ಕೀರ್ತಿನಾಥ ಕುರ್ತಕೋಟಿ ಅವರ ಆಯ್ದ ಬರಹಗಳು
ಕೀರ್ತಿನಾಥ ಕುರ್ತಕೋಟಿ
ಕೀರ್ತಿನಾಥ ಕುರ್ತಕೋಟಿಯವರು ೧೩, ಅಕ್ಟೋಬರ್ ೧೯೨೮ರಂದು ಗದಗ ಸಮೀಪದ ಕುರ್ತಕೋಟಿಯಲ್ಲಿ ಜನಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದ ಇವರು ಗದಗದ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದು, ಮುಂದೆ ಸುಮಾರು ಮೂರು ದಶಕಗಳ ಕಾಲ ಗುಜರಾತಿನ ಆನಂದದ ವಲ್ಲಭ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು; ನಿವೃತ್ತಿಯ ನಂತರ ಧಾರವಾಡದಲ್ಲಿ ಬಂದು ನೆಲೆಸಿದರು. ಹಲವು ಭಾಷೆಗಳ ಸಾಹಿತ್ಯದ ಕುರಿತು ಮಾತಾಡಬಲ್ಲವರಾಗಿದ್ದ ಕೀರ್ತಿಯವರು ತಮ್ಮ ವಿದ್ವತ್ತು ಮತ್ತು ವಿಮರ್ಶೆಗಳಿಂದ ಪ್ರಸಿದ್ಧರು. ಬರವಣಿಗೆಯಷ್ಟೇ ತಮ್ಮ ವಾಗ್ಮಿತೆಗೂ ಪ್ರಸಿದ್ಧರಾಗಿದ್ದ ಇವರು ’ಯುಗಧರ್ಮ ಹಾಗೂ ಸಾಹಿತ್ಯದರ್ಶನ’, ’ಬಾರೋ ಸಾಧನಕೇರಿಗೆ’, ’ಕುಮಾರವ್ಯಾಸ’, ’ಉರಿಯ ನಾಲಗೆ’, ’ಪ್ರತ್ಯಭಿಜ್ಞಾನ’, ’ಕನ್ನಡ ಸಾಹಿತ್ಯ ಸಂಗಾತಿ’, ’ಸಂಸ್ಕೃತಿ ಸ್ಪಂದನ’ ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮೊದಲಾದ ಹಲವು ಪುರಸ್ಕಾರಗಳು ಇವರಿಗೆ ಲಭಿಸಿವೆ.
ಕೀರ್ತಿನಾಥ ಕುರ್ತಕೋಟಿ – ಮುಖ್ಯ ಕೃತಿಗಳು
ವಿಮರ್ಶಾ ಸಂಕಲನಗಳು:
ಯುಗಧರ್ಮ ಮತ್ತು ಸಾಹಿತ್ಯ ದರ್ಶನ
ಭೃಂಗದ ಬೆನ್ನೇರಿ
ಸಂಸ್ಕೃತಿ ಸ್ಪಂದನ
ಬಯಲು ಆಲಯ
ಉರಿಯ ನಾಲಗೆ
ರಾಜಸ್ಪರ್ಷ
ರಾಜಕೀಯ ಮತ್ತು ಧರ್ಮ
ಕನ್ನಡ ಸಾಹಿತ್ಯ ಸಂಗಾತಿ
ನೂರು ಮರ ನೂರು ಸ್ವರ
ನಾಟಕಗಳು:
ಆಮನಿ
ಚಂದ್ರಗುಪ್ತ
Reviews
There are no reviews yet.