- -40%
ಯು. ಆರ್. ಅನಂತಮೂರ್ತಿ
0Original price was: ₹150.00.₹90.00Current price is: ₹90.00.ಯು. ಆರ್. ಅನಂತಮೂರ್ತಿ
ವೈಚಾರಿಕತೆ ಹಾಗೂ ಸಾಹಿತ್ಯ :
ಅನಂತಮೂರ್ತಿಯವರು ನನ್ನ ಸಮಕಾಲೀನರಲ್ಲೇ ಅತ್ಯಂತ ಗಂಭೀರ ಮನೋಧರ್ಮದ ಲೇಖಕರು. ಬದುಕಿನ ಬಗ್ಗೆ, ಸಮಾಜದ ಬಗ್ಗೆ, ಮಾನವನ ದೈನಿಕ ಜೀವನದ ಬಗ್ಗೆ. ಅವನ ಭವಿತವ್ಯದ ಬಗ್ಗೆ ತಾವು ಅಭ್ಯಾಸ ಮಾಡಿದ್ದನ್ನು, ಗಾಢವಾಗಿ ಚಿಂತಿಸಿದ್ದನ್ನು ನಾಟ್ಯೀಕರಿಸುತ್ತ ವಿಚಾರವನ್ನೇ ಒಂದು ಜೀವಂತ ಅನುಭವದ ಪ್ರಭಾವಬೀರುವ ಸ್ಥಿತಿಗೆ ಒಯ್ದು ನಮಗೆ ಮುಟ್ಟಿಸುವ ಕಳಕಳಿಯ ಪ್ರಯತ್ನ ಇವರ ಸಾಹಿತ್ಯದ ಪ್ರಮುಖ ಲಕ್ಷ್ಯಗಳಲ್ಲೊಂದಾಗಿದೆ. ನಮ್ಮ ಪ್ರಜ್ಞೆಯನ್ನು ಹಿಗ್ಗಿಸುವಲ್ಲಿ ಸಾಹಿತ್ಯಕ್ಕಿರುವ ಮಹತ್ವದ ಪಾತ್ರವನ್ನು ಕುರಿತು ಇವರಿಗಿರುವ ಗಾಢವಾದ ಶ್ರದ್ಧೆಯೇ ಇವರು ಬರೆದ ಪ್ರತಿಯೊಂದು ನಮ್ಮ ಪ್ರೀತಿಗೆ, ಗೌರವಕ್ಕೆ ಪಾತ್ರವಾಗುವಂತೆ ಮಾಡುತ್ತದೆ.