ಸುಮಾರು ಎಂಭತ್ತು-ತೊಂಬತ್ತು ವರ್ಷಗಳ ಹಿಂದೆ ಇಡೀ ರಾಷ್ಟ್ರವೇ ಸ್ವಾತಂತ್ರ್ಯಕ್ಕಾಗಿ ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಒಂದಾಗಿ ಹೋರಾಡುತ್ತಿತ್ತು. ಈ ವಿಷಯದಲ್ಲಿ ಕರ್ನಾಟಕವೂ ಹಿಂದೆ ಬಿದ್ದಿರಲಿಲ್ಲ. ರಾಜಕೀಯದಷ್ಟೇ ಸಾಂಸ್ಕೃತಿಕವಾಗಿಯೂ ತನ್ನ ಹಿರಿಮೆಯನ್ನು ಕರ್ನಾಟಕ ಮೆರೆದಿತ್ತು. ಉತ್ತರ ಕರ್ನಾಟಕದಲ್ಲಿ ಅನೇಕ ಹಿರಿ-ಕಿರಿಯ ಲೇಖಕರು, ಬರಹಗಾರರು ತಮ್ಮ ಬರಹಗಳ ಮೂಲಕ ಜನ ಜಾಗೃತಿಯಲ್ಲಿ ತೊಡಗಿದ್ದರು. ದ.ರಾ. ಬೇಂದ್ರೆ ಪ್ರಮುಖರಲ್ಲಿ ಒಬ್ಬರು. ತಮ್ಮ ಸಮಾನ ಮನಸ್ಕರ ಜತೆ ಸೇರಿಕೊಂಡು ಗೆಳೆಯರ ಗುಂಪು ಸ್ಥಾಪಿಸಿದರು. ಈ ಗೆಳೆಯರ ಗುಂಪಿನ ಸಾಧನೆ ಇಂದಿಗೂ ಒಂದು ಇತಿಹಾಸ. ಸ್ವಲ್ಪೇ ದಿನ ಕಾರ್ಯ ವಹಿಸಿದರೂ ಗೆಳೆಯರ ಗುಂಪು ಸಾಂಸ್ಕೃತಿಕವಾಗಿ ಬಹು ದೊಡ್ಡ ಹೆಸರನ್ನು ಮಾಡಿತು. ಈ ಗುಂಪಿನ ಸದಸ್ಯರೆಲ್ಲ ನಂತರ ದಿನಗಳಲ್ಲಿ ಪ್ರಖ್ಯಾತ ಲೇಖಕರಾದರು. ಸಾಧನೆ ಇಲ್ಲಿಯೇ ನಿಲ್ಲಲಿಲ್ಲ. ದ.ರಾ. ಬೇಂದ್ರೆ ನಂತರದ ದಿನಗಳಲ್ಲೂ ನೂರಾರು ಲೇಖಕರಿಗೆ ಮಾರ್ಗದರ್ಶಕರಾದರು. ಸ್ವಧರ್ಮ ಮತ್ತು ಜಯ ಕರ್ನಾಟಕ ಪತ್ರಿಕೆಗಳು ಗೆಳೆಯರ ಗುಂಪಿನ ಪತ್ರಿಕೆಗಳು. ನಾಡ ಹಬ್ಬ ಆಚರಿಸಿದ ಹೆಮ್ಮೆ ಗೆಳೆಯರ ಗುಂಪಿಗೆ. ಈ ಎಲ್ಲ ಸಾಧನೆ, ಆದರ್ಶಗಳೇ ಮನೋಹರ ಗ್ರಂಥಮಾಲೆಯ ಸ್ಥಾಪನೆಗೆ ಕಾರಣವಾದವು.
-
-10%
ಇಣುಕಿದಲ್ಲಿ ಛಂದ
0ಇಣುಕಿದಲ್ಲಿ ಛಂದ
(ಲಲಿತ ಪ್ರಬಂಧಗಳು)ಕಾವ್ಯ ನನಗೆ ಮೌನಗಳ ಮೀಟುವ ಏಕತಾರಿ. ನಾಟಕ ಹಲವು ಸಮಸ್ಯೆಗಳ ಚಿಂತನೆಯ ಅನಾವರಣ. ಸುತ್ತಲಿನ ನನಗಿಷ್ಟವಾದದ್ದನ್ನೆಲ್ಲ ಎತ್ತಿಕೊಂಡು ತನ್ಮಯಳಾಗುವ ಖುಷಿ, ಲಲಿತ ಪ್ರಬಂಧ.
