- -40%
ರಾಜಧರ್ಮ ರಾಜನೀತಿ: ೨
0Original price was: ₹350.00.₹210.00Current price is: ₹210.00.ರಾಜಧರ್ಮ-ರಾಜನೀತಿ:೨
ಈ ಪುಸ್ತಕದ ಶೀರ್ಷಿಕೆ ಓದಿ `ರಾಜಮಹಾರಾಜರ ಕಾಲದ ಹಳೆಯ ನೀತಿಯ ಶಾಸ್ತ್ರಪುಸ್ತಕ’ ಎಂದು ಯಾರೂ ಮೂಗುಮುರಿಯಬೇಕಿಲ್ಲ. ಆಳುವವರು ಆರಿಸಿ ಬಂದರೂ, ಪಾರಂಪರ್ಯವಾಗಿ ಹಕ್ಕಿನಿಂದ ಅಧಿಕಾರಕ್ಕೆ ಬಂದರೂ, “ಆಳಿಕೆ” ಎಂಬುದಿರುತ್ತದಲ್ಲ? ಅದಕ್ಕೆ ನೀತಿ, ನಿಯಮ, ಸಂಯಮ, ವಿಧಾನ, ಅಲ್ಲಿ ನ್ಯಾಯ, ಧರ್ಮ ಪರಿಪಾಲನೆ, ವ್ಯವಸ್ಥೆಯ ರಕ್ಷಣೆ, ಪ್ರಜಾಹಿತ ಎಂಬ ಕವಚಗಳೋ, ಕಡಿವಾಣಗಳೋ ಬೇಕಲ್ಲ? ಸಂವಿಧಾನ ಇರುತ್ತದೆ, ಮೀರುವವರು ಆಡಳಿತಾರೂಢರೇ ಆದರೇನು ಗತಿ? ಐಪಿಸಿ ಎಂಬ ಅಪರಾಧ ಸಂಹಿತೆ ಇರುತ್ತದೆ. ಆದರೆ ಕ್ರಿಮಿನಲ್ ಗಳೇ ಆರಿಸಿಬರುತ್ತಾರಲ್ಲ? ಯಾವ ಸಂಹಿತೆ ಇವರಿಗೇನು ಮಾಡಿದೆ? ಈ ನಿಟ್ಟಿನಲ್ಲಿ ಸರಿ-ತಪ್ಪು-ವಿವೇಕಗಳನ್ನು ಜಾಲಾಡಿ ಬರೆಯುವುದಕ್ಕೆ ನನ್ನ ಅಂಕಣಕ್ಕೆ ಈ ಶೀರ್ಷಿಕೆಯನ್ನಾರಿಸಿಕೊಂಡೆ. ಆ ಅಂಕಣಗಳನ್ನು ಈ ಪುಸ್ತಕ ಒಳಗೊಂಡಿದೆ.
- -40%
ದೇವಕಿಯ ಚಿಂತನೆಗಳು
0Original price was: ₹350.00.₹210.00Current price is: ₹210.00.ದೇವಕಿಯ ಚಿಂತನೆಗಳು
ವಸುದೇವ, ದೇವಕಿ, ಯಶೋದೆ, ನಂದ, ಕಂಸ, ಮಾಲತಿ, ಮಾಧವಿ, ವಾಸಂತಿ, ಭದ್ರ, ವಜ್ರ, ಬಾಹು ಇಲ್ಲಿ ಪಾತ್ರಧಾರಿಗಳು. ಎಲ್ಲರೂ ಕುಣಿಯುವುದು ಕೃಷ್ಣನ ಸುತ್ತವೇ. ಅವನೇ ಸೂತ್ರಧಾರ, ಪ್ರಧಾನ ಪಾತ್ರಧಾರಿ ಸಹ.
