ಸುರಗಂಗೆ
ಪಾರ್ವತಿ ಜಿ. ಐತಾಳ್ ಸಮಗ್ರ ಕೃತಿ ನೋಟ
ಆಧುನಿಕ ಯುಗದಲ್ಲಿ ಸ್ತ್ರೀಯರಿಗೆ ಸ್ವಾತಂತ್ರ್ಯ ಸಿಕ್ಕಿದೆ, ಅವರ ಜೀವನದಲ್ಲಿ ಬದಲಾವಣೆಗಳಾಗಿವೆ ಎಂಬ ಮಾತು ಬಹಳಷ್ಟು ಕೇಳಿ ಬರುತ್ತದೆಯಾದರೂ, ವಾಸ್ತವದಲ್ಲಿ ಮಹಿಳೆಯರು ತಮ್ಮ ಸಂಕಷ್ಟಗಳಿಂದ ಪೂರ್ತಿಯಾಗಿ ಮುಕ್ತರಾಗಿಲ್ಲ. ಅವರಿಗೆ ಶಿಕ್ಷಣ ಸಿಗುತ್ತಿದೆ, ಉದ್ಯೋಗ ಲಭಿಸುತ್ತಿದೆ, ಆರ್ಥಿಕವಾಗಿ ಅವರು ಸ್ವತಂತ್ರರಾಗಿದ್ದಾರೆ ಎನ್ನುವುದೇನೋ ಸರಿ. ಆದರೆ ಅವರ ಮೇಲೆ ಸಂಪ್ರದಾಯವು ಹೇರಿರುವ ಗೃಹಿಣಿಯ ಪಟ್ಟ ಮಾತ್ರ ಇನ್ನೂ ಹಾಗೆಯೇ ಇದೆ ಎನ್ನುವುದೂ ಅಷ್ಟೇ ಸತ್ಯ.
ಓರ್ವ ಪುರುಷ ಪ್ರತಿಭಾವಂತನಾಗಿದ್ದರೆ ಅವನಿಗೆ ಅದನ್ನು ಬೆಳೆಸಿಕೊಳ್ಳಲು ಅವಕಾಶ, ಸಮಯ, ಪ್ರೋತ್ಸಾಹ ಎಲ್ಲವೂ ಸಿಗುವ ಹಾಗೆ ಮಹಿಳೆಯರಿಗೆ ಸಿಗಲಾರದು. ಗೃಹಿಣಿಯಾಗಿ ಸಂಪ್ರದಾಯವು ಆಕೆಗೆ ವಿಧಿಸಿದ ಎಲ್ಲ ಜವಾಬ್ದಾರಿಗಳನ್ನೂ ನಿರ್ವಹಿಸಿ ಉಳಿದ ಸಮಯದಲ್ಲಷ್ಟೇ ಆಕೆ ತನ್ನ ವೈಯಕ್ತಿಕ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಾಧ್ಯ. ಇನ್ನು ಆಕೆ ಉದ್ಯೋಗದಲ್ಲಿದ್ದರಂತೂ ಕೇಳುವುದೇ ಬೇಡ. ಅದು ಒಂದು ರೀತಿಯಲ್ಲಿ ಎರಡು ದೋಣಿಗಳಲ್ಲಿ ಕಾಲಿಟ್ಟು ಸಮದೂಗಿಸಿಕೊಂಡು ಹೋಗುವ ಸರ್ಕಸ್ ಇದ್ದ ಹಾಗೆ. ಹೆಣ್ಣಿನ ವಿಚಾರದಲ್ಲಿ ಸಮಾಜ ಹಾಕಿದ ಕಟ್ಟುಪಾಡುಗಳು ಇನ್ನೂ ಪೂರ್ಣ ಸಡಿಲಾಗಿಲ್ಲ. ಆದರೂ ಈ ಎಲ್ಲ ಸಮಸ್ಯೆಗಳನ್ನು ಎದುರಿಸಿ, ಸಮಯವನ್ನು ಹೊಂದಿಸಿಕೊಂಡು ಸಾಧನೆ ಮಾಡುವುದಿದೆಯಲ್ಲ ಅದು ನಿಜಕ್ಕೂ ಶ್ರೇಷ್ಠ ಎನ್ನಿಸಿಕೊಳ್ಳುತ್ತದೆ.
Reviews
There are no reviews yet.