ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಸಮೀಪದ ಮೇಳಿಗೆಯಲ್ಲಿ ೨೧ ಡಿಸೆಂಬರ್ ೧೯೩೨ರಂದು ಜನಿಸಿದ ಯು.ಆರ್. ಅನಂತಮೂರ್ತಿಯವರು ಶಿವಮೊಗ್ಗ, ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿ, ಬಳಿಕ ಬರ್ಮಿಂಗ್‌ಹ್ಯಾಂ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದರು. ಶಿವಮೊಗ್ಗದ ಸಹ್ಯಾದ್ರಿ ಕಾಲೇಜು, ಮೈಸೂರಿನ ರೀಜನಲ್ ಕಾಲೇಜು ಮತ್ತು ಮೈಸೂರು ವಿಶ್ವವಿದ್ಯಾಲಯಗಳಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಕೆಲಸ ಮಾಡಿದರು.
ಮಾರ್ಕ್ಸ್‌ನ ವಾದ ಸ್ಥೂಲವಾಗಿ ಇದು: ವ್ಯಕ್ತಿ-ವ್ಯಕ್ತಿಗಳ ನಡುವೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಏರ್ಪಡುವ ಎಲ್ಲ ರೀತಿಯ ಸಂಬಂಧಗಳ ಒಟ್ಟು ಮೊತ್ತ ಒಂದು ಸಮಾಜ ವ್ಯವಸ್ಥೆ ಎನ್ನಿಸಿಕೊಳ್ಳುತ್ತದೆ. ಯಾವ ರೀತಿಯ ಸಮಾಜ ವ್ಯವಸ್ಥೆಯೇ ಆಗಲಿ, ಅದರ ಮುಖ್ಯವಾದ ಸ್ವರೂಪ ನಿರ್ಣಯವಾಗುವುದು ಅದರ ತಳಪಾಯದಂತಿರುವ ಆರ್ಥಿಕ ವ್ಯವಸ್ಥೆಯ ಮೇಲೆ. ಆದ್ದರಿಂದಲೇ, ಆರ್ಥಿಕ ವ್ಯವಸ್ಥೆಯಲ್ಲಿ – ಅಂದರೆ ಉತ್ಪತ್ತಿ ಸಂಪಾದನಾ ಕ್ರಮಗಳಲ್ಲಿ – ಮೂಲಭೂತವಾದ ಬದಲಾವಣೆಗಳು ಆದಾಗ್ಗೆಲ್ಲ ವ್ಯಕ್ತಿ-ವ್ಯಕ್ತಿಗಳ ನಡುವಿನ ಎಲ್ಲ ಇತರ ಸಂಬಂಧಗಳಲ್ಲೂ ಸೂಕ್ಷ್ಮ ಮಾರ್ಪಾಡುಗಳು ಆಗುತ್ತವೆಂಬುದನ್ನು ನಾವು ಇತಿಹಾಸದುದ್ದಕ್ಕೂ ಕಾಣುತ್ತೇವೆ.
ಫ್ರಾಯ್ಡನ ಮೂಲಭೂತ ‘ಕಾಮ’ದಂತೆಯೇ ಮಾರ್ಕ್ಸ್‌ನ ಈ ದೃಷ್ಟಿಯೂ ಮನುಷ್ಯನ ಸೂಕ್ಷ್ಮ ಸಮಸ್ಯೆಗಳನ್ನೆಲ್ಲ ಸರಳಗೊಳಿಸುವ ಸಾಧ್ಯತೆ ಇದೆ. ಆದರೆ ಸುಖ ಸಂಕಟಗಳಿಗೆ ಕಾರಣವಾಗಿ ಬದಲಾಗುತ್ತಿರುವ ಇಂದಿನ ಸಮಾಜವನ್ನೇ ಆಗಲಿ, ಮನುಷ್ಯನ ಒಟ್ಟು ಇತಿಹಾಸವನ್ನೇ ಆಗಲಿ ಅರಿಯಲು ಪ್ರಯತ್ನ ಮಾಡುವವನಿಗೆ ಆಧ್ಯಾತ್ಮವಾದಿಯ ಸನಾತನ ತತ್ವಗಳಿಗಿಂತ ಮಾರ್ಕ್ಸ್‌ನ ದ್ವಂದ್ವಾತ್ಮಕ ವಸ್ತುವಾದ ಹೆಚ್ಚು ಪ್ರಯೋಜನ ಉಳ್ಳ ದೃಷ್ಟಿಕೋನವನ್ನು ಒದಗಿಸುತ್ತದೆ.
