ಸುಮಾರು ಎಂಭತ್ತು-ತೊಂಬತ್ತು ವರ್ಷಗಳ ಹಿಂದೆ ಇಡೀ ರಾಷ್ಟ್ರವೇ ಸ್ವಾತಂತ್ರ್ಯಕ್ಕಾಗಿ ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಒಂದಾಗಿ ಹೋರಾಡುತ್ತಿತ್ತು. ಈ ವಿಷಯದಲ್ಲಿ ಕರ್ನಾಟಕವೂ ಹಿಂದೆ ಬಿದ್ದಿರಲಿಲ್ಲ. ರಾಜಕೀಯದಷ್ಟೇ ಸಾಂಸ್ಕೃತಿಕವಾಗಿಯೂ ತನ್ನ ಹಿರಿಮೆಯನ್ನು ಕರ್ನಾಟಕ ಮೆರೆದಿತ್ತು. ಉತ್ತರ ಕರ್ನಾಟಕದಲ್ಲಿ ಅನೇಕ ಹಿರಿ-ಕಿರಿಯ ಲೇಖಕರು, ಬರಹಗಾರರು ತಮ್ಮ ಬರಹಗಳ ಮೂಲಕ ಜನ ಜಾಗೃತಿಯಲ್ಲಿ ತೊಡಗಿದ್ದರು. ದ.ರಾ. ಬೇಂದ್ರೆ ಪ್ರಮುಖರಲ್ಲಿ ಒಬ್ಬರು. ತಮ್ಮ ಸಮಾನ ಮನಸ್ಕರ ಜತೆ ಸೇರಿಕೊಂಡು ಗೆಳೆಯರ ಗುಂಪು ಸ್ಥಾಪಿಸಿದರು. ಈ ಗೆಳೆಯರ ಗುಂಪಿನ ಸಾಧನೆ ಇಂದಿಗೂ ಒಂದು ಇತಿಹಾಸ. ಸ್ವಲ್ಪೇ ದಿನ ಕಾರ್ಯ ವಹಿಸಿದರೂ ಗೆಳೆಯರ ಗುಂಪು ಸಾಂಸ್ಕೃತಿಕವಾಗಿ ಬಹು ದೊಡ್ಡ ಹೆಸರನ್ನು ಮಾಡಿತು. ಈ ಗುಂಪಿನ ಸದಸ್ಯರೆಲ್ಲ ನಂತರ ದಿನಗಳಲ್ಲಿ ಪ್ರಖ್ಯಾತ ಲೇಖಕರಾದರು. ಸಾಧನೆ ಇಲ್ಲಿಯೇ ನಿಲ್ಲಲಿಲ್ಲ. ದ.ರಾ. ಬೇಂದ್ರೆ ನಂತರದ ದಿನಗಳಲ್ಲೂ ನೂರಾರು ಲೇಖಕರಿಗೆ ಮಾರ್ಗದರ್ಶಕರಾದರು. ಸ್ವಧರ್ಮ ಮತ್ತು ಜಯ ಕರ್ನಾಟಕ ಪತ್ರಿಕೆಗಳು ಗೆಳೆಯರ ಗುಂಪಿನ ಪತ್ರಿಕೆಗಳು. ನಾಡ ಹಬ್ಬ ಆಚರಿಸಿದ ಹೆಮ್ಮೆ ಗೆಳೆಯರ ಗುಂಪಿಗೆ. ಈ ಎಲ್ಲ ಸಾಧನೆ, ಆದರ್ಶಗಳೇ ಮನೋಹರ ಗ್ರಂಥಮಾಲೆಯ ಸ್ಥಾಪನೆಗೆ ಕಾರಣವಾದವು.
- -40%
ಉಮೇದುವಾರರು
0Original price was: ₹250.00.₹150.00Current price is: ₹150.00.ಡಾ. ಲೋಹಿತ್ ನಾಯ್ಕರ ರಾಜಕೀಯ ಕಾದಂಬರಿ “ಉಮೇದುವಾರರು”.
