ಎಪಿಕ್ ರಂಗಭೂಮಿ
ಭಾಷೆ ಬೆಳೆಯುವದು ಅರ್ಥದಿಂದ ಮಾತ್ರವೇ ಅಲ್ಲ, ಅಪಾರ್ಥದಿಂದಲೂ ಕೂಡಾ-ಎನ್ನುವ ಮಾತನ್ನು ಈಚಿನ ಭಾಷಾಶಾಸ್ತ್ರಜ್ಞರು ಹೇಳುತ್ತಾರೆ. ಕಾಲದೇಶಗಳ ಭಿನ್ನತೆಯಲ್ಲಿ ಚಿಂತನೆಗಳು ಹೇಗೆ ರೂಪಾಂತರಗೊಳ್ಳುತ್ತ ಹೊಸ ಅರ್ಥಗಳನ್ನ ಧಾರಣೆ ಮಾಡಿಕೊಳ್ಳುತ್ತ ನಡೆಯುತ್ತವೆಯೋ ಹಾಗೆಯೇ ಪಾರಿಭಾಷಿಕ ಪದಗಳಿಗೂ ಮೂಲಕ್ಕಿಂತ ಭಿನ್ನವಾದ ಅರ್ಥಗಳು ತಗುಲಿಕೊಳ್ಳುತ್ತದೆ,ಅರ್ಥದ ಜತೆಗೇ ಅಪಾರ್ಥದ ಪ್ರವೇಶ ಆಗುವುದು ಅಂಥ ಸನ್ನಿವೇಶಗಳಲ್ಲಿಯೇ.ಇವತ್ತಿನ ಜಗತ್ತಿನಲ್ಲಿ ಶಬ್ದಗಳು ಅಸಾಧಾರಣ ವೇಗದಿಂದ ಸಂಸ್ಕೃತಿಯಿಂದ ಸಂಸ್ಕೃತಿಗೆ ಜಿಗಿಯತೊಡಗಿದೆ ಮತ್ತು ಹಾಗೆ ಜಿಗಿಯುವಾಗ ಹಿಂದೆ ಇಲ್ಲದ ಹೊಸ ಅರ್ಥಸಮೂಹಗಳನ್ನ ತಮ್ಮೊಂದಿಗೆ ಸೃಷ್ಟಸಿಕೊಳ್ಳುತ್ತಿವೆ.
ʼಎಪಿಕ್ ರಂಗಭೂಮಿʼ ಎಂಬ ಶಬ್ದದ ಕಥೆಯೂ ಕಡಿಮೆ ಸ್ವಾರಸ್ಯದ್ದೇನಲ್ಲ 1920ರ ದಶಕದ ಜರ್ಮನಿಯಲ್ಲಿ ಆ ಕಾಲದ ಸಮಾಜ.ರಾಜಕೀಯಗಳ ಹಾಗೂ ರಂಗಭೂಮಿ ಮತ್ತಿತರ ಕಲೆಗಳ ವಿಶಿಷ್ಟ ಸನ್ನಿವೇಶಗಳಲ್ಲಿ ರೂಪುತಳೆದ ಒಂದು ತಾತ್ವಿಕ ಪರಿಕಲ್ಪನೆ ಇದು.
Reviews
There are no reviews yet.