ಊರು ಎಂದರೆ ಕನ್ನಡದಲ್ಲಿ ವಾಸಸ್ಥಳ, ಹಳ್ಳಿ, ಗ್ರಾಮ, ಪಟ್ಟಣ ಎಂಬುದಲ್ಲದೇ ತೊಡೆ ಎಂಬ ಅರ್ಥವೂ ಇದೆ.‘ಎಲ್ಲವನ್ನೂ ಹೇಳುತ್ತೇನೆ…’
ಭಾಸ್ಕರರಾವ್ ಆಡಿದ್ದೆನ್ನಲಾದ ಈ ಮಾತಿನ ಕುರಿತು ನಮ್ಮೊಳಗೆ ತೀವ್ರ ಚರ್ಚೆ ಶುರುವಾಗಿತ್ತು. ಈ ಎರಡು ಶಬ್ದಗಳು ಒಂದು ಕಂಪನಿಯ ಕಾರ್ಪೊರೇಟ್ ಆಫೀಸಿನಲ್ಲಿ ಎಷ್ಟು ಕ್ರಾಂತಿಕಾರಿಯಾದ, ಭೀಕರ ಘೋಷಣೆಯಾಗಿ ಕೇಳಬಹುದೆನ್ನುವುದು ಇಂಥ ಜಗತ್ತಿನ ಬಗ್ಗೆ ಗೊತ್ತಿದ್ದವರಿಗೇ ಗೊತ್ತು. ಅಲ್ಲಿ ಮಾತ್ರ ಯಾಕೆ, ಕುಟುಂಬ ಅಥವಾ ರಾಜಕೀಯದಂಥ ಯಾವುದೇ ವ್ಯವಸ್ಥೆಯೂ ಅಂಜುವ ಶಬ್ದಗಳಿವು. ಎಲ್ಲವನ್ನೂ ಹೇಳುತ್ತೇನೆಂಬುದೇ ಭಿನ್ನಮತದ ಅತ್ಯಂತ ಶಕ್ತಿಶಾಲಿ ಅಸ್ತ್ರ ತಾನೇ? ಪಕ್ಷ ತೊರೆದ ಧುರೀಣರು, ತಂಡದಿಂದ ಕೈಬಿಟ್ಟ ಆಟಗಾರರು, ಹೊಡೆದಾಡಿದ ವ್ಯಾಪಾರದ ಪಾಲುದಾರರು, ಜಗಳಾಡಿದ ಪ್ರೇಮಿಗಳು, ಬೇರೆಯಾದ ದಂಪತಿಗಳು – ಎಲ್ಲರೂ ಒಂದಲ್ಲ ಒಂದು ವಿಧದಲ್ಲಿ, ಒಂದಲ್ಲ ಒಂದು ರೂಪದಲ್ಲಿ ಈ ಅಸ್ತ್ರ ಎತ್ತಿಕೊಂಡವರೇ. ಈ ಎರಡು ಮಾತಿನಲ್ಲಿ ಎದೆಗಾರಿಕೆ, ಇಷ್ಟು ದಿನ ಸಾಧ್ಯವಾಗದ್ದನ್ನು ಈಗಲಾದರೂ ಮಾಡುತ್ತಿದ್ದೇನೆನ್ನುವ ಆತ್ಮಸಮಾಧಾನ, ತುಸು ಹುತಾತ್ಮತೆ ಇರುವಂತೆಯೇ ಸ್ವಲ್ಪ ವಿಶ್ವಾಸಘಾತುಕತನವೂ ಇದೆ.
ಕಂಪನಿಯ ವೈಸ್ ಪ್ರೆಸಿಡೆಂಟ್ ಆಗಿರುವ ಭಾಸ್ಕರರಾವ್ ಅವಧಿಗಿಂತ ಮುನ್ನ ನಿವೃತ್ತಿ ಪಡೆಯುತ್ತಾರೆ ಎಂಬುದು ಬೆಳಗಿನ ಮುಖ್ಯ ಸುದ್ದಿಯಾಗಿತ್ತು. ಅದು ಜೀರ್ಣವಾಗುವ ಮೊದಲೇ ಅವರು ಹೇಳಿದ್ದಾರೆನ್ನಲಾದ ‘ಎಲ್ಲವನ್ನೂ ಹೇಳುತ್ತೇನೆ…’ ಎಂಬ ಶಬ್ದಗಳು ನಮ್ಮ ಆಫೀಸಿನಾದ್ಯಂತ ಕಂಪನಗಳನ್ನು ಎಬ್ಬಿಸಿದವು. ‘ಎಲ್ಲವನ್ನೂ’ ಅಂದರೆ ಅದು ಏನೇನನ್ನು ಒಳಗೊಳ್ಳಬಹುದು ಎಂದು ಕೆಲವರು ಚರ್ಚಿಸಿದರು. ‘ಹೇಳುತ್ತೇನೆ’ ಎಂಬುದರ ಬಗ್ಗೆಯೇ ಆಸಕ್ತಿ ಹುಟ್ಟಿದವರು ರಾವ್‌ಸಾಹೇಬರು ಎಲ್ಲವನ್ನೂ ಹೇಳುವದು ಯಾರಿಗೆಂಬ ಬಗ್ಗೆ ಮಾತಾಡಿದರು. ಮೇಲಿನಿಂದ ಕೆಳಗಿನವರೆಗೂ, ಯಾರನ್ನಾದರೂ ಯಾವಾಗಲಾದರೂ ಮಾತಾಡಿಸಬಲ್ಲ ರಾವ್ ಇಷ್ಟು ದಿನ ಯಾಕೆ ಹೇಳದೇ ಇದ್ದರು ಎಂಬುದೂ, ಈಗ ಯಾರುಯಾರಿಗೆ ಎಲ್ಲವನ್ನೂ ಹೇಳಬಹುದು ಎಂಬುದೂ ಬಗೆಹರಿಯದ ಸಂಗತಿಯಾಯಿತು. ಇನ್ನು ಹಲವರ ಪ್ರಕಾರ ಹೇಗೆ ಹೇಳುತ್ತಾರೆ ಅನ್ನುವುದು ಮುಖ್ಯವಾಗಿತ್ತು. ಅವರು ಭಾಷಣ ಮಾಡುವರೇ, ಪತ್ರ ಬರೆದು ಹೇಳುವರೇ, ಒಬ್ಬೊಬ್ಬರನ್ನೇ ಕರೆದು ಕೂರಿಸಿ ತಿಳಿಸುವರೇ ಎಂಬ ಬಗ್ಗೆ ಪ್ರತಿಯೊಬ್ಬರಿಗೂ ಅವರದೇ ಅನಿಸಿಕೆಗಳಿದ್ದವು.

Additional information

Author

Publisher

Book Format

Ebook

Language

Kannada

Category

Reviews

There are no reviews yet.

Only logged in customers who have purchased this product may leave a review.