Ebook

ಶಬ್ದಾಶಬ್ದ ವಿವೇಕ

Author: Paa Vem Acharya

90.00

ಪದಗಳ ಅರ್ಥಮಾಧುರ್ಯ ಹಾಗೂ ವಿಸ್ತರ ನಮಗೆ ಸಿಗಬೇಕಾದರೆ ನಾವು ಪದವೊಂದರ ಮೂಲಕ್ಕೆ, ನಿಷ್ಪತ್ತಿಗೆ ಲಗ್ಗೆ ಹಾಕಬೇಕು.
ಈಗಿನ ಪ್ರಸ್ತುತ ಹೊತ್ತಗೆ – “ಶಬ್ದಾಶಬ್ದ ವಿವೇಕ”- ಇದರ ವಿಶೇಷತೆಯ “ಪದಾರ್ಥ”ವೇ ವೈವಿಧ್ಯಮಯ. ಪಾವೆಂ ಆಚಾರ್ಯರು ತಮ್ಮ ಈ “ಶಬ್ದಾಶಬ್ದ ವಿವೇಕ”ದಲ್ಲಿ ಪದವೊಂದರ ಸಮಾನಾರ್ಥಕ ಪದಗಳ ನಡುವೆ ಇರುವ ಗೂಡಾರ್ಥಗಳನ್ನು, ಸೂಕ್ಷ್ಮಾರ್ಥಗಳನ್ನು ತಿಳಿಸುತ್ತಲೇ, ಯಾವ ಸಂದರ್ಭಕ್ಕೆ ಯಾವ ಯಾವ “ಅದೇ ಅರ್ಥದ ಪದ” ಸಮಂಜಸವೆಂದು ಅತ್ಯಂತ ತಾರ್ಕಿಕವಾಗಿ ಮಂಡಿಸುತ್ತಾರೆ. ಈ ಪದಗಳನ್ನು ಬಳಸುವಾಗ ನಾವು ಮಾಡುವ ತಪ್ಪುಗಳ ಅರಿವನ್ನು ನಮ್ಮಲ್ಲಿ ಅತ್ಯಂತ ಪ್ರೀತಿಯಿಂದ ಮೂಡಿಸುತ್ತಾರೆ

ಪದಗಳ ಅರ್ಥಮಾಧುರ್ಯ ಹಾಗೂ ವಿಸ್ತರ ನಮಗೆ ಸಿಗಬೇಕಾದರೆ ನಾವು ಪದವೊಂದರ ಮೂಲಕ್ಕೆ, ನಿಷ್ಪತ್ತಿಗೆ ಲಗ್ಗೆ ಹಾಕಬೇಕು.
ಈಗಿನ ಪ್ರಸ್ತುತ ಹೊತ್ತಗೆ – “ಶಬ್ದಾಶಬ್ದ ವಿವೇಕ”- ಇದರ ವಿಶೇಷತೆಯ “ಪದಾರ್ಥ”ವೇ ವೈವಿಧ್ಯಮಯ. ಪಾವೆಂ ಆಚಾರ್ಯರು ತಮ್ಮ ಈ “ಶಬ್ದಾಶಬ್ದ ವಿವೇಕ”ದಲ್ಲಿ ಪದವೊಂದರ ಸಮಾನಾರ್ಥಕ ಪದಗಳ ನಡುವೆ ಇರುವ ಗೂಡಾರ್ಥಗಳನ್ನು, ಸೂಕ್ಷ್ಮಾರ್ಥಗಳನ್ನು ತಿಳಿಸುತ್ತಲೇ, ಯಾವ ಸಂದರ್ಭಕ್ಕೆ ಯಾವ ಯಾವ “ಅದೇ ಅರ್ಥದ ಪದ” ಸಮಂಜಸವೆಂದು ಅತ್ಯಂತ ತಾರ್ಕಿಕವಾಗಿ ಮಂಡಿಸುತ್ತಾರೆ. ಈ ಪದಗಳನ್ನು ಬಳಸುವಾಗ ನಾವು ಮಾಡುವ ತಪ್ಪುಗಳ ಅರಿವನ್ನು ನಮ್ಮಲ್ಲಿ ಅತ್ಯಂತ ಪ್ರೀತಿಯಿಂದ ಮೂಡಿಸುತ್ತಾರೆ. ಈ ಕೃತಿಯನ್ನು ಓದುವ ಯಾರಿಗಾದರೂ “ಅರೆ, ಹೌದಲ್ವಾ? ನಾನು ಈ ತಪ್ಪುಗಳನ್ನು ಮಾಡುತ್ತಲೇ ಬಂದಿದ್ದೇನಲ್ಲ… ಮೊದಲೇ ಯಾರಾದರೂ ಈ ವಿಷಯಗಳನ್ನು ಇಷ್ಟು ಸರಳವಾಗಿ ತಿಳಿಸಿದ್ದರೆ ಎಷ್ಟು ಚೆಂದವಿರುತ್ತಿತ್ತು” ಎಂದು ಅನ್ನಿಸದೇ ಇರದು! ಒಟ್ಟಾರೆ, ತಮ್ಮ ಅನನ್ಯ ಕಥನಶೈಲಿಯಿಂದ ಓದುಗರೆಲ್ಲರನ್ನೂ ಚಿಂತನೆಗೊಡ್ಡಿ ರಂಜಿಸುತ್ತಾರೆ. ಒಂದು ಪದ ಬಳಕೆಯ, ಒಂದು ಶಬ್ದಪ್ರಯೋಗದ ಹಿಂದೆ ಇರಬೇಕಾದ ವಿವೇಕವನ್ನು, ಈ ಕೃತಿಯ ಪುಟಪುಟಗಳಲ್ಲಿಯೂ ಆಚಾರ್ಯರು ಅನೇಕ ದೃಷ್ಟಾಂತಗಳನ್ನು, ನಿದರ್ಶನಗಳನ್ನೂ ಬಳಸಿ ಓದುಗರ “ಪದಾರ್ಥದರಿವನ್ನು” ಸಮೃದ್ಧಗೊಳಿಸುತ್ತಾರೆ. ಈ ಕೃತಿಯಲ್ಲಿ ಬರುವ ಸರಿಸುಮಾರು ನಲವತ್ತು ವಿಭಿನ್ನ ಸಮಾನಾರ್ಥಕ ಪದಸಮುಚ್ಛಯಗಳಲ್ಲಿರುವ ಸೂಕ್ಷ್ಮವಾದ ಅಂತರವನ್ನು ಅರಿತುಕೊಂಡರೆ, ನಮ್ಮೆಲ್ಲರ “ಗದ್ಯವೂ ಕೂಡ ಪದ್ಯವಾಗುವುದರಲ್ಲಿ, ಪದ್ಯ ಹೃದ್ಯವಾಗುವುದರಲ್ಲಿ” ಯಾವ ಅತಿಶಯೋಕ್ತಿಯೂ ಇರದು.
-ಸತ್ಯೇಶ್ ಎನ್. ಬೆಳ್ಳೂರ್

Additional information

Author

Publisher

Book Format

Ebook

Language

Kannada

Category

Reviews

There are no reviews yet.

Only logged in customers who have purchased this product may leave a review.