• -10%

    ಬೀಜದೊಳಗಣ ವೃಕ್ಷ

    0

    ಬೀಜದೊಳಗಣ ವೃಕ್ಷ

    ಶ್ರೀಮತಿ ಗೀತಾ ವಸಂತ ಅವರು ಬೇಂದ್ರೆ ಕಾವ್ಯದ ವಿರಾಟ್ ಸ್ವರೂಪದ ಬಗ್ಗೆ `ಬೀಜದೊಳಗಣ ವೃಕ್ಷ’ ಎಂಬ ಹೆಸರಿನಿಂದ ಅಧ್ಯಯನ ಗ್ರಂಥವೊಂದನ್ನು ಬರೆದು ಪ್ರಸ್ತುತ ಪಡಿಸುತ್ತಿದ್ದಾರೆ. ಈ ವಿಷಯದ ಬಗ್ಗೆ ಅವರು ತುಮಕೂರು ವಿಶ್ವವಿದ್ಯಾಲಯಕ್ಕೆ ಮಹಾಪ್ರಬಂಧವನ್ನು ಸಲ್ಲಿಸಿ ಡಿ.ಲಿಟ್. ಪದವಿ ಪಡೆದಿದ್ದಾರೆ. ಅದನ್ನು ಓದುಗರಿಗೆ ಉಪಯೋಗವಾಗುವ ರೀತಿಯಲ್ಲಿ ಮಾರ್ಪಡಿಸಿ ಕೃತಿ ರಚಿಸಿದ್ದಾರೆ.

    Original price was: ₹180.00.Current price is: ₹162.00.
    Add to cart
  • -10%

    ತಾವರೆಯ ಬಾಗಿಲು

    0

    ‘ತಾವರೆಯ ಬಾಗಿಲು’ ಕಾವ್ಯ ಕುರಿತು 40 ಪ್ರಬಂಧಗಳ ಸಂಕಲನ

    Original price was: ₹200.00.Current price is: ₹180.00.
    Add to cart
  • -10%

    ಮತ್ತೊಬ್ಬ ರಾಧೆ

    0

    ಮತ್ತೊಬ್ಬ ರಾಧೆ
    (ಕೀರ್ತನಕಾರ್ತಿ ಗಲಗಲಿ ಅವ್ವನವರನ್ನು ಕುರಿತ ನಾಟಕ)

    ಈ ನಾಟಕವು ಹದಿನೆಂಟನೇ ಶತಮಾನದ ಕೀರ್ತನಕಾರ್ತಿ ಗಲಗಲಿ ಅವ್ವನವರನ್ನು ಕುರಿತದ್ದಾಗಿದೆ. ಬಾಗಲಕೋಟ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿಯಲ್ಲಿ ಪ್ರಸಿದ್ಧ ಪಂಡಿತರಾಗಿದ್ದ ಗಲಗಲಿ ಮುದಗಲ್ಲಾಚಾರ್ಯರ ಕಿರುಪತ್ನಿಯಾಗಿ ರಮಾ ತನ್ನ ಹನ್ನೆರಡು ವರ್ಷದಲ್ಲಿಯೇ ಮದುವೆಯಾಗಿ ಗಲಗಲಿ ಗ್ರಾಮವನ್ನು ಪ್ರವೇಶಿಸಿದಳು. ಮದುವೆಯಾದ ಎಂಟು ದಿನಕ್ಕೇ ವಿಧವೆಯಾದಳು. ವಿಧವೆಯಾಗಿ ಬತ್ತಿ ಹೊಸೆಯದೆ, ನ್ಯಾಯಪಂಡಿತಳಾಗಿ ಪೇಶ್ವೇ ಅರಸರ ಪಂಡಿತರನ್ನು ಸೋಲಿಸಿ, ಪುಣೆಯ ಅರಸರಿಂದ ವರ್ಷಾಶನ ಪಡೆದಳು. ಅವ್ವನವರ ಮುನ್ನೂರು ಕೀರ್ತನೆಗಳು ಪ್ರಕಟವಾಗಿವೆ. ಕನ್ನಡದಲ್ಲಿ ಕೀರ್ತನೆ ರಚಿಸಿದ ಮೊದಲ ಮಹಿಳೆಯೆಂಬ ಹೆಗ್ಗಳಿಕೆಗೆ ಗಲಗಲಿ ಅವ್ವ ಸಾಕ್ಷಿಯಾಗಿದ್ದಾಳೆ. ಪುಟ್ಟ ವಿಧವೆಯಾಗಿ ಕಾಣಿಸಿಕೊಂಡ ಈ ಮಹಿಳೆ ಗಲಗಲಿ ಅವ್ವನಾಗಿ ಬೆಳೆದು ನಿಂತದ್ದು, ಅಧ್ಯಾತ್ಮ ಮತ್ತು ಸಾಹಿತ್ಯದಲ್ಲಿ ಮಹತ್ತರ ಸಾಧನೆ ಮಾಡಿದ್ದು ಈಗ ಚರಿತ್ರೆಗೆ ಸೇರಿದ ವಿಷಯವಾಗಿದೆ.
    ಗಲಗಲಿ ಅವ್ವನವರ ವೈಯಕ್ತಿಕ ಬದುಕಿನ ವಿವರಗಳನ್ನು ವಿವರಿಸುವುದು ಈ ನಾಟಕದ ಉದ್ದೇಶವಲ್ಲ. ಅವ್ವನನ್ನು ಒಂದು ಪ್ರತಿಮೆಯನ್ನಾಗಿಸಿಕೊಂಡು, ಶತಮಾನಗಳಿಂದ  ಸ್ತ್ರೀ ಈ ದೇಶವ್ಯವಸ್ಥೆಯಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಕುರಿತು ಚರ್ಚಿಸಲಾಗಿದೆ. ಹೆಣ್ಣೊಬ್ಬಳು ಅಧ್ಯಾತ್ಮದೆತ್ತರಕ್ಕೇರಿದ ಸ್ಥಿತಿಯನ್ನು ಗುರುತಿಸಲಾಗಿದೆ.

