• -38%

    ಹಯವದನ

    0

    ಹಯವದನ
    ಶ್ರೀ ಗಿರೀಶ ಕಾರ್ನಾಡರ ‘ಹಯವದನ’ ನಾಟಕವು ಎಪ್ಪತ್ತರ ದಶಕದಲ್ಲಿ ಅವರು ಹೋಮಿಭಾಭಾ ಫೆಲೋಶಿಪ್ ಪಡೆದು ಧಾರವಾಡದಲ್ಲಿದ್ದಾಗ ಬರೆದದ್ದು. ಈ ನಾಟಕಕ್ಕೆ ರಾಷ್ಟ್ರಮಟ್ಟದ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿಯೂ ದೊರಕಿದೆ. ಶ್ರೀ ಸತ್ಯದೇವ ದುಬೆ, ಬಿ.ವಿ. ಕಾರಂತರಂಥ ನಿರ್ದೇಶಕರಿಂದ ಅನೇಕ ಪ್ರದರ್ಶನಗಳನ್ನು ಕಂಡಿದೆ. ಶ್ರೀ ದುಬೆಯವರ ಹಿಂದೀ ಪ್ರದರ್ಶನದಲ್ಲಿ ಶ್ರೀ ಅಮೋಲ ಪಾಲೇಕರ, ದಿ. ಅಮರೀಶಪುರಿ ಶ್ರೀಮತಿ ಸುನೀತಾ ಪ್ರಧಾನ ಮುಂತಾದವರು ಪಾತ್ರವಹಿಸಿ, ಈ ನಾಟಕದ ಪ್ರದರ್ಶನ ಅತ್ಯಂತ ಯಶಸ್ವಿಯಾಗಲು ಮತ್ತು ಬಹುಕಾಲ ಜನರ ಮನಸ್ಸಿನಲ್ಲಿ ಬೇರೂರಲು ಕಾರಣವಾಯಿತು.

    Original price was: ₹120.00.Current price is: ₹75.00.
    Add to cart
  • -40%

    ಟಿಪೂ ಸುಲ್ತಾನ ಕಂಡ ಕನಸು

    0

    ಟಿಪೂ ಸುಲ್ತಾನ ಕಂಡ ಕನಸು
    1997 ರಲ್ಲಿ ಭಾರತೀಯ ಸ್ವಾತಂತ್ರ್ಯಕ್ಕೆ ಐವತ್ತು ತುಂಬಿದ ಸಂದರ್ಭದಲ್ಲಿ ಇಂಗ್ಲೆಂಡಿನ ಬಿ.ಬಿಸಿ. ರೇಡಿಯೋದವರು ನನಗೆ ಸ್ವಾತಂತ್ರ್ಯ ದಿನಂದು ಬಿತ್ತರಿಸಲಿಕ್ಕಾಗಿ ಒಂದು ನಾಟಕ ಬರೆದುಕೊಡಲು ಕೇಳಿಕೊಂಡರು. ನಾಟಕದ ವಸ್ತು ಆಂಗ್ಲ-ಭಾರತೀಯ ಸಂಬಂಧವನ್ನು ಕುರಿತದ್ದಾಗಿರಬೇಕು ಎಂಬ ಮಾತು ಸೂಚ್ಯವಾಗಿ ಬಂದಾಗ ನನಗೆ ಕೂಡಲೆ ಹೊಳೆದದ್ದು ಕರ್ನಾಟಕದ ಕೊನೆಯ ಸ್ವತಂತ್ರ ಶಾಸಕನಾದ ಟಿಪೂ ಸುಲ್ತಾನನ ದುರಂತ! ತನ್ನ ಇಡಿಯ ಬಾಳನ್ನು ಬಡಿದಾಟದಲ್ಲೇ ನೀಗಿಸಿದ ಈ ವ್ಯಕ್ತಿ ಗುಟ್ಟಾಗಿ ತನ್ನ ಕನಸುಗಳನ್ನು ಬರೆದಿಡುತ್ತಿದ್ದ ಎಂಬ ಮಾತನ್ನು ಏ.ಕೆ.ರಾಮಾನುಜನ್‍ರಿಂದ ಕೇಳಿದಂದಿನಿಂದ ನನಗೆ ಟಿಪೂವಿನಲ್ಲಿ ವಿಶೇಷ ಆಸಕ್ತಿ ಉಂಟಾಗಿತ್ತು. ಅದೇ ನಾಟಕ ರಚನೆಗೆ ಪ್ರೇರಣೆಯಾಯಿತು.

