ಒಂದು ದೇಶದ ಇತಿಹಾಸವೆಂದರೆ, ಆ ದೇಶವನ್ನು ಆಳಿದ ರಾಜವಂಶಗಳ, ಅವು ನಡೆಸಿದ ದಂಡಯಾತ್ರೆಗಳ, ಸಣ್ಣಪುಟ್ಟ ಯುದ್ಧಗಳ ಅಥವಾ ಅವುಗಳ ಸೋಲು-ಗೆಲುವು, ಅಳಿವು-ಉಳಿವುಗಳ ವರದಿಯಷ್ಟೇ ಅಲ್ಲ. ಇತಿಹಾಸವೆಂದರೆ ಸರಿಯಾದ ಆಧಾರವಿಲ್ಲದ ಕಾಲ್ಪನಿಕ ಭವ್ಯ ಚಿತ್ರಣವೂ ಅಲ್ಲ. ಇತಿಹಾಸದ ಅವಧಿಯಲ್ಲಿ ಅಲ್ಲಿ ಬದುಕಿದ ಜನರ ಜೀವನ, ಅಲ್ಲಿನ ಆರ್ಥಿಕ ಸಂಬಂಧಗಳು, ನಾನಾ ಕಾರಣಗಳಿಂದ ವಲಸೆ
ಬಂದು ಅಲ್ಲಿ ನೆಲೆಸಿದ ಇತರ ಜನರು, ಅಲ್ಲಿ ಹುಟ್ಟಿದ ಮತ ಧಾರ್ಮಿಕ ಚಳುವಳಿಗಳು ಹಾಗೂ ಪಂಥಗಳು ಇತಿಹಾಸವನ್ನು ರೂಪಿಸುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ ಎಂಬುದನ್ನು ಮರೆಯಬಾರದು. ಅಲ್ಲದೆ, ಇತಿಹಾಸ ನಿರೂಪಣೆ ಶಾಶ್ವತರೂಪ ತಳೆಯಲೂ ಸಾಧ್ಯವಿಲ್ಲ. ಹೊಸ ಹೊಸ ಆಧಾರಗಳು ಬೆಳಕಿಗೆ ಬಂದಂತೆ ಅದರ ಸ್ವರೂಪವೂ ಬದಲಾಗುತ್ತ ಹೋಗುತ್ತದೆ. ಅಂತೆಯೇ ಇತಿಹಾಸದ ಈ ಚಲನಶೀಲತೆಯನ್ನು
ಅರಿತುಕೊಳ್ಳಬೇಕಾದುದು ಬಹಳ ಮುಖ್ಯ. ಇತಿಹಾಸ ಬೆಸೆದ ಕೊಂಡಿಗಳ ಮೂಲಕ ಇಂದಿನ ಆಗು-ಹೋಗುಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ, ಅಂತೆಯೇ ಭವಿಷ್ಯವನ್ನು ರೂಪಿಸುವುದಕ್ಕೆ ಇತಿಹಾಸದ ವಸ್ತುನಿಷ್ಠ ಅಧ್ಯಯನ ನೆರವಾಗುತ್ತದೆ.
ಈ ಸಚಿತ್ರ ಕೃತಿಯ ಲೇಖಕರಾದ ಪ್ರೊ|| ರಾಮ್ ಶರಣ ಶರ್ಮಾ ಪ್ರಖ್ಯಾತ ಭಾರತೀಯ ಇತಿಹಾಸ ಲೇಖಕರು. ಇದನ್ನು ಶ್ರೀ ಎನ್.ಪಿ.ಶಂಕರನಾರಾಯಣ ರಾವ್ ಸಮರ್ಥವಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
-10%
Ebook
ಪ್ರಾಚೀನ ಭಾರತ
Author: Sharma R S
Original price was: ₹200.00.₹180.00Current price is: ₹180.00.
ಈ ಸಚಿತ್ರ ಕೃತಿಯ ಲೇಖಕರಾದ ಪ್ರೊ|| ರಾಮ್ ಶರಣ ಶರ್ಮಾ ಪ್ರಖ್ಯಾತ ಭಾರತೀಯ ಇತಿಹಾಸ ಲೇಖಕರು. ಇದನ್ನು ಶ್ರೀ ಎನ್.ಪಿ.ಶಂಕರನಾರಾಯಣ ರಾವ್ ಸಮರ್ಥವಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಇತಿಹಾಸ ಬೆಸೆದ ಕೊಂಡಿಗಳ ಮೂಲಕ ಇಂದಿನ ಆಗು-ಹೋಗುಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ, ಅಂತೆಯೇ ಭವಿಷ್ಯವನ್ನು ರೂಪಿಸುವುದಕ್ಕೆ ಇತಿಹಾಸದ ವಸ್ತುನಿಷ್ಠ ಅಧ್ಯಯನ ನೆರವಾಗುತ್ತದೆ.
About this Ebook
Information
Additional information
Author | |
---|---|
Translator | Shankaranarayan Rao N P |
Publisher | |
Book Format | Ebook |
Language | Kannada |
Pages | 288 |
Year Published | 2021 |
Category |
Reviews
Only logged in customers who have purchased this product may leave a review.
Reviews
There are no reviews yet.