‘ಕ್ಷಿತಿಜದ ಕಣ್ಣಲ್ಲಿ ಹೊಳೆಯೊ ಹಾಂಗ
ಹಾಡಬೇಕೋ ತಮ್ಮಾ ಹಾಡಬೇಕು
ಕಲ್ಲಿನ ಎದೆಯಲ್ಲಿ ಜೀವಜಲ ಚಿಲ್ಲೆಂದು
ಚಿಮ್ಮುವಂಥಾ ಹಾಡ ಹಾಡಬೇಕು
ಆಕಾಶದಂಗಳ ಬೆಳದಿಂಗಳೂ ಕೂಡಾ
ಕಂಗಾಲಾಗುವ ಹಾಡ ಹಾಡಬೇಕು’
ಎಂದು ಕಂಬಾರ ರು ಹೇಳುವ ಮಾತು ಅವರ ಪ್ರತಿಭೆಗೇ ಹಿಡಿದ ಕನ್ನಡಿಯಾಗಿದೆ.
‘ನವ್ಯ ಚಳುವಳಿಯಲ್ಲಿ ಬಂದವರಲ್ಲಿ ಬಹಳಷ್ಟು ಮಂದಿ ಎಲಿಯಟ್ ನನ್ನು ಅನುಕರಣೆ ಮಾಡ್ತಿದ್ದಾಗ ನಾನು ‘ಹೇಳುತೇನ ಕೇಳ’ ಬರೆದ ವಸಾಹತುಶಾಹಿಯ ಆಕ್ರಮಣದಿಂದ ನಮ್ಮ ಸಂಸ್ಕೃತಿ ಹೇಗೆ ನಾಶ ಆಗುತ್ತಿದೆ ಅಂತ ಹೇಳಿದೆ. ನನ್ನ ಸಂಸ್ಕೃತಿಯನ್ನು ನಾನು ಹೇಗೆ ಉಳಿಸಿಕೊಳ್ಳಬೇಕು ಅನ್ನೋದು ನನಗೆ ಮುಖ್ಯವೇ ಹೊರತು ಎಲಿಯಟ್ ನ ನ್ನು ಕಾಪಿ ಮಾಡೋದಲ್ಲ. ನನ್ನ ಹಳ್ಳಿಯನ್ನು ನಾನು ಪ್ರೀತಿಸಬೇಕು ಅಲ್ಲವೇ? ಕಂಬಾರವರು ನುಡಿದಂತೆ ಬರೆದವರು, ಬರೆದಂತೆ ಬದುಕಿದವರು.
Reviews
There are no reviews yet.