- -40%
ಡಬ್ಲ್ಯು. ಬಿ. ಯೇಟ್ಸ್ ನ ಕಾವ್ಯದ ಮೇಲೆ ಭಾರತೀಯ ತತ್ತ್ವಶಾಸ್ತ್ರ ಪ್ರಭಾವದ ಸಾಧ್ಯತೆ
0Original price was: ₹50.00.₹30.00Current price is: ₹30.00.ಡಬ್ಲ್ಯು. ಬಿ . ಯೇಟ್ಸ್ ನ ಕಾವ್ಯದ ಮೇಲೆ ಭಾರತೀಯ ತತ್ತ್ವಶಾಸ್ತ್ರ ಪ್ರಭಾವದ ಸಾಧ್ಯತೆ
ಯೇಟ್ಸನಿಗೆ ಭಾರತೀಯ ಪ್ರಭಾವಮೂಲಗಳು ಕೇವಲ ಕಾವ್ಯಸಾಮಗ್ರಿಯ ಮಟ್ಟದಲ್ಲಿ ಉಳಿದರೆ, ಎಲಿಯಟ್ಟನಿಗೆ ಅವು ತತ್ತ್ವನಿಷ್ಕರ್ಷೆಯ, ಜೀವನದರ್ಶನದ ಸ್ಫೂರ್ತಿಯೂ ಆಗಿದೆಯೆಂದು ಕಂಡಮೇಲೆ ವೇದೋಪನಿಷತ್ತುಗಳ ಬೆಲೆ, ಪಾಶ್ಚಾತ್ಯ ಸಂಸ್ಕೃತಿಯ ಮೋಹದ ಸುಳಿಯಲ್ಲಿ ಸಿಕ್ಕ ಅಂದಿನ ನನಗೆ ಅಪಾರವಾಗಿ ಕಂಡು, ನನ್ನನ್ನೇ ನಾನು ಅರಿಯುವ ಪ್ರಯತ್ನದಲ್ಲಿ ಈ ಕವಿದ್ವಯರ ಪಾತ್ರವನ್ನು ಚಿರಸ್ಮರಣೀಯವನ್ನಾಗಿಸಿದೆ. ನಷ್ಟಪ್ರಾಯನಾಗಿದ್ದ ನನ್ನನ್ನು ಇಂದಿನ ಸ್ಥಿತಿಗೆ ತಲುಪಿಸಿರುವ ಈ ಕವಿಗಳನ್ನು ಎಂದೆಂದೂ ಮರೆಯಲಾರೆ; ಇವರ ವಿಷಯಕ ನಿಬಂಧವನ್ನು ಬರೆದ ನನಗೆ ದೊರೆತ ಈ ಫಲ, ಡಾಕ್ಟೊರೇಟ್‍ಗಿಂತ ಅಮೌಲ್ಯವಾದ ಫಲ, ಇದೇ! ಈ ಮಾತನ್ನು ಧನ್ಯತೆಯಿಂದ ಬರೆಯುವ ಭಾಗ್ಯ ನನ್ನದು. ನಾಲ್ಕುಜನಕ್ಕೆ ಈ ಅಲ್ಪಕೃತಿಯಿಂದ ಪ್ರಯೋಜನವಾದರೆ, ಮುಂದೆ ಎಲಿಯಟ್ಟನ ವಿಷಯಕ್ಕೂ, ಇತರ ಆಂಗ್ಲ ಕವಿಗಳ ಬಗೆಗೂ ಈ ಮಾದರಿಯ ಗ್ರಂಥಗಳನ್ನು ಬರೆಯುವ ವಿಚಾರವಿದೆ. ಗೆಳೆಯ ಪ್ರೊ. ಶಿವಾನಂದ ಗಾಳಿಯವರು ಈ ಬಗೆಗೆ ಹಗಲೆಲ್ಲ ಪ್ರೋತ್ಸಾಹಿಸುತ್ತ ಬಂದಿದ್ದಾರೆ. ಈ ಪುಸ್ತಿಕೆಗೆ ಸಿಗುವ ಪುರಸ್ಕಾರ, ಪ್ರೋತ್ಸಾಹ ಅದನ್ನು ನಿರ್ಧರಿಸಲಿದೆ.
