ಖ್ಯಾತ ಭೌತಶಾಸ್ತ್ರ ಮತ್ತು ವಿಚಾರವಾದಿ ಫ್ರೀಮನ್ ಡೈಸನ್ (೧೯೨೩-೨೦೨೦) ಅವರು ತಮ್ಮ `ದ ಸೈಂಟಿಸ್ಟ್ ಆ್ಯಜ್ ರಿಬೆಲ್’ ಎಂಬ ಕೃತಿಯಲ್ಲಿ ಕವಿ, ಕಲಾವಿದನಂತೆಯೇ ವಿಜ್ಞಾನಿಯೂ ಸಹ ಎಲ್ಲ ಬಗೆಯ ಸೀಮೆ ಮತ್ತು ಬಂಧನವನ್ನು ದಾಟಿ ವೈಚಾರಿಕ ಲೋಕದಲ್ಲಿ ವಿಹರಿಸುತ್ತ ಇರುತ್ತಾರೆ. ಅವರು ನಿಸರ್ಗ ಮತ್ತು ಸತ್ಯದ ಶೋಧದೊಳಗೆ ಮುಳುಗಿರುವಾಗಲೇ ತರ್ಕ ಮತ್ತು ಕಲ್ಪಕತೆಯ ಸಹಾಯದಿಂದ ಅಪೂರ್ವವಾದ ಕಾರ್ಯದಲ್ಲಿ ತೊಡಗಿರುತ್ತಾರೆ ಎಂದು ಹೇಳಿದ್ದಾರೆ. ಈ ಲೇಖನದಲ್ಲಿ ಸಿಲಿಲಿಯೋದಿಂದ ಇಂದಿನ ವರೆಗಿನ ಹಲವು ವಿಜ್ಞಾನಿಗಳು ಚೌಕಟ್ಟನ್ನು ಮೀರಿ ಬಂಡಾಯವನ್ನು ಏಕೆ, ಹೇಗೆ ಮಾಡಿದರು ಎಂಬುದನ್ನು ವಿವರಿಸಲಾಗಿದೆ. ಹಾಗೆಯೇ ವಿಜ್ಞಾನವು ಹೆಚ್ಚು ಬಂಡಾಯವನ್ನು ಮಾಡಿ ಕಾಲಕ್ಕಿಂತ ಮುಂದೆ ಹೋಗಬೇಕಾದ ಅಗತ್ಯವೇನಿದೆ ಎಂಬ ಬಗೆಗೂ ಭಾಷ್ಯವನ್ನು ಮಾಡಿದ್ದಾರೆ.
Reviews
There are no reviews yet.