ಕೃಷ್ಣಾ ಕೌಲಗಿ 1946 ಫೆಬ್ರುವರಿ 09 ಧಾರವಾಡದಲ್ಲಿ ಜನಿಸಿದರು. ವೃತ್ತಿಯಲ್ಲಿ ಶಿಕ್ಷಕರು. ವೈಚಾರಿಕ ಬರಹಗಳಿಗೆ ಹೆಚ್ಚು ಒತ್ತು ನೀಡುವ ಬರೆಹಗಾರ್ತಿ, ನಿವೃತ್ತಿಯ ಬಳಿಕ ಬೆಂಗಳೂರಿನಲ್ಲಿ ವಾಸ. ಇಳಿ ವಯಸ್ಸಿನಲ್ಲೂ ಬತ್ತದ ಬರವಣಿಗೆಯ ಉತ್ಸಾಹ ಅವರನ್ನು ಸಮಾಜಮುಖಿಯನ್ನಾಗಿಸಿದೆ. ‘ನೀರ ಮೇಲೆ ಅಲೆಯ ಉಂಗುರ’ ಅವರ ಅಂಕಣ ಬರಹಗಳ ಸಂಕಲನ. ಸಾಮಾಜಿಕ ಜಾಲತಾಣವನ್ನು ಸಮರ್ಥವಾಗಿ ಉಪಯೋಗಿಸಿಕೊಂಡು ಚಿಂತನಾ ಬರಹಗಳನ್ನು ಓದುಗರಿಗೆ ತಲುಪಿಸಿದರು.