ಈ ಕೃತಿಯಲ್ಲಿ ಸಂಗ್ರಹಗೊಂಡ, ಬಿ.ವಿ.ಕಕ್ಕಿಲ್ಲಾಯರು ಮಂಡಿಸಿದ ಚರ್ಚೆ, ವಾದಗಳು ಕರ್ನಾಟಕದ ಒಂದು ಕಾಲಘಟ್ಟದ ಸಮಾಜೋ-ರಾಜಕೀಯ ಸಂದರ್ಭವನ್ನು ಪ್ರಸ್ತುತಪಡಿಸುತ್ತವೆ. ಜನತೆಯಿಂದ, ಜನರಿಗಾಗಿ ಆಯ್ಕೆಯಾದ ಒಬ್ಬ ಜನಪ್ರತಿನಿಧಿ ಹೇಗಿರಬೇಕು ಎಂಬುದಕ್ಕೆ ಒಂದು ಮಾದರಿಯನ್ನು ಒದಗಿಸುತ್ತವೆ. ಕಕ್ಕಿಲಾಯರಂಥ ಜನಪ್ರತಿನಿಧಿಗಳು ಹೇಗಿದ್ದರು ಎಂಬುದನ್ನು ಹೇಳುತ್ತಲೇ ಆ ಕಾಲದ ರಾಜಕೀಯ ಸಾಮಾಜಿಕ ಇತಿಹಾಸವನ್ನು ಕಟ್ಟಿಕೊಡುತ್ತದೆ. ಕಳೆದ ಶತಮಾನದ ಎಪ್ಪತ್ತನೇ ದಶಕ ರಾಜಕೀಯವಾಗಿ, ಸಾಮಾಜಿಕವಾಗಿ ಒಂದು ಸ್ಥಿತ್ಯಂತರ ಸಂದರ್ಭ. ಆ ಸಂದರ್ಭದಲ್ಲಿ ಪ್ರಭುತ್ವ, ಆಡಳಿತ ವ್ಯವಸ್ಥೆ ಜನಸಾಮಾನ್ಯರ ಪರವಾಗಿ, ರೈತ, ಕಾರ್ಮಿಕರ ಪರವಾಗಿ ಸ್ಪಂದಿಸುವಂತಾಗಲು ಸಮರ್ಥ ಜನಪ್ರತಿನಿಧಿಗಳ ಪಾತ್ರ ಮುಖ್ಯ. ಅಂಥ ಪಾತ್ರವನ್ನು ನಿರ್ವಹಿಸಿದ ಕೆಲವೇ ಜನಪ್ರತಿನಿಧಿಗಳಲ್ಲಿ ಬಿ.ವಿ.ಕಕ್ಕಿಲ್ಲಾಯರೂ ಒಬ್ಬರು. ಈ ಕೃತಿಯಲ್ಲಿ ಪ್ರಕಟವಾದ ಕಕ್ಕಿಲ್ಲಾಯ ಅವರ ಸದನದಲ್ಲಿನ ಚರ್ಚೆ, ಭಾಗವಹಿಸುವಿಕೆ ಅವರ ತಿಳುವಳಿಕೆ, ಅನುಭವ, ವಾದ ವೈಖರಿ, ಮಾಹಿತಿ ಸಂಗ್ರಹ, ವಿಷಯ ವ್ಯಾಪ್ತಿ ಅಚ್ಚರಿಯನ್ನು ಮೂಡಿಸುತ್ತವೆ.
-10%
Ebook
ಕರ್ನಾಟಕ ವಿಧಾನಸಭೆಯಲ್ಲಿ ಬಿ.ವಿ.ಕಕ್ಕಿಲ್ಲಾಯ
Author: Shrinivas Kakkilaya B
Original price was: $3.00.$2.70Current price is: $2.70.
ಳೆದ ಶತಮಾನದ ಎಪ್ಪತ್ತನೇ ದಶಕ ರಾಜಕೀಯವಾಗಿ, ಸಾಮಾಜಿಕವಾಗಿ ಒಂದು ಸ್ಥಿತ್ಯಂತರ ಸಂದರ್ಭ. ಆ ಸಂದರ್ಭದಲ್ಲಿ ಪ್ರಭುತ್ವ, ಆಡಳಿತ ವ್ಯವಸ್ಥೆ ಜನಸಾಮಾನ್ಯರ ಪರವಾಗಿ, ರೈತ, ಕಾರ್ಮಿಕರ ಪರವಾಗಿ ಸ್ಪಂದಿಸುವಂತಾಗಲು ಸಮರ್ಥ ಜನಪ್ರತಿನಿಧಿಗಳ ಪಾತ್ರ ಮುಖ್ಯ. ಅಂಥ ಪಾತ್ರವನ್ನು ನಿರ್ವಹಿಸಿದ ಕೆಲವೇ ಜನಪ್ರತಿನಿಧಿಗಳಲ್ಲಿ ಬಿ.ವಿ.ಕಕ್ಕಿಲ್ಲಾಯರೂ ಒಬ್ಬರು.
About this Ebook
Information
Additional information
Author | |
---|---|
Publisher | |
Book Format | Ebook |
Language | Kannada |
Year Published | 2021 |
Category |
Reviews
Only logged in customers who have purchased this product may leave a review.
Reviews
There are no reviews yet.