆ. ಈ ಎಲ್ಲ ಸಾಧನೆ, ಆದರ್ಶಗಳೇ ಮನೋಹರ ಗ್ರಂಥಮಾಲೆಯ ಸ್ಥಾಪನೆಗೆ ಕಾರಣವಾದವು.
- -40%
ಇಣುಕಿದಲ್ಲಿ ಛಂದ
0Original price was: ₹200.00.₹120.00Current price is: ₹120.00.ಇಣುಕಿದಲ್ಲಿ ಛಂದ
(ಲಲಿತ ಪ್ರಬಂಧಗಳು)ಕಾವ್ಯ ನನಗೆ ಮೌನಗಳ ಮೀಟುವ ಏಕತಾರಿ. ನಾಟಕ ಹಲವು ಸಮಸ್ಯೆಗಳ ಚಿಂತನೆಯ ಅನಾವರಣ. ಸುತ್ತಲಿನ ನನಗಿಷ್ಟವಾದದ್ದನ್ನೆಲ್ಲ ಎತ್ತಿಕೊಂಡು ತನ್ಮಯಳಾಗುವ ಖುಷಿ, ಲಲಿತ ಪ್ರಬಂಧ.
ಎದುರಾಗುವ ಸನ್ನಿವೇಶ, ವ್ಯಕ್ತಿಗಳನ್ನು ರಾಗಭಾವಗಳಿಂದ ಪ್ರತ್ಯೇಕಿಸಿ ನವಿರು ಹಾಸ್ಯಕ್ಕೆ ಪ್ರತಿಮೆಯಾಗಿಸಿಯೂ, ಓರೆ ಕೋರೆಗಳ ಸಾಪೇಕ್ಷತೆಯನ್ನು ಈ ಪ್ರಪಂಚದ ಸಾರ್ವತ್ರಿಕ ಸಹಜ ನಡವಳಿಕೆಯಾಗಿ ಸ್ವೀಕರಿಸುವ ಆರೋಗ್ಯಕರ ಔದಾರ್ಯವೇ ಲಲಿತಪ್ರಬಂಧದ ಜೀವನಾಡಿ. ಯಾವುದೇ ಸಾಹಿತ್ಯಿಕ ಕಾಲಘಟ್ಟದ ಹಣೆಪಟ್ಟಿಯ ಹಂಗಿಲ್ಲದೆ ಹರಿವ ಹೊಳೆ ಲಲಿತ ಪ್ರಬಂಧ. ನನ್ನ ಬೊಗಸೆಯಲಿ ಹಿಡಿವಷ್ಟು ಸಲಿಲವನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ. ಕನ್ನಡದಲ್ಲಿ ಗೊರೂರು, ವಿ. ಸೀ., ಪು.ತಿ.ನ., ಎ. ಎನ್. ಮೂರ್ತಿರಾಯರು, ಅ. ರಾ. ಮಿತ್ರ ಮುಂತಾದ ಲೇಖಕರು ಲಲಿತ ಪ್ರಬಂಧ ಪ್ರಕಾರವನ್ನು ಬೆಳೆಸಿದ್ದಾರೆ. ಮನೆಯ ಪುಸ್ತಕದ ರಾಶಿಯಲ್ಲಿ ಮೊದಲು ನನ್ನ ಕಣ್ಣಿಗೆ ಬಿದ್ದ ರಾ. ಕು. ಅವರ `ಗಾಳಿಪಟ’ ಪ್ರತಿಯೊಂದು ಮರು ಓದಿನಲ್ಲೂ ಅದೇ ಸಂತೋಷ ಕೊಡುವ ಕೃತಿ. - -52%
ಸಮಾಹಿತ-ವಸಂತ ಸಂಚಿಕೆ ೨೦೧೭
0Original price was: ₹100.00.₹48.00Current price is: ₹48.00.ಸಮಾಹಿತ
(ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ)
ವಸಂತ ಸಂಚಿಕೆ
ಸಂಪುಟ-೨ ಸಂಚಿಕೆ-೩
ಮೇ-ಜೂನ್ ೨೦೧೭ಇದೊಂದು ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ ಪತ್ರಿಕೆಯಾಗಿದೆ. ಡಾ. ಗಿರಡ್ಡಿ ಗೋವಿಂದರಾಜರ ಅಧ್ಯಕ್ಷತೆಯಲ್ಲಿ `ಸಮಾಹಿತ ಟ್ರಸ್ಟ್ ಧಾರವಾಡ’ ಸ್ಥಾಪನೆಗೊಂಡು ಅದರ ಆಶ್ರಯದಲ್ಲಿ `ಸಮಾಹಿತ’ ಸಾಹಿತ್ಯಕ ಸಾಂಸ್ಕೃತಿಕ ದ್ವೈಮಾಸಿಕವು ಧಾರವಾಡದ ಸಾಹಿತ್ಯ ಪತ್ರಿಕೆಗಳ ಪರಂಪರೆಯ ಹೊಸ ಪಲ್ಲವವಾಗಿ ಮೂಡಿಬರುತ್ತಿದೆ.
