- -40%
ಜ್ಞಾನವೃಕ್ಷ
0Original price was: ₹108.00.₹65.00Current price is: ₹65.00.ಜ್ಞಾನವೃಕ್ಷ
(ಜೀವನ ಮತ್ತು ಬದುಕು)
ಜೀವನ ಸಹಜ ಪ್ರಕೃತಿಯಾದರೆ ಬದುಕು ಸಂಸ್ಕಾರದಿಂದ ರೂಪುಗೊಂಡ ಪ್ರತಿಮೆ. ಧಾರ್ಮಿಕ, ಸಾಮಾಜಿಕ, ವೈಜ್ಞಾನಿಕ, ಭೌತಿಕವೇ ಮೊದಲಾದ ಅನೇಕ ವಿಷಯಗಳನ್ನು ಕೈಗೆತ್ತಿಕೊಂಡು ಹಿಂದೂ, ಮುಸ್ಲಿಮ್ ಕ್ರಿಶ್ಚಿಯನ್, ಸಿಖ್, ಪಾರ್ಸಿ ಮುಂತಾದ ಜನಾಂಗಗಳಿಗೆ ಸಂಬಂಧಿಸಿದ ಗ್ರಂಥಗಳ ಜೊತೆಗೆ ತುಲನಾತ್ಮಕ ಅಧ್ಯಯನದಿಂದ ತಮ್ಮ ಪ್ರಬಂಧಗಳನ್ನು ಮಂಡಿಸುತ್ತಾರೆ. ಈ ಬಹುಮುಖ ಅಧ್ಯಯನ ಇಂದಿನ ಸಮಾಜಕ್ಕೆ ಬದುಕಿನ ಕನ್ನಡಿಯಾಗಿ ಬಾಳಿನ ಮುನ್ನುಡಿಯಾಗಿ ಓದುಗರನ್ನು ಮುನ್ನಡೆಸಲು ಸಹಾಯಕವಾಗಿದೆ. ‘ಉಪವಾಸದ ಹಿನ್ನೆಲೆಯಲ್ಲಿ ಏಕಾದಶಿಯ ಮಹತ್ವ’ವನ್ನು ನಾನಾ ಬಗೆಯಾಗಿ ವಿಶ್ಲೇಷಿಸಿದ್ದಾರೆ. - -39%
ಅಕ್ಷಯಪಾತ್ರೆ
0Original price was: ₹64.00.₹39.00Current price is: ₹39.00.ಅಕ್ಷಯಪಾತ್ರೆ
(ಕಾಂದಬರಿ)
ಇತ್ತೀಚಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ಸಾಹಸ ಕಥೆ ಕಾದಂಬರಿಗಳು ಕಮ್ಮಿಯಾಗಿವೆ. ಮೊದಲೇ ಕನ್ನಡ ಸಾಹಿತ್ಯವು ಓದುಗರ ಕ್ಷಾಮವನ್ನು ಎದುರಿಸುತ್ತಿದೆ. ಟಿವಿ, ಸಿನಿಮಾದ ಅಬ್ಬರದಲ್ಲಿ ಕಾದಂಬರಿ ಓದಿಗರ ಸಂಖ್ಯೆ ಕಡಿಮೆಯಾಗಿದೆ. ಅದರಲ್ಲೂ ಯುವವರ್ಗ ಸಾಹಿತ್ಯ ಕ್ಷೇತ್ರದತ್ತ ನಿರಾಸಕ್ತಿ ಹೊಂದಿದೆ. ಇಂತಹ ವಿಷಮ ಘಟ್ಟದಲ್ಲಿ ಮಿತ್ರ ಶ್ರೀ ಎಚ್.ಜಿ.