    Original price was: ₹70.00.Current price is: ₹63.00.
    Add to cart
  • -10%

    ಕಾಲು ದಾರಿಯ ಕಥನಗಳು

    0

    ಕಾಲು ದಾರಿಯ ಕಥನಗಳು
    (ಜಾನಪದ-ಜೀವನ-ಕಥನ)

    ಶ್ರೀ ಕೃಷ್ಣಮೂರ್ತಿ ಹನೂರು ಇವರ `ಕಾಲು ದಾರಿಯ ಕಥನಗಳು’ (ಜಾನಪದ-ಜೀವನ-ಕಥನ) ಕೃತಿಯನ್ನು ಚಂದಾದಾರರಿಗೆ ತಲುಪಿಸಲು ಸಂತೋಷವಾಗುತ್ತಿದೆ. ಶ್ರೀ ಹನೂರು ಅವರು ತಮ್ಮ ಜೀವನದ ಅಮೂಲ್ಯ ಭಾಗವನ್ನು ಜಾನಪದ ಜೀವನದೊಂದಿಗೆ ಕಳೆದು, ಅದು ನಶಿಸಿ ಹೋಗದಂತೆ ತಮ್ಮ ಅಕ್ಷರ ಸಾಹಿತ್ಯದ ಮೂಲಕ ಕೊನೆಯವರೆಗೂ ಉಳಿಯುವಂತೆ ನೋಡಿಕೊಂಡಿದ್ದಾರೆ. ಅವರಿಗೆ ಕನ್ನಡ ಸಾಹಿತ್ಯ ಋಣಿಯಾಗಿರಬೇಕು.

    Original price was: ₹260.00.Current price is: ₹234.00.
    Add to cart
  • -10%

    ಮ್ಯೂಟೇಶನ್

    0

    ಮ್ಯೂಟೇಶನ್
    (ಕಥಾಸಂಕಲನ)