- -40%
ತಾವರೆಯ ಬಾಗಿಲು
0Original price was: ₹200.00.₹120.00Current price is: ₹120.00.‘ತಾವರೆಯ ಬಾಗಿಲು’ ಕಾವ್ಯ ಕುರಿತು 40 ಪ್ರಬಂಧಗಳ ಸಂಕಲನ
- -40%
ರಾಜಕೀಯ ಮತ್ತು ಧರ್ಮ
0Original price was: ₹90.00.₹54.00Current price is: ₹54.00.ರಾಜಕೀಯ ಮತ್ತು ಧರ್ಮ
ಲೇಖನಗಳು ತಮ್ಮ ವಸ್ತುವನ್ನು ಬೆಳಗಿಸುತ್ತವೆ. ಅದಕ್ಕಿಂತ ಹೆಚ್ಚಾಗಿ ಲೇಖಕನ ವ್ಯಕ್ತಿತ್ವದ ಬಗ್ಗೆ ಕೂಡ ಕೆಲ ಮಾತುಗಳನ್ನೂ ಹೇಳುತ್ತವೆ. ಈ ದೃಷ್ಟಿಯಿಂದ ಓದುಗರು ಇವುಗಳನ್ನು ಸ್ವೀಕರಿಸಬೇಕು. ಒಟ್ಟಿನಲ್ಲಿ ಹೇಳುವದಾದರೆ ಸುತ್ತಲಿನ ಜಗತ್ತಿನೊಡನೆ ನಡೆದ ಒಂದು ನಿರಂತರ ಪ್ರತಿಕ್ರಿಯೆಯ ಫಲವಾಗಿ ಈ ಲೇಖನಗಳು ಮೂಡಿಬಂದಿದೆ.
