ಎಲ್ಲರೂ ಕ್ರಿಯಾಶೀಲರೇ..! ಆದರೆ ಸಿನಿಮಾ ತನ್ನದೇ ಆದ ವ್ಯಾಕರಣ ಹೊಂದಿರುವ ಮಾಧ್ಯಮ. ಇಲ್ಲಿ ಬರಿಯ ಕ್ರಿಯಾಶೀಲತೆ ಒಂದೇ ಸಾಕಾಗುವುದಿಲ್ಲ.. ವ್ಯಾಕರಣದ ಅರಿವು ಮುಖ್ಯವಾಗುತ್ತದೆ. ಸಿನಿಮಾ ಕ್ಷೇತ್ರವೆಂದರೆ ಅದು ೭ನೇ ತರಗತಿಗೆ ಮನೆ ಬಿಟ್ಟು “ಕ್ಲ್ಯಾಪ್ ಬಾಯ” ಆಗಿ ಸೇರಿಕೊಂಡು ೫-೧೦ ವರ್ಷಗಳ ಕಾಲ “ಅನಿಶ್ಚತೆ”ಯಲ್ಲಿ ಒದ್ದಾಡಿ ನಂತರ ನಿರ್ದೇ ಶಕನಾದರೆ ಅದೃಷ್ಟ. ನಿರ್ದೇಕನಾಗಿ “ಒಳ್ಳೆಯ” ಚಿತ್ರ ಮಾಡಿದರೆ ಅದು “ಪ್ರೇಕ್ಷಕನ ಅದೃಷ್ಟ” ಇಲ್ಲವಾದರೆ ಅದು ಮತ್ತೊಮ್ಮೆ ನಾವೇ ಸೃಷ್ಟಿಸಿಕೊಂಡಿರುವ ಅವ್ಯವಸ್ಥೆಯ ದುರಾದೃಷ್ಟ.
ಸಿನಿಮಾ ಕ್ಷೇತ್ರ ನಮ್ಮ “ಶಿಕ್ಷಣ ವ್ಯವಸ್ಥೆ”ಯಿಂದ ಬಲುದೂರ. ನೂರಾರು ಇಂಜಿನೀಯರಿಂಗ್ ಮತ್ತು ವೈದ್ಯಕೀಯ ಕಾಲೇಜ್ ಗಳನ್ನು ಹೊಂದಿರುವ ನಮ್ಮ ನಾಡಲ್ಲಿ “ಅತ್ಯುನ್ನತ ಮಟ್ಟದ” ಚಲನಚಿತ್ರ ತರಬೇತಿ ಸಂಸ್ಥೆ ಇಲ್ಲದಿರುವುದು ಬಹು ಸೋಜಿಗ ಹಾಗೂ ಅವಮಾನದ ವಿಷಯ.ಒಳ್ಳೆಯ ಚಿತ್ರಗಳೇ ಬರುತ್ತಿಲ್ಲ ಎಂದು ದೂಷಿಸುವ ಮೊದಲು, ಒಳ್ಳೆಯ
ಚಿತ್ರಗಳನ್ನು ಕಟ್ಟುವವರಿಲ್ಲ ಎನ್ನುವ ಮೊದಲು ಒಂದು ಒಳ್ಳೆಯ ಚಲನಚಿತ್ರ ತರಬೇತಿ ಸಂಸ್ಥೆಯನ್ನು ಕಟ್ಟಬೇಕಿದೆ. ಶ್ರೀ ಗುರುಪ್ರಸಾದ್ರಂತವರಿಗೆ ಚಲನಚಿತ್ರಗಳನ್ನು ನೋಡಿ, ಕಲಿತು, ಒಳ್ಳೆ ಚಿತ್ರ ಕಟ್ಟುವ ಕಲೆ ಇದೆ.
Reviews
There are no reviews yet.