“ಜಗ ಜೀವ ರಾಶಿಗಳ ಜೊತೆ ಸೇರಿ ಹಾಡಿ
ಪ್ರಕೃತಿ ವೈಚಿತ್ರಗಳ ಕಣ್ತುಂಬ ನೋಡಿ
ಸೃಷ್ಟಿಕರ್ತನ ಸೃಷ್ಟಿ ಕಂಡು ಬೆರಗಾಗಿ
ತಲೆಬಾಗಿ ನಮಿಸುವೆನು ಪೂರ್ತಿ ಶರಣಾಗಿ”
ಈ ಜಗತ್ತು ಅದ್ಭುತ! ವೈವಿಧ್ಯಮಯ! ವಿಸ್ಮಯಗಳ ಆಗರ! ಜೊತೆಗೇ ನಿಗೂಢ! ದಿನನಿತ್ಯದ ಬದುಕಿಗಾಗಿ ಎಲ್ಲರೂ ಓಡುತ್ತಿರುತ್ತಾರೆ. ಕೆಲವೇ ಕೆಲವರು ಹಾಗೆ ಓಡುವವರನ್ನು ನೋಡುತ್ತಿರುತ್ತಾರೆ! ಓಡುವಾಗ ಈ ಜಗತ್ತು ಮತ್ತು ಇಲ್ಲಿರುವ ಜೀವರಾಶಿಗಳ ಅದ್ಭುತ ವ್ಯವಹಾರಗಳ ಕಡೆ ಗಮನವೇ ಹರಿಯುವುದಿಲ್ಲ. ನಮ್ಮರಿವಿಗೆ ಬಂದಂತೆ ಅದನ್ನು ತಿಳಿದುಕೊಳ್ಳುವ ಶಕ್ತಿ ಇರುವುದು ಮನುಷ್ಯ ಜೀವಿಗಳಿಗೆ ಮಾತ್ರ! ಗುಡ್ಡ-ಬೆಟ್ಟ, ನದಿ, ಸಮುದ್ರ, ಸೂರ್ಯ, ಚಂದ್ರ, ಗಾಳಿ, ನೀರು, ಬೆಂಕಿ ಇವುಗಳೊಳಗಿನ ಸಂಬಂಧ; ಅವೆಲ್ಲವೂ ಒಂದು ವ್ಯವಸ್ಥೆಯಲ್ಲಿ ನಡೆಯುವ ರೀತಿ; ಈ ಜಗತ್ತಿನ ನಿಯಮಗಳು ಇತ್ಯಾದಿಗಳ ಬಗ್ಗೆ ತಿಳಿಯುತ್ತಾ ಹೋದಂತೆ ಕಲ್ಪಿಸಲಾಗದ ಅದ್ಭುತಲೋಕ ನಮ್ಮೆದುರು ತೆರೆದುಕೊಳ್ಳುತ್ತದೆ. ಅದೆಷ್ಟು ಬಗೆಯ ಜೀವಿಗಳು? ಅಣುವಿನಿಂದ ಸೃಷ್ಟಿಯಾದ ಗ್ರಹ, ನಕ್ಷತ್ರ ರಾಶಿಗಳು? ಇವೆಲ್ಲದರ ಕಡೆ ಗಮನ ಹೋದಾಗಲೇ ಅದರ ಹಿಂದಿರುವ ನಿಜವಾದ ಸೃಷ್ಟಿಕರ್ತನ ಕಲ್ಪನೆ ಬರುವುದು! ಅದಾಗದಿದ್ದರೆ ನಾನಾ ದೇವರ ಮೇಲೆ ಕಟ್ಟಿದ ನಾನಾ ಕತೆಗಳನ್ನು ಕೇಳಿ, ಮೂಢನಂಬಿಕೆಗೆ ಒಳಗಾಗಿ, ಸಂಕಷ್ಟಗಳಿಗೆ ತುತ್ತಾಗಿ `ನಾವು ಭ್ರಮಿಸಿದ್ದೇ ಸತ್ಯ’ ಎಂದುಕೊಂಡು ಅಲ್ಲೇ ಗಿರಕಿ ಹೊಡೆಯುತ್ತೇವೆ.
ವಿದ್ಯೆ, ವಿಚಾರವಂತಿಕೆಯ ಉತ್ತುಂಗಕ್ಕೇರಿದ ದಂಪತಿ ಹಾಗೆ ಬದುಕಿಗಾಗಿ ಓಡುವವರನ್ನು ನೋಡುತ್ತಾ ತಮ್ಮ ಪ್ರಶ್ನೆಗಳಿಗೆ ಸರಿ ಉತ್ತರ ಕಂಡುಕೊಳ್ಳುವುದೇ ಈ ಕಾದಂಬರಿಯ ಕಥಾವಸ್ತು.
Reviews
There are no reviews yet.