- -40%
ಡಬ್ಲ್ಯು. ಬಿ. ಯೇಟ್ಸ್ ನ ಕಾವ್ಯದ ಮೇಲೆ ಭಾರತೀಯ ತತ್ತ್ವಶಾಸ್ತ್ರ ಪ್ರಭಾವದ ಸಾಧ್ಯತೆ
0Original price was: ₹50.00.₹30.00Current price is: ₹30.00.ಡಬ್ಲ್ಯು. ಬಿ . ಯೇಟ್ಸ್ ನ ಕಾವ್ಯದ ಮೇಲೆ ಭಾರತೀಯ ತತ್ತ್ವಶಾಸ್ತ್ರ ಪ್ರಭಾವದ ಸಾಧ್ಯತೆ
ಯೇಟ್ಸನಿಗೆ ಭಾರತೀಯ ಪ್ರಭಾವಮೂಲಗಳು ಕೇವಲ ಕಾವ್ಯಸಾಮಗ್ರಿಯ ಮಟ್ಟದಲ್ಲಿ ಉಳಿದರೆ, ಎಲಿಯಟ್ಟನಿಗೆ ಅವು ತತ್ತ್ವನಿಷ್ಕರ್ಷೆಯ, ಜೀವನದರ್ಶನದ ಸ್ಫೂರ್ತಿಯೂ ಆಗಿದೆಯೆಂದು ಕಂಡಮೇಲೆ ವೇದೋಪನಿಷತ್ತುಗಳ ಬೆಲೆ, ಪಾಶ್ಚಾತ್ಯ ಸಂಸ್ಕೃತಿಯ ಮೋಹದ ಸುಳಿಯಲ್ಲಿ ಸಿಕ್ಕ ಅಂದಿನ ನನಗೆ ಅಪಾರವಾಗಿ ಕಂಡು, ನನ್ನನ್ನೇ ನಾನು ಅರಿಯುವ ಪ್ರಯತ್ನದಲ್ಲಿ ಈ ಕವಿದ್ವಯರ ಪಾತ್ರವನ್ನು ಚಿರಸ್ಮರಣೀಯವನ್ನಾಗಿಸಿದೆ. ನಷ್ಟಪ್ರಾಯನಾಗಿದ್ದ ನನ್ನನ್ನು ಇಂದಿನ ಸ್ಥಿತಿಗೆ ತಲುಪಿಸಿರುವ ಈ ಕವಿಗಳನ್ನು ಎಂದೆಂದೂ ಮರೆಯಲಾರೆ; ಇವರ ವಿಷಯಕ ನಿಬಂಧವನ್ನು ಬರೆದ ನನಗೆ ದೊರೆತ ಈ ಫಲ, ಡಾಕ್ಟೊರೇಟ್‍ಗಿಂತ ಅಮೌಲ್ಯವಾದ ಫಲ, ಇದೇ! ಈ ಮಾತನ್ನು ಧನ್ಯತೆಯಿಂದ ಬರೆಯುವ ಭಾಗ್ಯ ನನ್ನದು. ನಾಲ್ಕುಜನಕ್ಕೆ ಈ ಅಲ್ಪಕೃತಿಯಿಂದ ಪ್ರಯೋಜನವಾದರೆ, ಮುಂದೆ ಎಲಿಯಟ್ಟನ ವಿಷಯಕ್ಕೂ, ಇತರ ಆಂಗ್ಲ ಕವಿಗಳ ಬಗೆಗೂ ಈ ಮಾದರಿಯ ಗ್ರಂಥಗಳನ್ನು ಬರೆಯುವ ವಿಚಾರವಿದೆ. ಗೆಳೆಯ ಪ್ರೊ. ಶಿವಾನಂದ ಗಾಳಿಯವರು ಈ ಬಗೆಗೆ ಹಗಲೆಲ್ಲ ಪ್ರೋತ್ಸಾಹಿಸುತ್ತ ಬಂದಿದ್ದಾರೆ. ಈ ಪುಸ್ತಿಕೆಗೆ ಸಿಗುವ ಪುರಸ್ಕಾರ, ಪ್ರೋತ್ಸಾಹ ಅದನ್ನು ನಿರ್ಧರಿಸಲಿದೆ.