- -40%
ಗಾಂಧಿಯನ್ನು ನಿಜವಾಗಿ ಕೊಂದವರು ಯಾರು?
0Original price was: ₹150.00.₹90.00Current price is: ₹90.00.ಗಾಂಧಿಯನ್ನು ನಿಜವಾಗಿ ಕೊಂದವರು ಯಾರು?
ನಾನು ರಾಜಕಾರಣಿಯೂ ಅಲ್ಲ. ರಾಜಕಾರಣ ವಿಶ್ಲೇಷಣೆಯು ನನ್ನ ಪ್ರಧಾನ ಕ್ಷೇತ್ರವೂ ಅಲ್ಲ. ಸಾಹಿತ್ಯದ ಅಧ್ಯಯನ, ಅದರ ಪ್ರಯೋಜನವನ್ನು ಸಾರ್ವಜನಿಕರಿಗೆ ರಾಷ್ಟ್ರೀಯ ಹಿತದೃಷ್ಟಿಯಿಂದ ಬಡಿಸುವ ಕಾಯಕ, ನಿರಂತರ ಚಿಂತನ-ಋಷಿಮುನಿಗಳ ಪ್ರಾಚೀನ ಪರಂಪರೆಯಲ್ಲಿ ಬಂದ ಲೋಕ ಸಂಗ್ರಹ ವಿಚಾರಗಳ, ಭಾವನೆಗಳ, ಅಧ್ಯಾತ್ಮಶಕ್ತಿಯ ಜಾಗೃತಿಗಳ ಕಾಯಕವನ್ನು ನನಗೆ ಸಾಧ್ಯವಾದ ಮಟ್ಟಿಗೆ ಮಾಡಿಕೊಂಡು ಲೋಕಕ್ಕೆ ಸ್ಪಂದಿಸುವ ಒಬ್ಬ ನಿವೃತ್ತ ಪ್ರಾಧ್ಯಾಪಕ. ಇದೆಲ್ಲ ನಿಮಗೆ ಗೊತ್ತೇ ಇದ್ದೂ ನಾನಿಲ್ಲಿ ನೆನಪಿಸುವ ಅಗತ್ಯ ಏಕೆ ಇದೆ? ಎಂದು ಹೇಳಲೇ ಬೇಕಾಗಿದೆ.
ಅನೇಕ ಮುಗ್ಧ ಭಾರತೀಯರಂತೆ ನಾನೂ ಮ|| ಗಾಂಧಿಯವರನ್ನು ಮೆಚ್ಚಿಕೊಂಡ ಕಾಲ ಇತ್ತು. ‘ಗಾಂಧಿ, ನೆಹ್ರೂ’ ಎಂದೊಡನೆ `ಜೈ ಎನ್ನುವ ಬಾಲ್ಯ ಇತ್ತು. ೧೯೫೦ರ ಸುಮಾರಿಗೆ ನೆಹ್ರೂ ಭ್ರಮೆ ಬಿಡಲಾರಂಭಿಸಿತ್ತು. ಈ `ನೆಹ್ರೂ’ ಮೂಲ ಯಾವುದು? `ಇವರು ನಿಜ ರಾಷ್ಟ್ರ ಭಕ್ತರೇ? ಸ್ವತಂತ್ರ ಚಿಂತಕರೇ? ತ್ಯಾಗಶೀಲರೇ? ಶೀಲವುಳ್ಳ, ವಿಶ್ವಸನೀಯ ನಾಯಕರೇ?’ ಎಂದು ಪ್ರಶ್ನೆ ಕೇಳಿಕೊಳ್ಳುತ್ತಾ ಹೋದಂತೆ, ಓದು ವ್ಯಾಪ್ತಿ, ಚಿಂತನ, ಚರ್ಚೆ, ಸಮಾಲೋಚನೆಗಳು ನಡೆಯುತ್ತಾ ಬಂದಂತೆ, `ಇವರು ಗಾಂಧಿ ಪ್ರಭಾವದ ದುರ್ಬಳಕೆಯ ಮಹಾಸ್ವಾರ್ಥಿ, ಎಷ್ಟೂ ಭಾರತೀಯತೆಯ ಪರಿಚಯವಿಲ್ಲದ ಢೋಂಗೀ ರಾಜಕಾರಣಿ’ ಎಂಬುದಕ್ಕೆ ಅವರದೇ ನಡೆವಳಿಕೆಗಳು, ರಾಷ್ಟ್ರಾವನತಿ, ತಪ್ಪು ಹೆಜ್ಜೆಗಳು ಪ್ರಮಾಣೀಕರಿಸುತ್ತಾ ಬಂದವು. ಘಾತಕತನ, ಸಾಕ್ಷಿಗಳ ಕುಕ್ಕುವ ಬೆಳಕಿನಲ್ಲಿ ದೇವರೆಂದು ಭಾವಿಸಿದ್ದವನಿಗೆ ದೆವ್ವದ ಸಾಕ್ಷಾತ್ಕಾರವಾಯ್ತು. ಆಗುತ್ತಲೇ ಇದೆ. ಈ ಬೆಳಕಿನಲ್ಲೇ `ಸುಭಾಷರ ಕಣ್ಮರೆ’ ಪುಸ್ತಕವನ್ನು ನಾನು ಬರೆದದ್ದು. ರಾಮಾಯಣ, ಮಹಾಭಾರತ, ಭಾಗವತಗಳ ಆಸುರೀ ಶಕ್ತಿಗಳು, ಅವುಗಳ ಶಕ್ತಿ, ಹಿಡಿತ, ಅವುಗಳ ಬೇರು, ವಿಷಫಲಗಳು ಈಗಣ ಭಾರತದಲ್ಲೂ ಕಾಣಲಾರಂಭಿಸಿ, ನಾನು ಕ್ಷೇತ್ರಾಂತರದಲ್ಲೂ ದುಷ್ಟ ಪಾತ್ರಗಳ ಪರಿಚಯಕ್ಕೆ ಕೈ ಹಾಕುವ ಕೆಲಸಕ್ಕೆ ಬಂದುದು ಆಕಸ್ಮಿಕವಾಗಿ ಕಂಡರೂ ದೈವಪ್ರೇರಣೆಯೂ ಕಾಣಲಾರಂಭಿಸಿದೆ. - -40%
ಆಳ್ವಾರರು ಮತ್ತು ಹರಿದಾಸರು
0Original price was: ₹50.00.₹30.00Current price is: ₹30.00.ಆಳ್ವಾರರು ಮತ್ತು ಹರಿದಾಸರು
ಹರಿದಾಸರು, ಆಳ್ವಾರುಗಳು, ಶರಣರು, ಉತ್ತರ ಭಾರತೀಯ ಭಕ್ತಿ ಸಾಹಿತ್ಯ ರಚಯಿತರಾದ ಸಂತರು, ಭಕ್ತರು – ಇವರೇ ನಮ್ಮ ಸಂಸ್ಕೃತಿಯನ್ನು ಆಪತ್ಕಾಲದಲ್ಲಿ ವಿದೇಶೀಪ್ರಭಾವ, ಮತಾಂತರ ಹಾವಳಿಯಿಂದ ರಕ್ಷಿಸಿದವರು. ಯೋಗಿಗಳು, ಜ್ಞಾನಿಗಳು. ಪ್ರಕೃತ ಗ್ರಂಥದಲ್ಲಿ ನಾನು ಆಳ್ವಾರರುಗಳ ಮತ್ತು ಹರಿದಾಸರ ಕೊಡುಗೆಗಳು, ಶೈಲಿ ವ್ಯತ್ಯಾಸಗಳು, ಪರಸ್ಪರ ಪ್ರಭಾವಸಾಧ್ಯತೆಗಳನ್ನು ಕುರಿತು ಹಲವು ದಶಕಗಳ ಹಿಂದೆ ಉಡುಪಿಯಲ್ಲಿ ನೀಡಿದ ಉಪನ್ಯಾಸಗಳ ಮರುಮುದ್ರಣವಿದು.