ಉದಾಹರಣೆಗೆ: ಭಾರತೀಯನೊಬ್ಬನ ಒಟ್ಟು ಮನೋಧರ್ಮಕ್ಕೂ, ಯುರೋಪಿಯನ್ ಒಬ್ಬನ ಮನೋವೃತ್ತಿಗೂ – ಆದ್ದರಿಂದ ಇಬ್ಬರ ಲೋಕದೃಷ್ಟಿಗೂ – ನಡುವೆ ಇರುವ ವ್ಯತ್ಯಾಸಕ್ಕೆ ಕಾರಣ ಇಬ್ಬರ ಸ್ವಭಾವದಲ್ಲಿರುವ ಮೂಲಭೂತವಾದ ಅಂತರ ಎನ್ನುವುದಕ್ಕಿಂತ ಹೆಚ್ಚಾಗಿ, ಯೂರೋಪಿನ ಕೈಗಾರಿಕಾ ಕ್ರಾಂತಿ ಒಂದು ಘಟ್ಟ ಮುಟ್ಟಿದೆ, ಭಾರತದಲ್ಲಿ ಅದು ಇನ್ನೂ ಪ್ರಾರಂಭವಾಗಿದೆ ಎನ್ನುವುದೇ ಹೆಚ್ಚು ಸಮರ್ಪಕವಾದ ಉತ್ತರ. ಯೂರೋಪ್ ಭಾರತಗಳಷ್ಟು ದೂರದ ದೇಶಗಳ ಅಂತರದ ಮಾತಿರಲಿ, ಭಾರತದಲ್ಲೇ ಮನುಷ್ಯನ ಮನೋಧರ್ಮ ಹಳ್ಳಿ ಮತ್ತು ಪಟ್ಟಣಗಳಲ್ಲಿ ಬೇರೆ ಬೇರೆ ರೀತಿ ವ್ಯಕ್ತವಾಗುವುದನ್ನು ನಾವು ಕಾಣಬಹುದು. ಒಡೆಯ-ಒಕ್ಕಲು ಸಂಬಂಧ ನಡೆಯುವ ಹಳ್ಳಿಯೊಂದರಲ್ಲಿ ಈ ಸಂಬಂಧದ ತಳಪಾಯದ ಮೇಲೆ ನಿಂತಿರುವ ಉಳಿದೆಲ್ಲ ವ್ಯವಹಾರಗಳ ಮೂಲಕ ರೂಪಿತವಾಗುವ ಜೀವನದೃಷ್ಟಿ ಬೇರೆ, ಮಾಲಿಕ-ನೌಕರ ಸಂಬಂಧವೇ ಅಡಿಗಲ್ಲಾದ ಪಟ್ಟಣದಲ್ಲಿ ಮೂಡುವ ಬಾಳಿನ ಸ್ವರೂಪ ಬೇರೆ. ಜಾತಿಪದ್ಧತಿಯಾಗಲಿ, ಪರಂಪರಾನುಗತವಾಗಿ ಪೂರ್ವನಿಶ್ಚಿತವಾದ ತಮ್ಮ ತಮ್ಮ ಸ್ಥಾನದ ಕಲ್ಪನೆಯಾಗಲಿ, ಅವಯವ ಸಾಮರಸ್ಯದ ಗ್ರಾಮ ಜೀವನದ ಅನ್ಯೋನ್ಯತೆಯಾಗಲಿ ಬೃಹತ್ ನಗರವೊಂದರಲ್ಲಿ ಕಾರಣವಾಗಿ ಬದಲಾಗುತ್ತಿರುವ ಇಂದಿನ ಸಮಾಜವನ್ನೇ ಆಗಲಿ, ಮನುಷ್ಯನ ಒಟ್ಟು ಇತಿಹಾಸವನ್ನೇ ಆಗಲಿ ಅರಿಯಲು ಪ್ರಯತ್ನ ಮಾಡುವವನಿಗೆ ಆಧ್ಯಾತ್ಮವಾದಿಯ ಸನಾತನ ತತ್ವಗಳಿಗಿಂತ ಮಾರ್ಕ್ಸ್‌ನ ದ್ವಂದ್ವಾತ್ಮಕ ವಸ್ತುವಾದ ಹೆಚ್ಚು ಪ್ರಯೋಜನ ಉಳ್ಳ ದೃಷ್ಟಿಕೋನವನ್ನು ಒದಗಿಸುತ್ತದೆ.
Reviews
There are no reviews yet.