‘ಚಾಂದನಿ ಚೌಕ್’ ನನ್ನ ಆರನೆಯ ಕಥಾ ಸಂಗ್ರಹ. ಇಲ್ಲಿನ ಬಹುತೇಕ ಕತೆಗಳು ನಾನು ಮಧ್ಯಪ್ರದೇಶದ ಅಮರಕಂಟಕಕ್ಕೆ ಹೋದ ಮೇಲೆ ಬರೆದ ಕತೆಗಳಾಗಿದ್ದರೂ ನನ್ನ ನೈತಿಕತೆ ಮತ್ತು ದೃಷ್ಟಿಕೋನವನ್ನು ರೂಪಿಸಿದ, ನನ್ನ ಸೃಜನಶೀಲ ಅಭಿವ್ಯಕ್ತಿಗೆ ರೂಪಾತ್ಮಕತೆ ಒದಗಿಸಿದ ಶಾಂತನಾಳವೇ ಈ ಕತೆಗಳಿಗೂ ಜೀವದ್ರವ್ಯವಾಗಿದೆ. – ಬಸವರಾಜ ಡೋಣೂರ
ಬಸವರಾಜ ಡೋಣೂರ ಅವರ ಇಲ್ಲಿಯ ಕತೆಗಳು ಅವರಲ್ಲಿನ ಮಾನವೀಯ ಚಿಂತನೆಗಳ ಫಲಶ್ರುತಿಗಳಾಗಿವೆ. ಆತ್ಮಗೌರವ ಮತ್ತು ನೈತಿಕತೆಯ ಬಾಳು-ಇಂತಹ ಮೌಲ್ಯಗಳು ಈ ಕತೆಗಳೊಳಗಿಂದ ಅರಳುತ್ತವೆ. ಮನುಷ್ಯನೆದೆಯೊಳೆಗೆ ತುಂಬಿಕೊಂಡಿರುವ ಕ್ರೌರ್ಯವನ್ನು ಅನಾವರಣಗೊಳಿಸುವುದರ ಜೊತೆಗೆ ನಿಷ್ಕಲ್ಮಶ ಪ್ರೇಮ ಮತ್ತು ಉದಾತ್ತ ವಿಚಾರಗಳು ಅವನ ಬದುಕನ್ನು ಎತ್ತರಿಸಬಲ್ಲ ಶಕ್ತಿ ಹೊಂದಿವೆ ಎಂಬುದನ್ನು ಅವು ಹೇಳಲು ಯತ್ನಿಸುತ್ತವೆ. – ಡಾ. ಬಸು ಬೇವಿನಗಿಡದ
Reviews
There are no reviews yet.