ಸಂಗೀತ ಸಾಮ್ರಾಜ್ಞಿ ಡಾ||ಗಂಗೂಬಾಯಿ ಹಾನಗಲ್ಲ
“..ಇದು ಎಂಥಾ ಜಗತ್ತು? ಧರ್ಮದ ಹೆಸರಿನಲ್ಲೇಕೆ ಜಗತ್ತು ತುಂಡು-ತುಂಡಾಗುತ್ತಲಿದೆ? ನನ್ನ ಹೃದಯವನ್ನು ತುಂಬಾ ನೋಯಿಸುತ್ತಿದೆ… ಬೇರೆಯವರ ಧರ್ಮದ ಬಗೆಗೆ ನಮಗೇಕಿಂದು ಗೌರವವಿಲ್ಲ? ಅಬ್ದುಲ್ ಕರೀಮ್ ಖಾನ್ ಸಾಹೇಬರು ತಮ್ಮ ಸ್ವರ್ಗೀಯ ಸಂಗೀತವನ್ನು ಒಬ್ಬ ಬ್ರಾಹ್ಮಣ ಶಿಷ್ಯನಿಗೆ ಕಲಿಸಿರದಿದ್ದರೆ ನನ್ನ ಗುರು ಸವಾಯಿ ಗಂಧರ್ವರೂ ಇರ್ತಿದ್ದಿಲ್ಲ. ಅವರಿಲ್ಲದಿದ್ದರೆ ಭೀಮಸೇನ ಜೋಶಿ ಮತ್ತು ನಾನು ಎಲ್ಲಿರುತ್ತಿದ್ದೆವು? ಈಗ ಕೊಳಲು ನುಡಿಸುವ ಶೇಖ್ ಅಬ್ದುಲ್ಲ ನನ್ನ ಶಿಷ್ಯನಾಗಿದ್ದಾನೆ…” ಇದು ಡಾ||ಗಂಗೂಬಾಯಿ ಹಾನಗಲ್ಲರು ಹೇಳಿದ ಹೃದಯದ ಮಾತು.
ಗಾಯನ ಸಮಾಜದ ೧೭ನೆಯ ವಾರ್ಷಿಕ ಸಂಗೀತ ಸಮ್ಮೇಳನದ ಅಧ್ಯಕ್ಷೀಯ ಭಾಷಣದಲ್ಲಿ “ನನ್ನ ಮಟ್ಟಿಗೆ ಹೇಳಬೇಕೆಂದರೆ ನನಗೆ ಸಂಗೀತವೇ ದೇವರು. ಆ ದೇವರನ್ನು ಸಾಕ್ಷಾತ್ಕರಿಸಿಕೊಳ್ಳಬೇಕು, ಅಂದರೆ ಕಲೆಯಲ್ಲಿ ಪರಿಣತಳಾಗಬೇಕು ಎಂಬುದೊಂದೇ ನನ್ನ ಮಹದಾಸೆಯಾಗಿರುವುದು. ನನ್ನ ಗಾಯನವನ್ನು ಶ್ರೋತೃಗಳು ಕೇಳಿ ಮನಸಾರೆ ಮೆಚ್ಚಿದರೆ, ಅದು ಅವರ ಹೃದಯವನ್ನು ಮುಟ್ಟಿದರೆ ನನಗೆ ಮೋಕ್ಷ ಸಿಕ್ಕ ಹಾಗೆ”- ಹೌದು, ಇವರ ಗಾಯನವನ್ನು ಸಂಗೀತ ಪ್ರೇಮಿಗಳು ಖಂಡಿತ ಮೆಚ್ಚಿದ್ದಾರೆ.
Reviews
There are no reviews yet.