    Original price was: ₹60.00.Current price is: ₹36.00.
    Add to cart
  • -40%

    ತುಘಲಕ್

    0

    ಇದು ಗಿರೀಶ ಕಾರ್ನಾಡರ ಎರಡನೆಯ ನಾಟಕ. ಈ ನಾಟಕದ ಕಥಾವಸ್ತು ಐತಿಹಾಸಿಕವಾಗಿದ್ದರೂ ಇದರ ಉದ್ದೇಶ ಇತಿಹಾಸದ ಚಿತ್ರಣವಲ್ಲ. ತುಘಲಕ್ ವಂಶದ ಹುಚ್ಚ ಮುಹಮ್ಮದನ ಅರಾಜಕತೆಯ ಆಳ್ವಿಕೆಯೇ ನಾಟಕದ ಕಾರ್ಯಪರಂಪರೆಯಗಿದ್ದರೂ ತೋರಿಸುವ ಕೃತಿಯಲ್ಲ. ಮನುಷ್ಯ ದೇವತ್ವದ ಕನಸನ್ನು ಕಾಣುವ ಪಶುವಾಗಿರುವದೇ ಇಲ್ಲಿಯ ಮೂಲಭೂತವಾದ ಸಮಸ್ಯೆಯಾಗಿದೆ. ಈ ಸಮಸ್ಯೆ ಹುಟ್ಟಿಸುವ ಅನೇಕ ಮಾನವೀಯ ಅನರ್ಥಗಳಿಗೆ ಮುಹಮ್ಮದ ಪ್ರಳಯ ಕೇಂದ್ರವಾಗಿದ್ದಾನೆ.

    Original price was: ₹100.00.Current price is: ₹60.00.
    Add to cart
  • -40%

    ಅಂಜುಮಲ್ಲಿಗೆ

    0

    ‘ಅಂಜುಮಲ್ಲಿಗೆ’ ನಾನು ಆಕ್ಸಫರ್ಡಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ನಡೆದ ಒಂದು ಘಟನೆಯನ್ನು ಆಧರಿಸಿ ಬರೆದದ್ದು. ೧೯೬೦ರ ದಶಕದಲ್ಲಿ ಬ್ರಿಟನ್ನಿನಲ್ಲಿ ಭಾರತೀಯರು ತೀರ ಕಡಿಮೆ ಸಂಖ್ಯೆಯಲ್ಲಿದ್ದರು. ಇಂದು ಆ ದೇಶವನ್ನೇ ವ್ಯಾಪಿಸಿದ್ದಾರೆ. ಹೀಗಾಗಿ ಇಂದಿನ ರಾಜಕೀಯ ಮಾನಸಿಕ ತುಮುಲಗಳು ಅಂದಿಗಿಂತ ಬೇರೆಯಾಗಿರಬಹುದು.
    ಗಿರೀಶ ಕಾರ್ನಾಡ

    Original price was: ₹80.00.Current price is: ₹48.00.
    Add to cart
  • -40%

    ಬಲಿ

    0

    ಒಂದು ದೃಷ್ಟಿಯಲ್ಲಿ ‘ಬಲಿ’ ನಾಟಕವನ್ನು ನಾನು ೧೯೫೬ರಲ್ಲಿ ಕರ್ನಾಟಕ ಕಾಲೇಜಿನಲ್ಲಿ ‘ಯಶೋಧರ ಚರಿತ’ ಓದಿದ ಗಳಿಗೆಯಿಂದಲೇ ಬರೆಯಲಾರಂಭಿಸಿದೆ. ಅದು ‘ಹಿಟ್ಟಿನ ಹುಂಜ’ ಎಂಬ ಹೆಸರಿನಲ್ಲಿ ಪ್ರಕಟ ಕೂಡ ಆಯಿತು. ನಂತರ ಇದನ್ನು ಮತ್ತೆ ಹೊಸದಾಗಿ ಬರೆದು ಸತ್ಯದೇವ ದುಬೇ ಸೂಚಿಸಿದಂತೆ ‘ಬಲಿ’ ಎಂಬ ಹೊಸ ಹೆಸರಿಟ್ಟೆ.

