ಹೊಸ ಬದುಕಿನ ಸೊಗಸಿಗೂ, ತಮ್ಮಿಂದ ದೂರವೇ ಉಳಿದಿರುವ ನಿಸರ್ಗದ ಅಚ್ಚರಿಗಳಿಗೂ ನಗರದ ಎಳೆಯ ಮಕ್ಕಳು ತೋರುವ ಪ್ರತಿಕ್ರಿಯೆಗಳೇ ‘ಪುಟ್ಟ-ಪುಟ್ಟಿಯ ಪರಿಸರ ಪಾಠಗಳು’ ಪುಸ್ತಕದ ಅಧ್ಯಾಯಗಳಾಗಿ ಮೂಡಿವೆ. ಎಳೆಯ ಮಕ್ಕಳನ್ನು ಓದುಗರಾಗಿ ಎದುರಿಗೆ ಕೂರಿಸಿಕೊಂಡು ಬರೆದಿರುವ ಈ ಕಿರುಹೊತ್ತಿಗೆಯಲ್ಲಿ ಹೊಸ ಆವಿಷ್ಕಾರಗಳನ್ನು ಪರಿಚಯಿಸುವ ಹಂಬಲದಷ್ಟೇ ಪ್ರಾಕೃತಿಕ ಸಂಪರ್ಕದ ಮಹತ್ವವನ್ನು ಮನವರಿಕೆ ಮಾಡಿಕೊಡುವ ಕಾಳಜಿಯೂ ಇದೆ. ಗೆದ್ದಲು ಹುತ್ತ, ಹಲ್ಲಿಯ ಪಾದ, ಅಂಟುಮುಳ್ಳು ಮೊದಲಾದ ನೈಸರ್ಗಿಕ ವಿಷಯಗಳು ಇಂದಿನ ಮಕ್ಕಳಿಗೆ ಅಚ್ಚರಿಯ ವಸ್ತುವಾಗಿರುವಂತೆ ವೈಜ್ಞಾನಿಕ ಸಂಶೋಧನೆಗಳಿಗೂ ವಸ್ತುವಾಗಿರುವುದನ್ನು ಲೇಖಕರು ಸರಳಭಾಷೆಯಲ್ಲಿ ವಿವರಿಸಿದ್ದಾರೆ. ಬೀಚಿನಲ್ಲಿ ಪ್ರವಾಸಿಗರು ಬಿಸಾಡಿಹೋದ ಪ್ಲಾಸ್ಟಿಕ್ ಬಾಟಲುಗಳು, ಮದುವೆ ಮನೆಯ ಊಟಕ್ಕೆ ತಂದಿಟ್ಟ ಪ್ಲಾಸ್ಟಿಕ್ ಲೋಟ ಬಟ್ಟಲುಗಳು, ವಾಯುಮಾಲಿನ್ಯ, ಇ-ತ್ಯಾಜ್ಯ ಎಲ್ಲವೂ ತಾವು ಸೃಷ್ಟಿಗೊಂಡಿರುವ ಈ ಜಗತ್ತನ್ನೇ ಹೇಗೆ ನರಕವಾಗಿಸಬಲ್ಲವು ಎನ್ನುವುದನ್ನು ಮನದಟ್ಟು ಮಾಡಿಸುವ ಪ್ರಯತ್ನವೂ ಇಲ್ಲಿಯ ಬರೆಹಗಳಲ್ಲಿ ಕಂಡುಬರುತ್ತವೆ.

Additional information

Author

Book Format

Audiobook

Language

Kannada

Category

Reviews

There are no reviews yet.

Only logged in customers who have purchased this product may leave a review.