ಚಾ….ರೀ
ಲೇ: ವಿನಾಯಕ ಕಾಮತ್
ಗೀತೆಯಲ್ಲಿಯೂ ಚಹಾದ ಉಲ್ಲೇಖವಿದೆಯೆಂದು ಹಾಸ್ಯ ರೂಪದಲ್ಲಿ ತೋರಿಸಿಕೊಟ್ಟವರು ಶ್ರಿಯುತ ವಿನಾಯಕ ಕಾಮತ್ ಅವರು. ‘ಸರ್ವಸ್ಯಚಹಾಂ ಹೃದಿ ಸನ್ನಿವಿಷ್ಟೋ’ ಗೀತೆಯ 15ನೇ ಅಧ್ಯಾಯದ ಈ ಶ್ಲೋಕದ ಸಾಲನ್ನು ಲೇಖಕರು ಉಲ್ಲೇಖಿಸುತ್ತಾರೆ. ಉತ್ತರ ಕರ್ನಾಟಕ ಭಾಗದವರಿಗೆ ಚಹಾ ದ ಬಗ್ಗೆ ಕೇಳುವುದೇನಿದೆ ? ಮುಖ್ಯವಾಗಿ ಲೇಖಕರೂ ಕೂಡ ಧಾರವಾಡದವರೆ ಆಗಿರುವದರಿಂದ ಚಹಾ ದ ವರ್ಣನೆ ಕೇಳಬೇಕೇ? ಅಷ್ಟೇ ಸುಂದರ, ಹಾಸ್ಯ ರೂಪದಲ್ಲಿ ಚಹಾದ ಬಗ್ಗೆ ಇಲ್ಲಿ ಪ್ರಸ್ತಾಪಿಸಿದ್ದಾರೆ.
ಕಲಿತಿದ್ದು ರಸಾಯನ ಶಾಸ್ತ್ರ, ವೃತ್ತಿಯೂ ಕೂಡ ರಸಾಯನಶಾಸ್ತ್ರದ ಪ್ರಾಧ್ಯಾಪಕ ವೃತ್ತಿ ಆದರೆ ಪ್ರವೃತ್ತಿ ಮಾತ್ರ ಹಾಸ್ಯ. ಲೇಖಕರು ತಮ್ಮ ಹಾಸ್ಯರಸವನ್ನ ಪುಸ್ತಕದಲ್ಲಿ ಬಹು ಚೆನ್ನಾಗಿ ವರ್ಣಿಸಿದ್ದಾರೆ. ಇನ್ನೊಂದು ವಿಶೇಷತೆಯೆಂದರೆ ಈ ಪುಸ್ತಕಕ್ಕೆ ಬೆನ್ನುಡಿಯನ್ನ ಖ್ಯಾತ ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆಯವರು ಬರೆದಿದ್ದಾರೆ.
Reviews
There are no reviews yet.