ಡಾ. ಲೋಹಿತ್ ನಾಯ್ಕರ ರಾಜಕೀಯ ಕಾದಂಬರಿ “ಉಮೇದುವಾರರು”.
ಡಾ. ಲೋಹಿತ್ ನಾಯ್ಕರ ರಾಜಕೀಯದಲ್ಲೂ ತೊಡಗಿಸಿಕೊಂಡಿದ್ದರಿಂದ ರಾಜಕೀಯದ ಒಳಹೊರಗನ್ನು ಬಲ್ಲವರಾಗಿದ್ದಾರೆ. ಹಾಗಾಗಿ ಅವರ ಅನುಭವದ ಮೂಸೆಯಿಂದ ಹೊರಬಂದಿರುವ ಈ ಕಾದಂಬರಿಯ ಕಥಾವಸ್ತುವಿಗೆ ಮತ್ತು ಇಲ್ಲಿನ ಪಾತ್ರಗಳಿಗೆ ಅಧಿಕೃತತೆ ದಕ್ಕಿರುವುದರಿಂದ ಕೃತಿಯ ಘನತೆಯನ್ನು ಹೆಚ್ಚಿಸಿದೆ. ಹೈದರಾಬಾದ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದಲ್ಲಿ ಎರಡು ರಾಜಕೀಯ ಕುಟುಂಬಗಳಲ್ಲಿ ನಡೆಯುವ ಹಗ್ಗಜಗ್ಗಾಟದ ಜೊತೆಗೆ ಮಧ್ಯ ಕರ್ನಾಟಕದಲ್ಲಿ ಹಣ, ಹೆಂಡ ಮತ್ತು ಸಾರಾಯಿ ಇವುಗಳ ಜೊತೆಗೆ ಜಾತಿವ್ಯವಸ್ಥೆ ಹೇಗೆ ರಾಜಕೀಯ ದಾಳಗಳಾಗಬಲ್ಲವು ಎಂಬುದನ್ನು ಅತ್ಯಂತ ನವಿರಾದ ಹಾಗೂ ಲವಲವಿಕೆಯ ಭಾಷೆಯಲ್ಲಿ ಲೋಹಿತ್ ಹಿಡಿದಿಟ್ಟಿದ್ದಾರೆ.