- -40%
ಮಕ್ಕಳೊಡನೆ ಆಟ-ಪಾಠ, ಒಡನಾಟ
0Original price was: ₹140.00.₹84.00Current price is: ₹84.00.ಮಕ್ಕಳೊಡನೆ ಆಟ-ಪಾಠ, ಒಡನಾಟ:
ಇದು `ನಮ್ಮ ಮಕ್ಕಳು ಆಟ-ಪಾಠ, ಒಡನಾಟ’ ಎಂಬ ಹೆಸರಿನಲ್ಲಿ ಪ್ರಸಿದ್ಧ ದಿನಪತ್ರಿಕೆ `ಪ್ರಜಾವಾಣಿ’ ಯಲ್ಲಿ ಬರೆದ ಮತ್ತೊಂದು ಲೇಖನ ಮಾಲೆ. ಮಕ್ಕಳಿಂದ ಆನಂದ ಪಡೆಯಬೇಕಾದರೆ ಚಿಕ್ಕ ಮಕ್ಕಳ ಹಾಗೂ ಹದಿ ಹರೆಯದವರ ಶಾರೀರಕ ಮತ್ತು ಮಾನಸಿಕ ಬದಲಾವಣೆಗಳ ಬಗ್ಗೆ ಹೆತ್ತವರೂ ತಿಳಿದಿರಬೇಕು. ಇಲ್ಲದಿದ್ದರೆ ಮಕ್ಕಳೇಕೆ ಹಾಗೆ ಆಡುತ್ತಾರೆ ಎಂದೇ ತಿಳಿಯುವುದಿಲ್ಲ. ಮಕ್ಕಳ ಗುಣ-ಸ್ವಭಾವಗಳಂತೆ ಮಕ್ಕಳ ಸಮಸ್ಯೆಗಳೂ ಹಲವು. ತಿಳಿದಷ್ಟೂ ಇನ್ನೂ ತುಂಬ ಬಾಕಿ ಉಳಿದಿದೆ ಎನ್ನುವಷ್ಟು! ಈಗಂತೂ ಗೊಂದಲ ಮತ್ತು ಕಗ್ಗಂಟಾಗಿರುವ ಮಕ್ಕಳನ್ನು ಬೆಳೆಸುವುದರ ಬಗ್ಗೆ, ಅವರ ವಿದ್ಯಾಭ್ಯಾಸದ ಬಗ್ಗೆ ಬರೆಯುವುದು ಕೂಡ ಕಷ್ಟ ಎನಿಸುತ್ತಿದೆ. ಏಕೆಂದರೆ ಬಹಳಷ್ಟು ಹೆತ್ತವರೆ ಮಕ್ಕಳ ಎದುರು ಆಧುನಿಕ ತಂತ್ರಜ್ಞಾನದ ದುರ್ಲಾಭ ಪಡೆಯುವ ವ್ಯವಸ್ಥೆ ಮಾಡಿ, ಕೈ ತುಂಬ ಹಣ ನೀಡಿ, ತಪ್ಪುದಾರಿಯಲ್ಲಿ ನಡೆಸಿ ತಮ್ಮದೇ ಸರಿ ಎಂದು ಭಾವಿಸಿ ಮತ್ತೆ ಅವರನ್ನು ದೂರುವುದು ಕಾಣುತ್ತಿದ್ದೇವೆ. ಹಾಗಾಗಿ ಮಕ್ಕಳ ಬಗ್ಗೆ ತಿಳಿದಷ್ಟೂ ಅದು ಕಮ್ಮಿಯೇ ಎನಿಸುತ್ತಿದೆ. ಆಧುನಿಕತೆ ಬೆಳೆಯುತ್ತಾ ತಂತ್ರಜ್ಞಾನದ ಅಭಿವೃದ್ಧಿಯೂ ಆಗಿ ದಿನನಿತ್ಯ ಎಂಬಂತೆ ಆಧುನಿಕ ವಸ್ತುಗಳೂ ಮಾರುಕಟ್ಟೆಗೆ ಬರುತ್ತವೆ. ಮಾರುವವರು ಅದರ ಪ್ರಯೋಜನದ ಬಗ್ಗೆ ಇನ್ನಿಲ್ಲದಷ್ಟು ಹೇಳಿ ಆಮಿಷ ಒಡ್ಡುತ್ತಾರೆ. ಆದರೆ ಅದರಿಂದಾಗುವ ತೊಂದರೆಗಳ ಬಗ್ಗೆ ಚಕಾರ ಎತ್ತುವುದಿಲ್ಲ. ತಿಳಿದುಕೊಳ್ಳುವ ಹಂಬಲವೂ ಕಮ್ಮಿ. ಏಕೆಂದರೆ ಅದು ಪ್ರತ್ಯಕ್ಷವಾಗಿ ಕಾಣದೆ ಪರೋಕ್ಷವಾಗಿ ಕಾಡುತ್ತದೆ. ಪ್ರತ್ಯಕ್ಷವಾದ ಸಂಗತಿಗಳೇ ಅರಿವಿಗೆ ಬಾರದಿರುವಾಗ ಇನ್ನು ಪರೋಕ್ಷವಾಗಿದ್ದನ್ನು ಅರಿಯುವುದು ಹೇಗೆ? ಸಮಸ್ಯೆಗಳು ಉಲ್ಬಣಿಸಿದಾಗಲೇ ಅದರ ಅರಿವಾಗುವುದು! ಅವೆಲ್ಲದರ ಅರಿವಿನೊಂದಿಗೆ ಉದ್ವೇಗ ರಹಿತವಾಗಿ ಮಕ್ಕಳನ್ನು ಬೆಳೆಸುತ್ತಾ ಅವರೊಡನೆ ಆಟೋಟಗಳಲ್ಲಿ ಭಾಗಿಯಾಗಿ ಅವರನ್ನು ಬೆಳೆಸುತ್ತಲೇ ಅದರ ಆನಂದ ಅನುಭವಿಸಬೇಕು. ಅವರ ಸಮಸ್ಯೆಗಳಿಗೂ ಉತ್ತರವಾಗಬೇಕು.