Guruprasad

Guruprasad

1972 ನವೆಂಬರ್‌ 02ರಂದು ಕನಕಪುರದಲ್ಲಿ ಜನಿಸಿದರು. ನವಿರು, ಸೂಕ್ಷ್ಮ ವ್ಯಂಗ್ಯಗಳ ಮೂಲಕ ಸಾಮಾಜಿಕ ಸಂದೇಶ ನೀಡುವ ಚಿತ್ರಗಳ ನಿರ್ದೇಶನದಲ್ಲಿ ಇವರು ಸಿದ್ಧಹಸ್ತರು. 2006ರಲ್ಲಿ ತೆರೆಕಂಡ `ಮಠ’ ಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಸಿನಿ ಪಯಣ ಆರಂಭಿಸಿದರು. ಇವರ ‘ಎದ್ದೇಳು ಮಂಜುನಾಥ’ ಪುಸ್ತಕವು ಸಿನಿಮಾ ಸಾಹಿತ್ಯಕ್ಕೆ ಒಗ್ಗಿದ್ದು ಸಿನಿಮಾ ಪ್ರೇಮಿಗಳಿಗೆ ಇಷ್ಟವಾಗುತ್ತವೆ. ನಂತರ ಇದೇ ಶೀರ್ಷಿಕೆಯಲ್ಲಿ ಚಿತ್ರಿಸಿದ `ಎದ್ದೇಳು ಮಂಜುನಾಥ’ ತನ್ನ ವಿಭಿನ್ನ ನಿರೂಪಣೆ, ಲವಲವಿಕೆಯ ಕತೆ ಹೇಳುವಿಕೆಯ ಕಾರಣಕ್ಕಾಗಿಯೇ ಚಿತ್ರ ಪ್ರೇಕ್ಷಕರ ಮನಸೂರೆಗೊಂಡಿತ್ತು.

Books By Guruprasad