ಎದುರಾಗುವ ಸನ್ನಿವೇಶ, ವ್ಯಕ್ತಿಗಳನ್ನು ರಾಗಭಾವಗಳಿಂದ ಪ್ರತ್ಯೇಕಿಸಿ ನವಿರು ಹಾಸ್ಯಕ್ಕೆ ಪ್ರತಿಮೆಯಾಗಿಸಿಯೂ, ಓರೆ ಕೋರೆಗಳ ಸಾಪೇಕ್ಷತೆಯನ್ನು ಈ ಪ್ರಪಂಚದ ಸಾರ್ವತ್ರಿಕ ಸಹಜ ನಡವಳಿಕೆಯಾಗಿ ಸ್ವೀಕರಿಸುವ ಆರೋಗ್ಯಕರ ಔದಾರ್ಯವೇ ಲಲಿತಪ್ರಬಂಧದ ಜೀವನಾಡಿ. ಯಾವುದೇ ಸಾಹಿತ್ಯಿಕ ಕಾಲಘಟ್ಟದ ಹಣೆಪಟ್ಟಿಯ ಹಂಗಿಲ್ಲದೆ ಹರಿವ ಹೊಳೆ ಲಲಿತ ಪ್ರಬಂಧ. ನನ್ನ ಬೊಗಸೆಯಲಿ ಹಿಡಿವಷ್ಟು ಸಲಿಲವನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ. ಕನ್ನಡದಲ್ಲಿ ಗೊರೂರು, ವಿ. ಸೀ., ಪು.ತಿ.ನ., ಎ. ಎನ್. ಮೂರ್ತಿರಾಯರು, ಅ. ರಾ. ಮಿತ್ರ ಮುಂತಾದ ಲೇಖಕರು ಲಲಿತ ಪ್ರಬಂಧ ಪ್ರಕಾರವನ್ನು ಬೆಳೆಸಿದ್ದಾರೆ. ಮನೆಯ ಪುಸ್ತಕದ ರಾಶಿಯಲ್ಲಿ ಮೊದಲು ನನ್ನ ಕಣ್ಣಿಗೆ ಬಿದ್ದ ರಾ. ಕು. ಅವರ `ಗಾಳಿಪಟ’ ಪ್ರತಿಯೊಂದು ಮರು ಓದಿನಲ್ಲೂ ಅದೇ ಸಂತೋಷ ಕೊಡುವ ಕೃತಿ. -
-10%
ಉತ್ತರ ವಿಹಾರ
0ಉತ್ತರ ವಿಹಾರ
(ಪ್ರವಾಸಕಥನ)ಕಳೆದ ಎರಡು ಮೂರು ವರ್ಷಗಳಲ್ಲಿ ದೇಶದ ಉತ್ತರ ಭಾಗಗಳಲ್ಲಿ ಕೈಗೊಂಡ ಪ್ರವಾಸದ ಫಲಸ್ವರೂಪ ಈ ಕೃತಿ. ಉತ್ತರಪ್ರದೇಶ ಮತ್ತು ಬಿಹಾರದ ಪ್ರಮುಖ ಪ್ರವಾಸಿ ತಾಣಗಳಲ್ಲದೆ, ಕಾಶ್ಮೀರ, ಉತ್ತರಾಖಂಡದ ಕೆಲವು ಪ್ರೇಕ್ಷಣೀಯ ಸ್ಥಳಗಳು ಹಾಗೂ ಪೂರ್ವಾಂಧ್ರ ಕುರಿತು ಎರಡು ಕಥನಗಳು ಕೃತಿಯಲ್ಲಿ ಸೇರಿವೆ. ಇವುಗಳಲ್ಲಿ ಕಾಶ್ಮೀರ ಪ್ರವಾಸ ಮಾತ್ರ ಸಹಕುಟುಂಬ ಪ್ರವಾಸವಾಗಿದ್ದರೆ, ಉಳಿದ ಪ್ರವಾಸಗಳು ಸಹೃದಯ ಸನ್ಮಿತ್ರರೊಂದಿಗೆ ಕೈಗೊಂಡ ಪ್ರವಾಸಗಳು. ನೋಡುವ ಕಣ್ಣಿಗೆ ಪ್ರತಿ ಪ್ರವಾಸವೂ ಒಂದು ಅಪೂರ್ವ ಅನುಭವವೆ. ಒಂದು ಪ್ರದೇಶದ ಇತಿಹಾಸ, ಭೂಗೋಳ, ಪರಂಪರೆ ಕುರಿತು ತೀವ್ರ ಆಸಕ್ತಿ ನನ್ನ ಪ್ರವಾಸ ಕಥನಗಳ ಹಿಂದಿನ ಪ್ರೇರಕ ಶಕ್ತಿ. ಪ್ರತಿಯೊಂದು ವಿಶಿಷ್ಟ, ವಿಭಿನ್ನ. ನನ್ನ ಹಿಂದಿನ ಆರೂ ಪ್ರವಾಸ ಕಥನಗಳಿಗೆ ಓದುಗರಿಂದ ಒಳ್ಳೆಯ ಸ್ಪಂದನೆ ಸಿಕ್ಕಿದೆ.
-
-10%
ಮಕರಂದ
0ಮಕರಂದ:
ಇದು ವಿ .ಎಸ್. ಕುಲಕರ್ಣಿ ಯವರ ಕವನ ಸಂಕಲನವಾಗಿದೆ.
-
-10%
ಮೃತ್ಯು ಗೆದ್ದ ನಚಿಕೇತ
0ಮೃತ್ಯು ಗೆದ್ದ ನಚಿಕೇತ
ಕಠೋಪನಿಷತ್ತಿನ ಕಥಾನಕ ಆಧರಿತ ನಾಟಕ
-
-10%
ದಶಾವತಾರ
0ದಶಾವತಾರ
ಈ ಪುಸ್ತಕವು ಮಾಗೋಡು ರಾಮ ಹೆಗಡೆ ಅವರ ಆತ್ಮಕಥನವನ್ನು ಒಳಗೊಂಡಿದೆ.
-
-10%
ತ್ರಸ್ತ
0ತ್ರಸ್ತ
ಈ ಪುಸ್ತಕವು ರೇಖಾ ಕಾಖಂಡಕಿ ಅವರು ಬರೆದ ಕಾದಂಬರಿಯಾಗಿದೆ.
-
-10%
ಪ್ರೇಯಸಿಗೆ ಪತ್ರಗಳು
0ಪ್ರೇಯಸಿಗೆ ಪತ್ರಗಳು
ಈ ಪುಸ್ತಕವು ಕೃಷ್ಣಾ ನಂದ ಕಾಮತರ ಪತ್ರ ಸಂಕಲನವನ್ನು ಒಳಗೊಂಡಿದೆ.