ಎಲ್ಲ ವೇದಾಂತವೂ ಅದಕ್ಕೆ ಪೂರಕವಾದ ತರ್ಕ ವ್ಯಾಕರಣಾದಿ ಶಾಸ್ತ್ರಗಳೂ ಪರಿಪೂರ್ಣತೆ ಹೊಂದಿ, ಪರಿಸಮಾಪ್ತಿ, ಸಮಗ್ರ ಪ್ರತ್ಯಕ್ಷಾನುಭವದ ರೂಪದಲ್ಲಿ ಉಪಾಸಕನಿಗೆ ದೊರಕುವುದೇ “ಯೋಗ”ದಲ್ಲಿ. ಹಾಗೆಂದರೆ ಬರೀ “ಆಸನ”ಗಳಲ್ಲ, ದೇಹ ವ್ಯಾಯಾಮ ಅಲ್ಲ. ಅಷ್ಟಾಂಗ ಯೋಗವಿಜ್ಞಾನಕ್ಕೇ ಭಕ್ತಿ ಎಂದು ಬೇರೊಂದು ಹೆಸರು. ಪಾತಂಜಲಯೋಗಕ್ಕೂ ಪೂರ್ವದ್ದು ಅಧ್ಯಾತ್ಮ ವೈದಿಕ ಯೋಗ. “ಮನಸ್ಸನ್ನು ದೇವರಿಂದ ತುಂಬುವುದೇ ಯೋಗ”. (ಯುಜ್ ಸೇರಿಸುವುದು). ಮನಸ್ಸನ್ನು “ಖಾಲಿ” ಮಾಡುವುದಲ್ಲ!
- -40%
ಭಾರತ, ಇಸ್ಲಾಂ ಮತ್ತು ಗಾಂಧಿ
0Original price was: ₹150.00.₹90.00Current price is: ₹90.00.ಭಾರತ, ಇಸ್ಲಾಂ ಮತ್ತು ಗಾಂಧಿ:
ಶ್ರೀ ಅರವಿಂದರ ಭವಿಷ್ಯವಾಣಿ
ಮತ್ತು ಇತರ ಲೇಖನಗಳು
ಗಾಂಧಿಯವರ ಮೇಲೂ ಹೆಚ್ಚು ಬೆಳಕು ಚೆಲ್ಲುವ, ದಿಗ್ದರ್ಶಕವಾದ ಸೂಕ್ತ ಲೇಖನಗಳು ಎಂದು ಭಾವಿಸುತ್ತೇನೆ. ಈಗ ನಮ್ಮೆದುರು ಇರುವುದು ರಾಷ್ಟ್ರ ರಕ್ಷಣೆಯ ಮಹಾ ಹೊಣೆ. ಅದಕ್ಕೆ ವಿಘ್ನವಾಗಿರುವ ಎಲ್ಲ ದುಷ್ಟ ವಿಚಾರಗಳನ್ನೂ, ಅಂಥ ಪರಂಪರೆಗಳನ್ನೂ, ಅವುಗಳನ್ನು ಹುಟ್ಟು ಹಾಕಿದವರನ್ನೂ ನಿರ್ದಾಕ್ಷಿಣ್ಯವಾಗಿ ಬಯಲು ಮಾಡಿ, ಅವುಗಳನ್ನು ಮೆಟ್ಟಿಯೇ ನಾವು ಮುಂದೆ ನಡೆದ ಹೊರತು ನಮಗೆ ಭವಿಷ್ಯವಿಲ್ಲ. ಕಣ್ಣು ಮುಚ್ಚಿ ಒಪ್ಪುವ, ಯಾರನ್ನೂ ಪೂಜಿಸುವ ಅಂಧಶ್ರದ್ಧೆ ಭಾರತೀಯ ಪರಂಪರೆಗೆ ದೂರವಾದುದು.