ಮಳಗಿಯವರು ರೋಚಕ ಸಾಹಸ ಕಾದಂಬರಿಯನ್ನು ಕನ್ನಡ ಓದುಗರಿಗೆ ನೀಡುವ ಸಾಹಸ ಮಾಡಿದ್ದು ಅಭಿನಂದನೀಯ. ಮಹಾಭಾರತ ಕಾಲದ ಅಕ್ಷಯಪಾತ್ರೆಯನ್ನು ಹುಡುಕಿಕೊಂಡು ಪ್ರಾಚ್ಯವಸ್ತು ಸಂಶೋಧನಾ ತಂಡವು ದೂರದ ಅಫಘಾನಿಸ್ತಾನಕ್ಕೆ ಹೋಗಿ ಅಲ್ಲಿ ಭಯೋತ್ಪಾದರಿಂದ, ಖಳನಾಯಕನಿಂದ ಅನೇಕ ತೊಂದರೆಗಳನ್ನು ಎದುರಿಸಿ ಬರುವ ರೋಚಕ ಕಥಾವಸ್ತುವನ್ನು ಹೊಂದಿದೆ. ಕ್ಷಣಕ್ಷಣಕ್ಕೂ ಎದುರಾಗುವ ಅಪಾಯಗಳು, ವಿಕ್ಷಿಪ್ತ ಖಳನಾಯಕನ ಕ್ರೂರ ನಡೆಗಳು. ನಾಯಕನ ಮೈನವಿರೇಳಿಸುವ ಸಾಹಸಗಳು, ನಾಯಕಿಯ ಅಹಂ, ಸಿಟ್ಟು, ಅಸಹಾಯಕತೆ ಎಲ್ಲವೂ ರೋಚಕತೆಗೆ ಮೆರಗನ್ನು ತಂದಿವೆ. ನಾಯಕಿ ಅಫಘಾನಿಸ್ತಾನದ ಹಳ್ಳಿಯ ತಾಂಡಾವೊಂದರಲ್ಲಿ ಅಲ್ಲಿನ ನೃತ್ಯಗಾತಿಯೊಂದಿಗೆ ಸ್ಪರ್ಧೆಗೆ ಬಿದ್ದು ನೃತ್ಯ ಮಾಡುವುದಂತೂ ಥೇಟ್ ಹಿಂದೀ ಚಿತ್ರದಲ್ಲಿ ಬರುವ ಸನ್ನಿವೇಶದಂತಿದೆ. - -40%
ಲಿಲ್ಲಿ ಪುಟ್ಟ
0Original price was: ₹100.00.₹60.00Current price is: ₹60.00.ಲಿಲ್ಲಿ ಪುಟ್ಟ
ಲಿಲ್ಲಿ ಪುಟ್ಟ ಸಹಜ ಲಹರಿಯಲ್ಲಿ ಹರಿದು ಬರುವ ಕಾದಂಬರಿ. ರೋಚಕತೆ ಮತ್ತು ನಾಟಕೀಯತೆ ಇದರ ಪ್ರಧಾನ ಗುಣಗಳು. ಪಕ್ಕ ಧಾರವಾಡದ ಶೈಲಿ ಭಾಷಾ ಸೊಗಡು, ತಿಳಿ ಹಾಸ್ಯ, ದಟ್ಟ ಪಾತ್ರ ಚಿತ್ರಿಕತೆ, ಇಲ್ಲಿಯ ಸತ್ವವಾಗಿದೆ. ಯಾರಾದರು, ಎಂದಾದರೂ ತಮ್ಮ ಯವ್ವನದಲ್ಲಿ ಅನುಭವಿಸಿರಬಹುದಾದ ಕಥಾಕೋಷ ಇಲ್ಲಿಯದು. ಏಕಕಾಲಕ್ಕೆ ಸೀರಿಯಲ್ ಮತ್ತು ಸಿನೇಮಾ ಶೈಲಿ ಈ ಕಾದಂಬರಿಯ ಕಥಾ ಕೇಂದ್ರ ಯವ್ವನದ ರೋಚಕ ದಿನಗಳದ್ದಾಗಿದ್ದರಿಂದ ಒಂದು ವರ್ಗದ ಓದುಗರಿಗೆ ಗಕ್ಕನೆ ಹಿಡಿಯಬಲ್ಲ ಶಕ್ತಿ ಇದಕ್ಕಿದೆ.