ಮಹಾಭಾರತವನ್ನು ತಮ್ಮದೇ ಗ್ರಹಿಕೆಯಲ್ಲಿ ಅಕ್ಷರಕ್ಕಿಳಿಸಿ ಅನರ್ಘ್ಯ ಹೊತ್ತಿಗೆಯೊಂದನ್ನು ವಿಭಿನ್ನ ರೀತಿಯಲ್ಲಿ ನಿರೂಪಿಸಿರುವುದು ಲೇಖಕಿಯರ ಓದು ಮತ್ತು ಅನುಭವವನ್ನು ಅರ್ಥ ಮಾಡಿಸುತ್ತಾ ಹೋಗುತ್ತದೆ. ಮಹಾಭಾರತದ ವೈಶಿಷ್ಠ್ಯ ಮತ್ತು ಧಾರ್ಮಿಕ ಮೌಲ್ಯವನ್ನು ಹೊಸ ಆಲೋಚನೆಯೊಂದಿಗೆ ಓದುಗನ ಆಂತರ್ಯದ ದೃಷ್ಠಿಗೆ ಗೋಚರಿಸುವಂತೆ ಮಾಡಿರುವುದು ಲೇಖಕಿಯರ ಬರವಣಿಗೆಯ ಹೆಚ್ಚುಗಾರಿಕೆ. ದ್ರೌಪದಿಯ ಅಂತರಂಗ, ದ್ರೌಪದಿ ಶೋಷಿತ ಸ್ತ್ರೀ ಧ್ವನಿ, ಮಹಾಭಾರತದ ಮಹಾಮಾತೆಯರು ಮುಂತಾದ ಅಧ್ಯಾಯಗಳಲ್ಲಿ ಸ್ತ್ರೀಯರ ವಿಚಾರ ಧಾರೆಗಳು ಅಂದಿನ ಹಾಗೂ ಇಂದಿನ ಜೀವನ ಮಾರ್ಗಗಳಿಗೂ ಅನ್ವಯಿಸುವುದನ್ನು ನಾವಿಲ್ಲಿ ಕಾಣಬಹುದಾಗಿದೆ. ಸುಲಲಿತವಾಗಿ ಓದಿಸಿಕೊಂವು ಹೋಗುವ ಇಲ್ಲಿನ ಗದ್ಯ ಹಾಗೂ ಪದ್ಯ ರೂಪಕಗಳಿಗೆ ಭಾರತ ಲೋಕ ಅಂತ ಹೆಸರಿಟ್ಟಿರುವುದು ಅತ್ಯಂತ ಸೂಕ್ತವಾಗಿದೆ.
Reviews
There are no reviews yet.