    ಇದು ‘ಆರಾಮಕುರ್ಚಿ ಮತ್ತು ಕತೆಗಳು’ ನಂತರದ, ನನ್ನ ಎರಡನೆಯ ಕಥಾಸಂಕಲನವಾಗಿದೆ. ಈ ಕತೆಗಳನ್ನು ಬೇರೆ ಬೇರೆ ಕಾಲಘಟ್ಟದಲ್ಲಿ ಬರೆಯಲಾಗಿದೆ. ಸಣ್ಣಕತೆಗಳು ನನ್ನನ್ನು ತಿಳಿಗೊಳಿಸುತ್ತಾ ಬಂದಿವೆ. ಬರೆದಾದ ಮೇಲೆ ಅವುಗಳಲ್ಲಿ ನನ್ನ ಮುಖ ನೋಡುತ್ತಾ ಸಂತೋಷಪಟ್ಟಿದ್ದೇನೆ. ಅಲ್ಲಿ ಕಂಡ ಇತರ ಮುಖಗಳು ಕೂಡ ಅಚ್ಚರಿ ಹುಟ್ಟಿಸಿವೆ. ಬರೆಯುವ ಕ್ರಿಯೆಯೇ ನನ್ನನ್ನು ನಾನು ಶುದ್ಧೀಕರಿಸಿಕೊಳ್ಳುವ ಕ್ರಿಯೆಯಾಗಿದೆ. ಬರೆದಾದ ಮೇಲೆ ಅದು ಮೂಡಿಸುವ ಪ್ರಸನ್ನತೆ ಬಿಡುಗಡೆಯ ಭಾಗ್ಯ ಕೊಟ್ಟಿದೆ. ನಾಟಕ, ಕಾವ್ಯ ಸಾಹಿತ್ಯದ ಪ್ರಮುಖ ಅಂಗಗಳಾದರೂ ಕೂಡ, ಕತೆ-ಕಾದಂಬರಿ ಮಾತ್ರ ಪೂರ್ಣದೇಹಿಗಳಂತೆ ಕಂಡಿವೆ. ಬಹುತೇಕ ಓದುಗರು ಸಣ್ಣಕತೆಗಳಿಗೆ ಭೇಟಿಕೊಡುವಷ್ಟು, ಉಳಿದ ಪ್ರಕಾರಗಳಿಗೆ ಭೇಟಿ ಕೊಡಲಾರರು. ಸಣ್ಣಕತೆಯ, ಸಣ್ಣದೆನ್ನುವ ಭಾವನೆಯೇ ಮನುಷ್ಯನ ಸಾವನ್ನು ನೆನಪಿಸುತ್ತಿರಬಹುದು! ಹುಟ್ಟು ಸಾವಿನ ಮಧ್ಯದ ಬದುಕು ಬರಿ ಸಣ್ಣ ಕತೆಯಾಗಿರಬಹುದು! ಹೀಗಾಗಿ ಓದುಗರಿಗೆ ಇದರ ಬಗ್ಗೆ ವಿಲಕ್ಷಣವಾದ ಸೆಳೆತವಿದೆ.

    Original price was: ₹60.00.Current price is: ₹54.00.
    Add to cart
  • -10%

    ಇಣುಕಿದಲ್ಲಿ ಛಂದ

    0

    ಇಣುಕಿದಲ್ಲಿ ಛಂದ
    (ಲಲಿತ ಪ್ರಬಂಧಗಳು)

