ಎರಡು ಸಾವಿರ ವರ್ಷಗಳಿಗೂ ಹೆಚ್ಚು ಚರಿತ್ರೆಯುಳ್ಳ ಕನ್ನಡ ಸಾಹಿತ್ಯ ಲೋಕ ಕ್ಕೆ ಅರ್ಧ ಶತಮಾನಕ್ಕೂ ಅಧಿಕ ಇತಿಹಾಸ ಹೊಂದಿರುವ ಜ್ಞಾನ ಪೀಠದ ಕೋಡು ಮೂಡಿಸಿದ್ದು ಕನ್ನಡ ಎಂಟು ಬರಹಗಾರರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಈ ಮಹನೀಯರೆಲ್ಲರೂ ಸಾಹಿತ್ಯದ ಬಗೆ ಬಗೆಯ ಪ್ರಕಾರಗಳ ಲ್ಲಿ ಪ್ರಯೋಗಮಾಡಿ ಯಶ ಕಂಡವರು; ಜಾನಪದ, ಮಹಾಕಾವ್ಯ ಬೃಹತ್ ಕಾದಂಬರಿ, ವಿಜ್ಞಾನ, ಕಥೆ, ಕಾವ್ಯ, ನಾಟಕ, ಚಿತ್ರಕಲೆ, ಚಲನಚಿತ್ರ ಹೀಗೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ಮಿಂದೆದ್ದವರು.
ಕಳೆದ ಶತಮಾನದ ಭಾರತೀಯ ಕೌಟುಂಬಿಕ ಜೀವನದ ನೋವು ನಲಿವುಗಳನ್ನು ಸಾಮಾಜಿಕ ಸ್ಥಿತ್ಯಂತರಗಳನ್ನು ಪ್ರತಿನಿಧಿಸುವ ಈ ಎಲ್ಲ ಮಹಾನುಭಾವರ ಬದುಕಿನ ಪುಟಗಳೂ ಅಷ್ಟೇ ಸ್ವಾರಸ್ಯಪೂರ್ಣ.
Reviews
There are no reviews yet.