Ebook

ಮಲೆನಾಡಿನ ಮರೆಯದ ನೆನಪುಗಳು

Original price was: $1.92.Current price is: $1.15.

ಮಲೆನಾಡಿನ ಮರೆಯದ ನೆನಪುಗಳು
(`ಮಲೆನಾಡಿನ ರೋಚಕ ಕತೆಗಳು’ ಭಾಗ- 8)
ಮಲೆನಾಡಿನ ರೋಚಕ ಕತೆಗಳ ಸರಣಿಯ ಎಂಟನೆಯ ಭಾಗ ಇದು.

ಕರೆದಾಗ ಮೆದುಳೊಳಗಿಂದ ಎದ್ದು ಬರುವ ನೆನಪುಗಳೇ ಸೃಷ್ಟಿಯ ಅದ್ಭುತ. ಅದರಲ್ಲೂ ನನಗಂತೂ ಮಲೆನಾಡಿನ ಘಟನೆಗಳು ಎಂದರೆ ಮೊಗೆದಷ್ಟೂ ಮುಗಿಯದೆ ಉಕ್ಕುವ ನೀರಿನ ಚಿಲುಮೆಯ ಹಾಗೆ! ಐದಾರು ದಶಕಗಳು ಕಳೆದರೂ ಮಲೆನಾಡಿನ ಬಾಲ್ಯದ ನೆನಪು ಮಾಸಿಲ್ಲ; ಮಾಸುವುದೂ ಇಲ್ಲ. ನಂತರ ಅದರ ಪಕ್ಕದ ಹೇಮಾವತಿ ನದಿಯಲ್ಲಿ ಅದೆಷ್ಟೋ ಲಕ್ಷ ಟಿ.ಎಮ್.ಸಿ. ನೀರು ಹರಿದು ಹೋಗಿದೆ. ಹೊಸ ನೀರು ಬಂದು ಹಳೆ ನೀರನ್ನು ಕೊಚ್ಚಿಕೊಂಡು ಹೋಗುತ್ತಿದ್ದಂತೆ ನೀರ ಹರಿವಿನ ಜೊತೆಗೇ ಬದುಕೂ ಬದಲಾಗಿದೆ. ಏನೇ ಬದಲಾದರೂ ಮನುಷ್ಯರ ಗುಣ ಸ್ವಭಾವಗಳು ಮಾತ್ರ ಬದಲಾಗದೆ ನಮ್ಮೊಳಗೇ ಉಳಿದಿರುತ್ತವೆ.
ಆಧುನಿಕ ತಂತ್ರಜ್ಞಾನ ಇಷ್ಟು ಮುಂದುವರೆದಿದ್ದು ಕೇವಲ ಒಂದೆರಡು ಶತಮಾನದಿಂದ. ಅದರಲ್ಲೂ ಒಂದೈವತ್ತರಿಂದ ಅರವತ್ತು ವರ್ಷಗಳಿಂದೀಚೆಗೆ. ಆಗಿನ ಪಶ್ಚಿಮಘಟ್ಟದ ಸೆರಗಿನಲ್ಲಿರುವ ಮಲೆನಾಡಿನ ಹಚ್ಚ ಹಸಿರಾದ ಒಂದು ಹಳ್ಳಿಗೆ ಈಗ ನಿಮ್ಮನ್ನು ಕರೆದುಕೊಂಡು ಹೋದರೆ ಹೇಗಿರುತ್ತದೆ? ಆಗ ಅದರ ಸವಿ ತಿಳಿಯಲಾಗದೆ ಈಗ ಅದರ ಸೊಗಸನ್ನು ಇಲ್ಲಿ ಕಟ್ಟಿ ಕೊಡಲು ಯತ್ನಿಸಿದ್ದೇನೆ. `ಬದುಕು, ಹೂವಿನ ಹಾಸಿಗೆಯೂ ಅಲ್ಲ; ಮುಳ್ಳಿನ ಹೊದಿಕೆಯೂ ಅಲ್ಲ’. ಕಷ್ಟ-ಸುಖಗಳ ಮಿಶ್ರಣದ ಬದುಕು ನಮ್ಮದು. ಹಾಗೆ ಕಳೆದ ಮಲೆನಾಡಿನ ಬಾಲ್ಯದ ಒಂದೊಂದು ಅನುಭವವೂ ನನಗೆ ಗಟ್ಟಿತನ ಕಲಿಸಿದ್ದು ಸುಳ್ಳಲ್ಲ. ಇಲ್ಲಿ ಅದನ್ನು ಮಲೆನಾಡಿನ ರೋಚಕ ಕತೆಗಳ ಸರಣಿಯ ಎಂಟನೆಯ ಭಾಗದ ರೂಪದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಗಿರಿಮನೆ ಶ್ಯಾಮರಾವ್

Additional information

Author

Publisher

Book Format

Ebook

Language

Kannada

Pages

176

Year Published

2021

Category

Reviews

There are no reviews yet.

Only logged in customers who have purchased this product may leave a review.