    ಕಾವ್ಯ ನನಗೆ ಮೌನಗಳ ಮೀಟುವ ಏಕತಾರಿ. ನಾಟಕ ಹಲವು ಸಮಸ್ಯೆಗಳ ಚಿಂತನೆಯ ಅನಾವರಣ. ಸುತ್ತಲಿನ ನನಗಿಷ್ಟವಾದದ್ದನ್ನೆಲ್ಲ ಎತ್ತಿಕೊಂಡು ತನ್ಮಯಳಾಗುವ ಖುಷಿ, ಲಲಿತ ಪ್ರಬಂಧ.
    ಎದುರಾಗುವ ಸನ್ನಿವೇಶ, ವ್ಯಕ್ತಿಗಳನ್ನು ರಾಗಭಾವಗಳಿಂದ ಪ್ರತ್ಯೇಕಿಸಿ ನವಿರು ಹಾಸ್ಯಕ್ಕೆ ಪ್ರತಿಮೆಯಾಗಿಸಿಯೂ, ಓರೆ ಕೋರೆಗಳ ಸಾಪೇಕ್ಷತೆಯನ್ನು ಈ ಪ್ರಪಂಚದ ಸಾರ್ವತ್ರಿಕ ಸಹಜ ನಡವಳಿಕೆಯಾಗಿ ಸ್ವೀಕರಿಸುವ ಆರೋಗ್ಯಕರ ಔದಾರ್ಯವೇ ಲಲಿತಪ್ರಬಂಧದ ಜೀವನಾಡಿ. ಯಾವುದೇ ಸಾಹಿತ್ಯಿಕ ಕಾಲಘಟ್ಟದ ಹಣೆಪಟ್ಟಿಯ ಹಂಗಿಲ್ಲದೆ ಹರಿವ ಹೊಳೆ ಲಲಿತ ಪ್ರಬಂಧ. ನನ್ನ ಬೊಗಸೆಯಲಿ ಹಿಡಿವಷ್ಟು ಸಲಿಲವನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ. ಕನ್ನಡದಲ್ಲಿ ಗೊರೂರು, ವಿ. ಸೀ., ಪು.ತಿ.ನ., ಎ. ಎನ್. ಮೂರ್ತಿರಾಯರು, ಅ. ರಾ. ಮಿತ್ರ ಮುಂತಾದ ಲೇಖಕರು ಲಲಿತ ಪ್ರಬಂಧ ಪ್ರಕಾರವನ್ನು ಬೆಳೆಸಿದ್ದಾರೆ. ಮನೆಯ ಪುಸ್ತಕದ ರಾಶಿಯಲ್ಲಿ ಮೊದಲು ನನ್ನ ಕಣ್ಣಿಗೆ ಬಿದ್ದ ರಾ. ಕು. ಅವರ `ಗಾಳಿಪಟ’ ಪ್ರತಿಯೊಂದು ಮರು ಓದಿನಲ್ಲೂ ಅದೇ ಸಂತೋಷ ಕೊಡುವ ಕೃತಿ.

    Original price was: ₹200.00.Current price is: ₹180.00.
    Add to cart
  • -10%

    ಅತಿಥಿ ದೇವೋ ಭವ

    0

    ಅತಿಥಿ ದೇವೋ ಭವ
    (ಅತಿಥಿಯ ರಸಪ್ರಸಂಗಗಳು)

    ಸ್ವಾಮಿರಾವ ಕುಲಕರ್ಣಿಯವರ  `ಅತಿಥಿ ದೇವೋ ಭವ’ ಎಂಬ ಅತಿಥಿಯ ಅನುಭವಗಳ ರಸಪ್ರಸಂಗಗಳ ಕುರಿತಾಗಿ ಬರೆದ ಪ್ರಬಂಧಗಳ ಸಂಕಲನ.
    “ಕನ್ನಡ ಸಾಹಿತ್ಯದಲ್ಲಿ ಇದೊಂದು ಹೊಸ ಪ್ರಯೋಗದ ಅಪರೂಪದ ಸಾಹಿತ್ಯ ಪ್ರಕಾರವಾಗಿದೆ.” ೧೯೯೮ರಲ್ಲಿ ಪ್ರಕಟವಾದ ನನ್ನ `ರಂಗನಾಟಕದ ರಸಪ್ರಸಂಗಳು’- ರಂಗಾನುಭವದ ಕಿರುಲೇಖನಗಳ ಕೃತಿಯ ಬಗ್ಗೆ ಹಿರಿಯ ಸಾಹಿತಿ ದಿ. ಡಾ. ಹಾ. ಮಾ. ನಾಯಕರ ಮಾತುಗಳಿವು. ರಂಗಭೂಮಿಯ ಹಿರಿಯರಾದ ಮಾಸ್ಟರ್ ಹಿರಣ್ಣಯ್ಯನವರು “ನಾನೂ ಹಲವು ದಶಕಗಳಿಂದ ನಾಟಕ ಮಾಡತಿದ್ದೀನಿ. ಇಂತಹ ಅನೇಕ ಘಟನೆಗಳು, ಪ್ರಸಂಗಗಳು ನಡೆದಿವೆ. ನಿಮ್ಮ `ರಂಗನಾಟಕಗಳ ರಸಪ್ರಸಂಗಗಳು’ ಓದಿದ ಮೇಲೆ, ನಾನು ಇಂತಹ ಪ್ರಸಂಗಗಳನ್ನು ಬರೆಯದೇ ತಪ್ಪು ಮಾಡಿದೆ ಅನಿಸುತ್ತದೆ.’ ಈರ್ವರು ಹಿರಿಯರ ಈ ಮಾತುಗಳೇ `ಅತಿಥಿ ದೇವೋಭವ’ ಬರಹಕ್ಕೆ ಮೂಲ ಪ್ರೇರಣೆಯಾಗಿವೆ.

