ನೆರೆಯ ಬಿಂಬಗಳು
ಕಣ್ಮುಂದಿನ ಹಲವಾರು ದೃಶ್ಯಗಳು, ಕಿವಿಯಾರೆ ಕೇಳಿದ ಘಟನೆಗಳು ಎಲ್ಲೋ ಮನಸ್ಸಿನಲ್ಲಿ ಸುಪ್ತವಾಗಿದ್ದು ಹೊರಬರಲು ತವಕಿಸುತ್ತಿರುತ್ತವೆ. ಬಹುಕಾಲ ಅವು ಅಜ್ಞಾತವಾಗಿರದೆ ಅಕ್ಷರ ರೂಪದಲ್ಲಿ ಶಾಶ್ವತವಾಗಿರಲು ಬಯಸುತ್ತವೆ. ಎಲ್ಲಾ ಘಟನೆಗಳಿಗೂ ದಾಖಲಾಗುವ ಭಾಗ್ಯವಿಲ್ಲದೆ ನಶಿಸಿ ಹೋದರೂ ಎಲ್ಲೋ ಕೆಲವಕ್ಕೆ ಮಾತ್ರ ಇಂಥ ಸುಯೋಗ ಲಭಿಸುವುದುಂಟು. ಹಾಗಾಗಿ ಇವು ಪುಸ್ತಕ ರೂಪದಲ್ಲಿ ಹೆಮ್ಮೆಯಿಂದ ಓದುಗರ ಕಡೆಗೆ ಮುಖಮಾಡಿ ನಿಂತಿವೆ. ವಿಜ್ಞಾನವನ್ನು ಮಕ್ಕಳೂ ಪೌರಾಣಿಕ ಘಟನೆಗಳನ್ನು ಹಿರಿಯರೂ ಸೇರಿ ಮಥಿಸಿದ್ದಾರೆ. ಹಿರಿಯರಿಗೆ ಮುಂದಿನದನ್ನು ಬೆರಗಿನಿಂದ ನೋಡಲು ಹಾಗೂ ಆಧುನಿಕರಿಗೆ ಹಿಂತಿರುಗಿ ನೋಡಿ ನಿಜವೆಷ್ಟೆಂದು ಗ್ರಹಿಸಲು ಅವಕಾಶವಿದೆ. ವೈವಿಧ್ಯಮಯ ಸನ್ನಿವೇಶಗಳಿಂದ ವಿಧವಿಧವಾದ ಅನುಭವಗಳನ್ನು ನೀಡುವ ಅತ್ಯುತ್ತಮ ಕಥೆಗಳು ಇಲ್ಲಿವೆ.
Reviews
There are no reviews yet.