ಶಾಂತಿನಾಥ ದೇಸಾಯಿಯವರು ೨೨, ಜುಲೈ ೧೯೨೯ರಲ್ಲಿ ಉತ್ತರಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಜನಿಸಿದರು. ಹಳಿಯಾಳ, ಧಾರವಾಡಗಳಲ್ಲಿ ಶಿಕ್ಷಣವನ್ನು ಪೂರೈಸಿ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಕೊಲ್ಲಾಪುರ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಮುಂದೆ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದರು. ವಿಮರ್ಶಕರಾಗಿ, ಸಣ್ಣಕಥೆ ಮತ್ತು ಕಾದಂಬರಿಕಾರರಾಗಿ ಪ್ರಸಿದ್ಧರಾದರು. ಕನ್ನಡ ಮತ್ತು ಇಂಗ್ಲಿಷ್‌ಗಳಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಯು.ಆರ್. ಅನಂತಮೂರ್ತಿಯವರ ‘ಅವಸ್ಥೆ’ ಮತ್ತು ಪಿ. ಲಂಕೇಶ್ ಅವರ ‘ಕ್ರಾಂತಿ ಬಂತು ಕ್ರಾಂತಿ’ಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಕನ್ನಡದ ನವ್ಯ ಸಾಹಿತ್ಯಕ್ಕೆ ಗಟ್ಟಿಯಾದ ತಾತ್ತ್ವಿಕ ನೆಲಗಟ್ಟನ್ನು ನೀಡಿದವರು ಶಾಂತಿನಾಥರು. ‘ಕ್ಷಿತಿಜ’, ‘ದಂಡೆ’, ‘ಮುಕ್ತಿ’, ‘ವಿಕ್ಷೇಪ’, ‘ಓಂ ಣಮೋ’, ‘ಸಾಹಿತ್ಯ ಮತ್ತು ಭಾಷೆ’, ‘ನವ್ಯ ಸಾಹಿತ್ಯ ದರ್ಶನ’ ಇವರ ಪ್ರಮುಖ ಕೃತಿಗಳು. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಸಂದಿವೆ. ಇವರು ೨೬, ಮಾರ್ಚ್ ೧೯೯೮ರಲ್ಲಿ ನಿಧನಹೊಂದಿದರು.
ಪರಿವಿಡಿ

ಚಂದೂ
ಕ್ಷಿತಿಜ
ಅವರು, ಕಾರು ಮತ್ತು ನಗೆ
ನಾನಾನ ತೀರ್ಥಯಾತ್ರೆ
ಶಿವೂನ ಬಂಡಾಯ
ಭರಮ್ಯಾ ಹೋಗಿ ನಿಖಿಲನಾದದ್ದು
ಜವಾಬ್ದಾರಿ
ಡಾ. ಶಾಂತಿನಾಥ ದೇಸಾಯಿ ಮುಖ್ಯ ಕೃತಿಗಳು

Additional information

Category

Author

Book Format

Ebook

Language

Kannada

Publisher

Reviews

There are no reviews yet.

Only logged in customers who have purchased this product may leave a review.