ಅಂತಃಕರಣದ ಸ್ವರೂಪ!
ಜ್ಞಾನಿಪುರುಷರು ಇಡೀ ವಿಶ್ವದ ‘ಒಬ್ಸರ್ವೇಟರಿ’ ಎಂದು ಕರೆಯಲ್ಪಡುತ್ತಾರೆ. ಬ್ರಹ್ಮಾಂಡದಲ್ಲಿ ಏನು ನಡೆಯುತ್ತಿದೆ, ಅದೆಲ್ಲವನ್ನು ಜ್ಞಾನಿಪುರುಷರು ತಿಳಿದಿರುತ್ತಾರೆ. ವೇದಕ್ಕಿಂತಲೂ ಮಿಗಿಲಾದ ವಿಚಾರಗಳನ್ನು ಜ್ಞಾನಿಪುರುಷರು ಹೇಳಬಲ್ಲರು.
ಜ್ಞಾನಿಪುರುಷರು ಮಾತ್ರ ತಮ್ಮ ಅಂತಃಕರಣದಿಂದ ಸಂಪೂರ್ಣ ಬೇರ್ಪಟ್ಟು, ಕೇವಲ ಜ್ಞಾನಿ ಪುರುಷರಾದ ಪರಮ ಪೂಜ್ಯ ದಾದಾ ಭಗವಾನ್ ಅಂತಃ ಕರಣದ ಬಗ್ಗೆ ಬಹಳ ಸುಂದರವಾಗಿ ಸ್ಪಷ್ಟವಾದ ವರ್ಣನೆಯನ್ನು ಮಾಡಿದ್ದಾರೆ. ಅಂತಃಕರಣದಲ್ಲಿ ನಾಲ್ಕು ಭಾಗಗಳಿವೆ: ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂಕಾರ. ಇಲ್ಲಿ ಪ್ರತಿಯೊಂದರ ಕಾರ್ಯವೂ ಬೇರೆ ಬೇರೆಯಾಗಿದೆ. ಏಕಕಾಲದಲ್ಲಿ ಈ ನಾಲ್ಕರಲ್ಲಿ ಒಂದು ಮಾತ್ರ ಕಾರ್ಯನಿರತವಾಗಿರುತ್ತದೆ.
ಹಿಂದಿನ ಜನ್ಮದಲ್ಲಿ ಅಜ್ಞಾನದಿಂದಾಗಿ ಯಾವುದರ ಮೇಲೆಲ್ಲಾ ರಾಗ-ದ್ವೇಷ ಮಾಡಲಾಗಿತ್ತೋ, ಅವುಗಳ ಪರಮಾಣುವನ್ನು ಸೆಳೆದು ಮತ್ತು ಅವುಗಳನ್ನು ಸಂಗ್ರಹಿಸಿಕೊಂಡು ಗ್ರಂಥಿಗಳು ಉಂಟಾಗುತ್ತವೆ. ಆ ಗ್ರಂಥಿಗಳು ಈ ಜನ್ಮದಲ್ಲಿ ಚಿಗುರೊಡೆಯುತ್ತವೆ.ಅಂತಃಕರಣದ ಇನ್ನೊಂದು ಭಾಗ’ಚಿತ್ತ’ ವಾಗಿದೆ. ಚಿತ್ತಿದ ಸ್ವಾಭಾವ ಅಲೆದಾಡುವುದು. ಮನಸ್ಸು ಎಂದೂ ಅಲೆದಾಡುವುದಿಲ್ಲ. ‘ಚಿತ್ತ’ ವು ಸುಖವನ್ನು ಹುಡುಕಿಕೊಂಡು ಅಲೆಯುತ್ತಲೇ ಇರುತ್ತದೆ. ಆದರೆ , ಅದೆಲ್ಲವೂ ಭೌಕಿಕ ಸುಖವಾಗಿದ್ದು ವಿನಾಶವಾಗಿರುವುದರಿಂದ, ಅದರ ಹುಟುಕಾಟಕ್ಕೆ ಅಂತ್ಯವಿರುವುದಿಲ್ಲ. ಹಾಗಾಗಿ ಅದು ಅಲೆದಾಡುತ್ತಲೇ ಇರುತ್ತದೆ.
Reviews
There are no reviews yet.