- -40%
ಸ್ವಪ್ನದರ್ಶಿ ಮತ್ತು ಇತರ ಗೀತನಾಟಕಗಳು
0Original price was: ₹40.00.₹24.00Current price is: ₹24.00.ಸ್ವಪ್ನದರ್ಶಿ ಮತ್ತು ಇತರ ಗೀತನಾಟಕಗಳು
ಈ ನಾಟಕಗಳನ್ನು ಕೀರ್ತಿನಾಥ ಕುರ್ತಕೋಟಿ ಅವರು ರಚಿಸಿದ್ದಾರೆ. ಈ ಕೃತಿಯು ಸ್ವಪ್ನದರ್ಶಿ, ರಾಮಾವಸಾನ, ಮಹಾಪ್ರಸ್ಥಾನ, ಮಹಾಶ್ವೇತೆ, ಶೋಕವೃಕ್ಷ -ಈ ಐದು ನಾಟಕಗಳನ್ನು ಒಳಗೊಂಡಿದೆ. - -40%
ಆಮನಿ
0Original price was: ₹20.00.₹12.00Current price is: ₹12.00.ಆಮನಿ
ಈ ನಾಟಕದಲ್ಲಿ ಮಹತ್ವವನ್ನು ವಾತಾವರಣ ಸೃಷ್ಟಿಗೆ ಕೊಟ್ಟಿದ್ದಾರೆ. ಅಂತಲೇ ಇಲ್ಲಿಯ ಕಥಾವಸ್ತುವಿನ ಇತಿಹಾಸ ದೂರ ಬಹುದೂರ ಓಡುತ್ತದೆ. ಕೃತಿಯ ಗಮನ ವರ್ತಮಾನಕಾಲದಿಂದ ಭೂತಕಾಲಕ್ಕೆ ಹೋಗಿ, ಆಮೇಲೆ ವರ್ತಮಾನದಿಂದ ಮುಂದುವರಿಯುತ್ತದೆ. ಇದು ಮಕ್ಕಳ ಜೀವನದಲ್ಲಿಯ ಕೆಲವು ಸನ್ನಿವೇಶಗಳನ್ನು ರೂಪಿಸುವ ನಾಟಕವಾಗಿದ್ದರೂ ಕೂಡ ಅದೇ ಅದರ ಉದ್ದೇಶವಲ್ಲ. ಜೀವನಕ್ಕೆ ಜೀವನವೇ ಇಲ್ಲಿ ಸಂಕೇತವಾಗಿದೆ. ವಾಸ್ತವತೆಯ ಅದ್ಭುತ ರಮ್ಯತೆಯನ್ನು ತೆರೆದು ತೋರುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಜೀವನದಲ್ಲಿ ಕಾಣುವ ಸತ್ಯದ ಪರಿಗಳನ್ನು ಒಂದೊಂದಾಗಿ ಬಿಚ್ಚಿ ನೋಡಿದಾಗ ಕೊನೆಗೆ ಅನಿರ್ವಚನೀಯವಾದ ಗೂಢವೊಂದೇ ಉಳಿಯುತ್ತದೆ. ಮಕ್ಕಳ ಜೀವನದಲ್ಲಿ ಆಟಗಳಲ್ಲಿ , ಉತ್ಸಾಹದಲ್ಲಿ, ಅನುಕರಣದಲ್ಲಿ ಮನುಕುಲದ ಹೃದಯಸ್ಪಂದನ ಕೇಳುತ್ತಿದೆ. ಇತಿಹಾಸದ ಫಲವಾಗಿ, ಭವಿಷ್ಯದ ಬೀಜವಾಗಿರುವ ಶೈಶವದ ಅಲೌಕಿಕ ಸೌಂದರ್ಯವನ್ನು ಸೆರೆಹಿಡಿಯುವ ಸಾಹಸ ಇಲ್ಲಿದೆ. ಸಮಾಹಿತ-ಹೇಮಂತ ಸಂಚಿಕೆ ೨೦೧೭
0₹100.00ಸಮಾಹಿತ
(ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ)
ಹೇಮಂತ ಸಂಚಿಕೆ
ಸಂಪುಟ-೨ ಸಂಚಿಕೆ-೧
ಜನವರಿ – ಫೆಬ್ರವರಿ ೨೦೧೭ಇದೊಂದು ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ ಪತ್ರಿಕೆಯಾಗಿದೆ. ಡಾ. ಗಿರಡ್ಡಿ ಗೋವಿಂದರಾಜರ ಅಧ್ಯಕ್ಷತೆಯಲ್ಲಿ `ಸಮಾಹಿತ ಟ್ರಸ್ಟ್ ಧಾರವಾಡ’ ಸ್ಥಾಪನೆಗೊಂಡು ಅದರ ಆಶ್ರಯದಲ್ಲಿ `ಸಮಾಹಿತ’ ಸಾಹಿತ್ಯಕ ಸಾಂಸ್ಕೃತಿಕ ದ್ವೈಮಾಸಿಕವು ಧಾರವಾಡದ ಸಾಹಿತ್ಯ ಪತ್ರಿಕೆಗಳ ಪರಂಪರೆಯ ಹೊಸ ಪಲ್ಲವವಾಗಿ ಮೂಡಿಬರುತ್ತಿದೆ.
ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
ಸಮಾಹಿತ
ಸಂಪಾದಕನ ಟಿಪ್ಪಣಿ…
ಕಾವ್ಯದ ಆತ್ಮ
ಪು. ತಿ. ನರಸಿಂಹಾಚಾರ್ಯರ ಕಾವ್ಯ ಮತ್ತು ಗದ್ಯ
ಸುಬ್ಬು ಹೊಲೆಯಾರ್ ಅವರ ಐದು ಕವಿತೆಗಳು
ಮಾಂತ್ರಿಕ ವಾಸ್ತವತೆಯ ಸ್ವರೂಪ
ರೂಪಾಂತರ
ಆನಂದ ಝುಂಜರವಾಡ ಅವರ ನಾಲ್ಕು ಕವಿತೆಗಳು
ಆಧುನಿಕತೆ ಎಂಬ ವಿಪರ್ಯಾಸ
ಸ್ವಾತಂತ್ರ್ಯ ಹೋರಾಟದ ಸುಂದರ ಕ್ಷಣ : ಮೌಲಾನಾ ಆಝಾದರ ವಿಚಾರಣೆ
ಅನುಪಮಾ ಪ್ರಸಾದ ಅವರ ಎರಡು ಕವಿತೆಗಳು
ಬೊರ್ರಾ ಗುಹೆಗಳು ಮತ್ತು ಅರಕು ಕಣಿವ
ಸೂಕ್ಷ್ಮತೆ ಮತ್ತು ಸಮಗ್ರತೆಯ ಸಮತೋಲನದ `ಅಪ್ರಮೇಯ’
ತಾವರೆ ಅರಳುವ ಸದ್ದು ಕೇಳಿಸಿಕೊಳ್ಳುವ ಅಕಿರ ಕುರೊಸಾವನ: ಕೆಲವು ನೆನಪುಗಳು…
ಸೋಮನಾಥ ಗೀತಯೋಗಿಯವರ ಎರಡು ಕವಿತೆಗಳು
ಅಗೆವಾಗ್ಗೆ – ಸಿಕ್ಕಿದ್ದು…
ನೆಲನಡುಗುವ ಸಮಯ- -40%
ಬೀಜದೊಳಗಣ ವೃಕ್ಷ
0Original price was: ₹180.00.₹108.00Current price is: ₹108.00.ಬೀಜದೊಳಗಣ ವೃಕ್ಷ
ಶ್ರೀಮತಿ ಗೀತಾ ವಸಂತ ಅವರು ಬೇಂದ್ರೆ ಕಾವ್ಯದ ವಿರಾಟ್ ಸ್ವರೂಪದ ಬಗ್ಗೆ `ಬೀಜದೊಳಗಣ ವೃಕ್ಷ’ ಎಂಬ ಹೆಸರಿನಿಂದ ಅಧ್ಯಯನ ಗ್ರಂಥವೊಂದನ್ನು ಬರೆದು ಪ್ರಸ್ತುತ ಪಡಿಸುತ್ತಿದ್ದಾರೆ. ಈ ವಿಷಯದ ಬಗ್ಗೆ ಅವರು ತುಮಕೂರು ವಿಶ್ವವಿದ್ಯಾಲಯಕ್ಕೆ ಮಹಾಪ್ರಬಂಧವನ್ನು ಸಲ್ಲಿಸಿ ಡಿ.ಲಿಟ್. ಪದವಿ ಪಡೆದಿದ್ದಾರೆ. ಅದನ್ನು ಓದುಗರಿಗೆ ಉಪಯೋಗವಾಗುವ ರೀತಿಯಲ್ಲಿ ಮಾರ್ಪಡಿಸಿ ಕೃತಿ ರಚಿಸಿದ್ದಾರೆ.