    Original price was: ₹70.00.Current price is: ₹63.00.
    Add to cart
  • -10%

    ಉತ್ತರ ವಿಹಾರ

    0

    ಉತ್ತರ ವಿಹಾರ
    (ಪ್ರವಾಸಕಥನ)

    ಕಳೆದ ಎರಡು ಮೂರು ವರ್ಷಗಳಲ್ಲಿ ದೇಶದ ಉತ್ತರ ಭಾಗಗಳಲ್ಲಿ ಕೈಗೊಂಡ ಪ್ರವಾಸದ ಫಲಸ್ವರೂಪ ಈ ಕೃತಿ. ಉತ್ತರಪ್ರದೇಶ ಮತ್ತು ಬಿಹಾರದ ಪ್ರಮುಖ ಪ್ರವಾಸಿ ತಾಣಗಳಲ್ಲದೆ, ಕಾಶ್ಮೀರ, ಉತ್ತರಾಖಂಡದ ಕೆಲವು ಪ್ರೇಕ್ಷಣೀಯ ಸ್ಥಳಗಳು ಹಾಗೂ ಪೂರ್ವಾಂಧ್ರ ಕುರಿತು ಎರಡು ಕಥನಗಳು ಕೃತಿಯಲ್ಲಿ ಸೇರಿವೆ. ಇವುಗಳಲ್ಲಿ ಕಾಶ್ಮೀರ ಪ್ರವಾಸ ಮಾತ್ರ ಸಹಕುಟುಂಬ ಪ್ರವಾಸವಾಗಿದ್ದರೆ, ಉಳಿದ ಪ್ರವಾಸಗಳು ಸಹೃದಯ ಸನ್ಮಿತ್ರರೊಂದಿಗೆ ಕೈಗೊಂಡ ಪ್ರವಾಸಗಳು. ನೋಡುವ ಕಣ್ಣಿಗೆ ಪ್ರತಿ ಪ್ರವಾಸವೂ ಒಂದು ಅಪೂರ್ವ ಅನುಭವವೆ. ಒಂದು ಪ್ರದೇಶದ ಇತಿಹಾಸ, ಭೂಗೋಳ, ಪರಂಪರೆ ಕುರಿತು ತೀವ್ರ ಆಸಕ್ತಿ ನನ್ನ ಪ್ರವಾಸ ಕಥನಗಳ ಹಿಂದಿನ  ಪ್ರೇರಕ ಶಕ್ತಿ. ಪ್ರತಿಯೊಂದು ವಿಶಿಷ್ಟ, ವಿಭಿನ್ನ. ನನ್ನ ಹಿಂದಿನ ಆರೂ ಪ್ರವಾಸ ಕಥನಗಳಿಗೆ ಓದುಗರಿಂದ ಒಳ್ಳೆಯ ಸ್ಪಂದನೆ ಸಿಕ್ಕಿದೆ.

