ಗಾದೆ ಸಾವಿರ ಮಾತಿನ ಸರದಾರ, ಗಾದೆ ಮಾತುಗಳೆಂದರೆ ಅಚ್ಚುಕಟ್ಟಾದ ನಿರ್ಣಯಗಳ ಲ್ಲ; ವಿವಿವೇಕ ಜಾಗೃತಿ ಮಾಡುವ ಸುಭಾಷಿತಗಳು. ಅವು ಒಂದು ಬಗೆಯ ವಕ್ರೋಕ್ತಿಗಳು. ಗಾದೆಯ ಧ್ವನಿತಾರ್ಥ ಹಿಡಿಯಲು ವ್ಯಾವಹಾರಿಕ ಜ್ಞಾನದಷ್ಟೇ ಪಾರಮಾರ್ಥಿಕ ತಿಳುವಳಿಕೆಯೂ ಬೇಕು. ಗಾದೆಗಳು ಧರ್ಮ, ಅರ್ಥ, ಕಾಮಗಳ ವಿವೇಕ ಕ್ಕಾಗಿ ನೀಡಿದ ಸೂಕ್ತಿಗಳು-ಗಾದೆಗಳು ಹೊಸ ಸುಭಾಷಿತಗಳ ಮಸೆಗಲ್ಲು; ವಿವೇಕದ ಒರೆಗಲ್ಲು’ ಎನ್ನುತ್ತಾರೆ.ವರಕವಿ ದ.ರಾ ಬೇಂದ್ರೆ.
ತರಗತಿಗಳ ಲ್ಲಿ ಪಾಠ ಮಾಡುವಾಗ ವಿದ್ಯಾರ್ಥಿಗಳಿಗೆ ಗಾದೆಗಳ ಸ್ವಾರಸ್ಯವನ್ನು ವಿವರಿಸಿ ಕುತೂಹಲ ಕೆರಳಿಸಲು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಲು, ಮಾತಿನಲ್ಲೇ ಮೋಡಿ ಮಾಡಲು ಇಂತಹ ಗಾದೆಗಳ ವಿವರಣೆ ಮತ್ತು ವಿಶ್ಲೇಷಣೆ ಅಗತ್ಯ.
Reviews
There are no reviews yet.