ಡಾ. ಲೋಹಿತ್ ನಾಯ್ಕರ ರಾಜಕೀಯದಲ್ಲೂ ತೊಡಗಿಸಿಕೊಂಡಿದ್ದರಿಂದ ರಾಜಕೀಯದ ಒಳಹೊರಗನ್ನು ಬಲ್ಲವರಾಗಿದ್ದಾರೆ. ಹಾಗಾಗಿ ಅವರ ಅನುಭವದ ಮೂಸೆಯಿಂದ ಹೊರಬಂದಿರುವ ಈ ಕಾದಂಬರಿಯ ಕಥಾವಸ್ತುವಿಗೆ ಮತ್ತು ಇಲ್ಲಿನ ಪಾತ್ರಗಳಿಗೆ ಅಧಿಕೃತತೆ ದಕ್ಕಿರುವುದರಿಂದ ಕೃತಿಯ ಘನತೆಯನ್ನು ಹೆಚ್ಚಿಸಿದೆ. ಹೈದರಾಬಾದ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದಲ್ಲಿ ಎರಡು ರಾಜಕೀಯ ಕುಟುಂಬಗಳಲ್ಲಿ ನಡೆಯುವ ಹಗ್ಗಜಗ್ಗಾಟದ ಜೊತೆಗೆ ಮಧ್ಯ ಕರ್ನಾಟಕದಲ್ಲಿ ಹಣ, ಹೆಂಡ ಮತ್ತು ಸಾರಾಯಿ ಇವುಗಳ ಜೊತೆಗೆ ಜಾತಿವ್ಯವಸ್ಥೆ ಹೇಗೆ ರಾಜಕೀಯ ದಾಳಗಳಾಗಬಲ್ಲವು ಎಂಬುದನ್ನು ಅತ್ಯಂತ ನವಿರಾದ ಹಾಗೂ ಲವಲವಿಕೆಯ ಭಾಷೆಯಲ್ಲಿ ಲೋಹಿತ್ ಹಿಡಿದಿಟ್ಟಿದ್ದಾರೆ. - -40%
ಕೇತಕಿಯ ಬನ
0Original price was: ₹120.00.₹72.00Current price is: ₹72.00.ಕೇತಕಿಯ ಬನ
ಈ ಪುಸ್ತಕವು ಶ್ರೀಧರ ಬಳಗಾರ ಅವರು ಬರೆದ ಕಾದಂಬರಿ ಆಗಿದೆ . - -40%
ಪ್ರೇಯಸಿಗೆ ಪತ್ರಗಳು
0Original price was: ₹80.00.₹48.00Current price is: ₹48.00.ಪ್ರೇಯಸಿಗೆ ಪತ್ರಗಳು:
ಈ ಪುಸ್ತಕವು ಕೃಷ್ಣಾ ನಂದ ಕಾಮತರ ಪತ್ರ ಸಂಕಲನವನ್ನು ಒಳಗೊಂಡಿದೆ. - -40%
ತ್ರಸ್ತ
0Original price was: ₹130.00.₹78.00Current price is: ₹78.00.ತ್ರಸ್ತ
ಈ ಪುಸ್ತಕವು ರೇಖಾ ಕಾಖಂಡಕಿ ಅವರು ಬರೆದ ಕಾದಂಬರಿಯಾಗಿದೆ. - -52%
ಸಮಾಹಿತ -ವಸಂತ ಸಂಚಿಕೆ-೨೦೧೮
0Original price was: ₹100.00.₹48.00Current price is: ₹48.00.ಸಮಾಹಿತ –
(ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ)
ವಸಂತ ಸಂಚಿಕೆ
ಸಂಪುಟ-3 ಸಂಚಿಕೆ-3
ಮೇ-ಜೂನ್ 2018ಇದೊಂದು ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ ಪತ್ರಿಕೆಯಾಗಿದೆ. ಡಾ. ಗಿರಡ್ಡಿ ಗೋವಿಂದರಾಜರ ಅಧ್ಯಕ್ಷತೆಯಲ್ಲಿ `ಸಮಾಹಿತ ಟ್ರಸ್ಟ್ ಧಾರವಾಡ’ ಸ್ಥಾಪನೆಗೊಂಡು ಅದರ ಆಶ್ರಯದಲ್ಲಿ `ಸಮಾಹಿತ’ ಸಾಹಿತ್ಯಕ ಸಾಂಸ್ಕೃತಿಕ ದ್ವೈಮಾಸಿಕವು ಧಾರವಾಡದ ಸಾಹಿತ್ಯ ಪತ್ರಿಕೆಗಳ ಪರಂಪರೆಯ ಹೊಸ ಪಲ್ಲವವಾಗಿ ಮೂಡಿಬರುತ್ತಿದೆ.
ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
ಗಿರಡ್ಡಿ ಎಂಬ ನಾಶವಾಗದ ಮಾನವೀಯ ತುಡಿತ….
ನಾವೊಂದು ಜಡ ಸಮಾಜವಾಗಿಬಿಡುತ್ತಿದ್ದೇವೆ :
ರಾಜೇಂದ್ರ ಪ್ರಸಾದ್ ಅವರ ಐದು ಕವಿತೆಗಳು
`ಅಂಧಾಭಿಮಾನ ಮತ್ತು ಇತಿಹಾಸ’
ಡಾ. ಬಿ. ಎನ್. ಸುಮಿತ್ರಾಬಾಯಿಯವರೊಂದಿಗೆ
ಅಂತರ್ಶಾಸ್ತ್ರೀಯ ಜಿಜ್ಞಾಸೆ ಆಧುನಿಕತೆ – ಕಲೆ – ಮಾರುಕಟ್ಟೆ ಮತ್ತು
ಡಬ್ಲ್ಯೂ. ಬಿ. ಯೇಟ್ಸ ಅವರ ಎರಡು ಕವಿತೆಗಳು
ಕಥೆ
ದುಃಖಿ ಮುಸ್ಲಿಮನ ಎರಡು ವಿಷಾದ ಗೀತಗಳು…
ಅನಿಕೇತನ ಅವರ ಎರಡು ಕವಿತೆಗಳು
ಕಥೆ ಬ್ಲ್ಯೂಬೆರಿ ಕೇಕ್
ಪ್ರತಿಕ್ರಿಯೆ…
ಅಗೆವಾಗ್ಗೆ – ಸಿಕ್ಕಿದ್ದು…
ನಾಲ್ಕು ಪುಸ್ತಕಗಳು…
ಮುಖಪುಟದ ಚಿತ್ರ : ಗೆರ್ನಿಕಾ - -40%
ಬಿಳಿ ಸಾಹೇಬನ ಭಾರತ
0Original price was: ₹90.00.₹54.00Current price is: ₹54.00.ಬಿಳಿ ಸಾಹೇಬನ ಭಾರತ
ಈ ಪುಸ್ತಕವು ಎನ್ ಜಗದೀಶ್ ಕೊಪ್ಪ ಅವರು ಅನುವಾದಿಸಿದ ಜಿಮ್ ಕಾರ್ಬೆಟ್ ಅವರ
ಜೀವನಗಾಥೆ.
- -40%
ರಾಕ್ಷಸ-ತಂಗಡಿ
0Original price was: ₹120.00.₹72.00Current price is: ₹72.00.ರಾಕ್ಷಸ-ತಂಗಡಿ
ಗಿರೀಶ ಕಾರ್ನಾಡ ಅವರು ರಚಿಸಿದ ನಾಟಕ.
- -40%
ಕಾಡಿನ ದಾರಿ
0Original price was: ₹110.00.₹66.00Current price is: ₹66.00.ಕಾಡಿನ ದಾರಿ
ಶ್ರೀ ಜಿ. ಪಿ. ಬಸವರಾಜು ಅವರ ಕಾದಂಬರಿ.