ಒಂದು ಸಾಮಾಜಿಕ ಕಾದಂಬರಿ. ಒಂದು ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಒಬ್ಬ ಸಾಮಾನ್ಯ ಹುಡುಗಿಯ ಕಥೆ. ಅವಳು ದೊಡ್ಡವಳಾಗುತ್ತ ಹೋದಂತೆ ಅವಳು ತನ್ನ ವಯಸ್ಸಿನ ಎಲ್ಲ ಹುಡುಗಿಯರಂತೆ ಯೋಚಿಸದೆ ವಿಭಿನ್ನ ರೀತಿಯಲ್ಲಿ ಯೋಚಿಸತೊಡಗುತ್ತಾಳೆ. ತಾನು ಎಲ್ಲರಂತೆ ಸಾಮಾನ್ಯರಲ್ಲಿ ಸಾಮಾನ್ಯವಾಗಿ ಬದುಕದೆ ಒಂದು ಹೊಸ ಹಾಗೂ ಕೆಳಸ್ತರದ ಜನರನ್ನು ಮೇಲುಪದರಕ್ಕೆ ಒಯ್ಯುವ ಕನಸನ್ನು ಕಾಣುತ್ತ, ಅದಕ್ಕಾಗಿ ಪ್ರಯತ್ನವನ್ನೂ ಮಾಡುತ್ತಾಳೆ. ಮಣ್ಣಲ್ಲಿ ಮಣ್ಣಿನಂತೆ ಬದುಕುತ್ತಿರುವ ಮಕ್ಕಳನ್ನು ಸುಶಿಕ್ಷಿತರನ್ನಾಗಿಸುವ, ಪತಿಯ, ಅವನ ಕುಟುಂಬದ ಜನರ ದಬ್ಬಾಳಿಕೆಯಲ್ಲಿ ಉಸಿರೆತ್ತದೆ ಬಾಳುತ್ತಿರುವ ಮಹಿಳೆಯರನ್ನು ಅಕ್ಷರಸ್ಥರನ್ನಾಗಿಯೂ, ಸ್ವಾವಲಂಬಿಗಳನ್ನಾಗಿಯೂ ಮಾಡುವ ಕನಸು ಕಂಡವಳ, ಅವರ ಬಣ್ಣಗೆಟ್ಟ ಬದುಕಿನಲ್ಲಿ ಆತ್ಮಗೌರವದ ಬಣ್ಣವನ್ನು ತುಂಬಲು ಶ್ರಮಿಸಿ, ಅವರಿಗಾಗಿ ತನ್ನ ಜೀವನವನ್ನೇ ಮೀಸಲಾಗಿರಿಸಿದ ಯುವತಿಯ ಕಥೆಯಿದು.
ಅವಳ ಬದುಕಿನಲ್ಲೂ ಎಲ್ಲರಂತೆ ವಸಂತವು ಕಾಲಿಡುತ್ತದೆ. ಅವಳ ಕನಸುಗಳನ್ನು ತನ್ನ ಕಣ್ಣಿನಿಂದ ಕಾಣುವ ಯುವಕನ ಪರಿಚಯವಾಗುತ್ತದೆ. ಪರಿಚಯ ಪ್ರೇಮಕ್ಕೆ ತಿರುಗುತ್ತದೆ. ಆದರೆ ದೈವಕ್ಕೆ ಆದು ಒಪ್ಪಿಗೆಯಾಗುವುದಿಲ್ಲ. ಇಡಿಯ ಜೀವನದಲ್ಲಿ ಆ ಪ್ರೇಮ ವಸಂತದ ಆಯುಷ್ಯವು ಕೇವಲ ಕೆಲವೇ ಕ್ಷಣಗಳದಾಗಿ ಉಳಿಯುತ್ತದೆ. ಮುಂದೆ ಅವಳು ತನ್ನ ಇಡಿಯ ಜೀವನವನ್ನು ಜನಸೇವೆಗಾಗಿಯೇ ಮುಡಿಪಾಗಿಡುತ್ತಾಳೆ.
ಇದು ಕಾದಂಬರಿಯ ಕಥಾವಸ್ತು. ನಾಯಕಿ ಮುಕ್ತಾ ಸಾಮಾನ್ಯಳಿಂದ ಅಸಾಮಾನ್ಯಳಾಗಿ ಬೆಳೆಯುವ ಪ್ರಕ್ರಿಯೆ ಇಲ್ಲಿದೆ.
-40%
Ebook
ಮತ್ತೆ ಮತ್ತೆ ಹೊಸತು ಜನ್ಮ
Author: Malati Mudakavi
Original price was: $4.80.$2.88Current price is: $2.88.
About this Ebook
Information
Additional information
Category | |
---|---|
Author | |
Publisher | |
Book Format | Ebook |
Language | Kannada |
Year Published | 2023 |
Pages | 380 |
Reviews
Only logged in customers who have purchased this product may leave a review.
Reviews
There are no reviews yet.