Availability: In StockPrintbook

ಆರು ಟಾಲ್ ಸ್ಟಾಯ್ ಕತೆಗಳು

150.00

ಮಾಧವ ಚಿಪ್ಪಳಿ ಅವರು ಅನುವಾದ ಮಾಡಿದ ಈ ಪುಸ್ತಕವು ಕಥೆಗಳನ್ನು ಒಳಗೊಂಡಿದೆ.

ಪ್ರಸ್ತುತ ಸಂಕಲನದ ಎಲ್ಲಾ ಕತೆಗಳೂ ಟಾಲ್‌ಸ್ಟಾಯ್‌ಯವರ ದ್ವಿತೀಯಾರ್ಧದ ಬರವಣಿಗೆಯನ್ನು ಪ್ರತಿನಿಧಿಸುವ ಕೆಲವು ಮುಖ್ಯ ನಿದರ್ಶನಗಳು. ಈ ಕತೆಗಳಲ್ಲಿ ಪ್ರಜ್ಞಾಪೂರ್ವಕ ಕಲೆಗಾರಿಕೆಯಾಗಲೀ ಕುಸುರಿ ಕೆಲಸದ ಕಸುಬುಗಾರಿಕೆಯಾಗಲೀ ಕಂಡುಬರುವುದಿಲ್ಲ. ಹಿರಿಯನೊಬ್ಬ ತನ್ನ ಮಕ್ಕಳು, ಮೊಮ್ಮಕ್ಕಳು, ಬಂಧು ಬಾಂಧವರು, ನೆರೆ ಹೊರೆಯವರೊಂದಿಗೆ ಹಂಚಿಕೊಂಡ ಅನುಭವ ಕಥನಗಳಂತಿರುವ ಈ ಬರಹಗಳು ತಮ್ಮ ಸರಳತೆ ಮತ್ತು ಸಹಜತೆಗಳಿಂದಾಗಿ ಮನಮುಟ್ಟುತ್ತವೆ. ಅಪಾರ ಜೀವನಾನುಭವದಿಂದ ಮೂಡಿಬಂದ ವಿವೇಕ ಈ ಕತೆಗಳ ರೂಪದಲ್ಲಿ ನಿರೂಪಣೆಗೆ ಒಳಗಾಗಿದೆ ಎನಿಸುತ್ತದೆ…

ಈ ಎಲ್ಲ ಕತೆಗಳ ಕೇಂದ್ರದಲ್ಲಿರುವುದು ಸಾಮಾನ್ಯ ರಷ್ಯನ್ನರು. ಅವರ ಬದುಕಿನ ಸುತ್ತ ಹೆಣೆದ ದೃಷ್ಟಾಂತಗಳಂತಿರುವ ಈ ಕತೆಗಳು ಮೇಲುನೋಟಕ್ಕೆ ಸರಳವೆನಿಸಿದರೂ ಬದುಕನ್ನು ಕುರಿತು ಅನೇಕ ಮೂಲಭೂತವಾದ ತಾತ್ತ್ವಿಕ ಪ್ರಶ್ನೆಗಳ ಚಿಂತನ ಮಂಥನವನ್ನು ನಡೆಸುತ್ತವೆ…

Additional information

Category

Translator

Madhava Chippali

Publisher

Language

Kannada

Book Format

Printbook

Pages

120

Year Published

2009

Reviews

There are no reviews yet.

Only logged in customers who have purchased this product may leave a review.