    Original price was: ₹170.00.Current price is: ₹153.00.
    Add to cart
  • -10%

    ಮೊಲೆವಾಲು ನಂಜಾಗಿ

    0

    ಮೊಲೆವಾಲು ನಂಜಾಗಿ

    ಕತೆಗಳು

    ಶ್ರೀ ಮಲ್ಲಿಕಾರ್ಜುನ ಹಿರೇಮಠ

    ‘‘ಮೊಲೆವಾಲು ನಂಜಾಗಿ….’’ ಎಂಬ ಈ ಕಥಾ ಸಂಕಲನದ ತಲೆ ಬರಹವನ್ನು ಅವರು ಬಸವಣ್ಣನವರ ಒಂದು ವಚನದಿಂದ ಆಯ್ದುಕೊಂಡಿದ್ದಾರೆ. ಅಲ್ಲದೆ ಆ ಹೆಸರಿನ ಕಥೆಯೊಂದು ಈ ಸಂಕಲನದ ಕೇಂದ್ರದಲ್ಲಿಯೇ ಇದೆ. ‘‘ಅವನತಿ’’ ಕಥೆಯು ಮೇಲ್ನೋಟಕ್ಕೆ ಒಂದು ಗ್ರಾಮೀಣ ಪ್ರದೇಶದಲ್ಲಿಯ ಕಾಲೇಜಿನಲ್ಲಿ ನಡೆಯುವ ವಿದ್ಯಮಾನದಂತೆ ತೋರುತ್ತದೆ. ‘‘ತಯಾರಿ’’ ಕಥೆಯು  ಹೆಚ್ಚು ಜಟಿಲವಾಗಿದ್ದು ಕಥೆಯು ಸ್ತ್ರೀ ಕೇಂದ್ರಿತವಾಗಿದೆ. ವಿಧವೆಯೊಬ್ಬಳು ಮರುಮದುವೆಯಾಗಿದ್ದಾಳೆ. ಅವಳ ಮನೆಯವರ ವಿರೋಧದಿಂದಾಗಿ ಮತ್ತು ಗಂಡನ ತಂದೆ-ತಾಯಿಗಳಿಗೆ ಈ ಮದುವೆ ಸ್ವೀಕೃತವಾಗಿಲ್ಲವಾದುದರಿಂದ, ಪ್ರೀತಿಯ ಆಧಾರವೊಂದರಲ್ಲಿಯೇ ಅವರು ಬಾಳಬೇಕಾಗಿದೆ. ಆದರೆ ಪ್ರೀತಿಯೊಂದೇ ಆಧಾರವಾಗಿ ಬಾಳಬೇಕಿದ್ದ ಮಹಿಳೆಯು ತನ್ನ ಗಂಡನನ್ನೇ ಅರ್ಥಾತ್ ತನ್ನ ಪ್ರೀತಿಯನ್ನೇ ಕಳೆದುಕೊಂಡಾಗ ಬದುಕಲು ಅವಳು ಮಾಡಿಕೊಳ್ಳಬೇಕಾದ ಸಿದ್ಧತೆಯೇ ಈ ಕಥೆಯ ವಸ್ತು. ಸಂಕಲನದ ಕೊನೆಯ ಕಥೆ ‘‘ಮಾಗಿ’’ ಸ್ವಲ್ಪ ದೀರ್ಘವಾದ ಕತೆಯೆ. ಮೂವರು ಮಿತ್ರರು ಒಂದು ಪ್ರವಾಸದಲ್ಲಿ ತಮ್ಮನ್ನೇ ತಾವು ಗುರುತಿಸಿಕೊಳ್ಳುವ ವಿಧಾನವನ್ನು ಕುರಿತು  ಕಥೆಯು ಚಿಂತಿಸುತ್ತದೆ. 

    Original price was: ₹150.00.Current price is: ₹135.00.
    Add to cart
  • -10%

    ತುಕ್ಕಪ್ಪಾ ಮಾಸ್ತರ

    0

    ತುಕ್ಕಪ್ಪಾ ಮಾಸ್ತರ
    (ಕತೆಗಳು)

    ಶ್ರೀ ಚಂದ್ರಕಾಂತ ಕುಸನೂರ

    ಈ ಕೃತಿಯು ಶ್ರೀ ಚಂದ್ರಕಾಂತ ಕುಸನೂರರ ೮ ವಿಭಿನ್ನ ಕತೆಗಳನ್ನು ಒಳಗೊಂಡಿದೆ.

    Original price was: ₹100.00.Current price is: ₹90.00.
    Add to cart
  • -10%

    ಮೀಸೆ ಮಾವ

    0

    ಮೀಸೆ ಮಾವ

    ಮೀಸೆ ಮಾವ- ಶ್ರೀ ಭಾಸ್ಕರ ಹೆಗಡೆಯವರ ಕಥಾಸಂಕಲನ .

    Original price was: ₹130.00.Current price is: ₹117.00.
    Add to cart
  • -10%

    ತ್ರಸ್ತ

    0

    ತ್ರಸ್ತ

    ಈ ಪುಸ್ತಕವು ರೇಖಾ ಕಾಖಂಡಕಿ ಅವರು ಬರೆದ ಕಾದಂಬರಿಯಾಗಿದೆ.

    Original price was: ₹130.00.Current price is: ₹117.00.
    Add to cart