ಮಾಲತಿಯವರ ಲೇಖನಗಳ ಹರಹು ವಿಸ್ತಾರವಾದದ್ದು. ದ್ವಾಪರಯುಗದ ‘ಯಕ್ಷಪ್ರಶ್ನೆ’ ಯಿಂದ ಪ್ರಾರಂಭಿಸಿ, ಕಲಿಯುಗದ ಅಂದರೆ ಈಗಿನ ಅತ್ಯಾಧುನಿಕ ಯುಗದ ಸಮಸ್ಯೆಗಳ ವರೆಗೆ, ಮಾಲತಿಯವರ ವಿಶ್ಲೇಷಣೆ ನಿಶಿತವಾಗಿ, ನಿಖರವಾಗಿ ಸಾಗುತ್ತದೆ. ಯಕ್ಷಪ್ರಶ್ನೆಗಳಿಗೆ ಧರ್ಮರಾಜನು ಕೊಟ್ಟ ಉತ್ತರಗಳನ್ನೇ ಇಲ್ಲಿ ಉದ್ಧರಿಸಿದ್ದರೂ, ಅವುಗಳಿಗೆ ಲೇಖಕಿ ಕೊಡುವ ನಿರೂಪಣೆ ಆಧುನಿಕ ಕಾಲದ ವಾಸ್ತವತೆಯನ್ನು ಆಧರಿಸಿರುವಂತಹದಾಗಿದೆ. ಆಧುನಿಕ ಯುಗದ ಅನೇಕ ಸಮಸ್ಯೆಗಳನ್ನು ಮಾಲತಿಯವರು ಪ್ರಸ್ತಾಪಿಸಿದ್ದು, ಅವುಗಳಿಗೆ ಅವರು ಕಂಡುಕೊಳ್ಳುವ ಪರಿಹಾರಗಳು ವಾಸ್ತವ ಹಾಗು ನ್ಯಾಯಸಮ್ಮತ ರೀತಿಯಲ್ಲಿವೆ.
ನಮ್ಮ ಈಗಿನ ಜೀವನದಲ್ಲಿಯೂ ಅನೇಕ ಯಕ್ಷಪ್ರಶ್ನೆಗಳಿದ್ದು ಮಾಲತಿಯವರು ಆ ಪ್ರಶ್ನೆಗಳಿಗೂ ಉತ್ತರ ಕಂಡು ಹಿಡಿಯಲು ಪ್ರಯತ್ನಿಸಿದ್ದಾರೆ. ಉದಾಹರಣೆಗೆ, ‘ಹಿರಿಯ ಹಾಗು ಕಿರಿಯ ತಲೆಮಾರುಗಳಲ್ಲಿಯ ಹೊಂದಾಣಿಕೆಯ ಸಾಧ್ಯತೆ’ ಎನ್ನುವ ಲೇಖನವನ್ನು ನೋಡಿದರೆ, ಈ ಲೇಖನದಲ್ಲಿ ಮಾಲತಿಯವರು ಹಿರಿಯ ಜೀವಿಗಳ ಸಮಸ್ಯೆಗಳನ್ನು ಚಿತ್ರಿಸಿದಷ್ಟೇ ಸಹಜವಾಗಿ, ಕಿರಿಯರ ಆಸೆ, ಆಕಾಂಕ್ಷೆಗಳು, ಆಧುನಿಕ ಪರಿಸರದ ಒತ್ತಡಗಳ ಬಗೆಗೂ ವಿವರಿಸಿದ್ದಾರೆ.
-40%
About this Ebook
Information
Additional information
Author | |
---|---|
Book Format | Ebook |
Language | Kannada |
Pages | 188 |
Year Published | 2023 |
Category |
Reviews
Only logged in customers who have purchased this product may leave a review.
Reviews
There are no reviews yet.