    ಗಿರೀಶ ಕಾರ್ನಾಡ

    Original price was: ₹40.00.Current price is: ₹24.00.
    Add to cart
  • -40%

    ತಲೆದಂಡ

    0

    ‘ತಲೆದಂಡ’ ಪದ ಬಸವಣ್ಣನವರ ವಚನದಿಂದ ಬಂದದ್ದಾದರೂ ನನಗೆ ನಾಟಕದ ಹೆಸರಾಗಿ ದೊರೆತದ್ದು ದ. ರಾ. ಬೇಂದ್ರೆ ಅವರಿಂದ. ಸುಮಾರು ಐವತ್ತು ವರ್ಷಗಳ ಹಿಂದೆ ಅವರು ಬಸವಣ್ಣ-ಬಿಜ್ಜಳರ ಯುಗವನ್ನು ಕುರಿತು ಈ ಹೆಸರಿನ ನಾಟಕವನ್ನು ಬರೆಯುವ ಹೊಳಹು ಹಾಕಿದ್ದರಂತೆ. ಆದರೆ ಬರೆಯಲಿಲ್ಲ.
    ಈಗಾಗಲೇ ಈ ವಿಷಯವನ್ನೇ ವಸ್ತುವಾಗಿಟ್ಟುಕೊಂಡ ಹಲವಾರು ಕಾದಂಬರಿ, ನಾಟಕಗಳು ಕನ್ನಡದಲ್ಲಿ ಬಂದಿವೆ. ಅವುಗಳಲ್ಲಿ ಲಂಕೇಶ್ ಹಾಗೂ ಶಿವಪ್ರಕಾಶ್ ಬರೆದ ನಾಟಕಗಳು, ಬಿ. ಪುಟ್ಟಸ್ವಾಮಯ್ಯ – ಡಾ. ಎಚ್. ತಿಪ್ಪೇರುದ್ರಸ್ವಾಮಿ ಅವರ ಕಾದಂಬರಿಗಳು ವಿಶೇಷ ಪ್ರಶಂಸೆ ಗಳಿಸಿವೆ.
    ಆದರೂ ಈ ನಾಟಕ ಬರೆದಿದ್ದೇನೆ.

    ಗಿರೀಶ ಕಾರ್ನಾಡ

    Original price was: ₹80.00.Current price is: ₹48.00.
    Add to cart
  • -40%

    ನಾಗಮಂಡಲ

    0

    ನಾಗಮಂಡಲ – ನಾಟಕ

    ಇದು ಗಿರೀಶ ಕಾರ್ನಾಡ ರಚನೆಯ ನಾಟಕವಾಗಿದೆ.

    Original price was: ₹50.00.Current price is: ₹30.00.
    Add to cart
  • -40%

    ಅಗ್ನಿ ಮತ್ತು ಮಳೆ

    0

    ಇದು ಗಿರೀಶ್ ಕಾರ್ನಾಡವರು  ಬರೆದ  ನಾಟಕವಾಗಿದೆ. ಶ್ರೀಯುತ ಗಿರೀಶ ಕಾರ್ನಾಡರು ೧೯೯೩ ರಲ್ಲಿ ಅಮೇರಿಕಾದ ಮಿನಿಯಾಪೋಲಿಸ್ ನಗರದ ಗಥ್ರೀ ಥಿಏಟರ್ ನಾಟ್ಯ ಸಂಸ್ಥೆಯವರಿಗಾಗಿ ಬರೆದ ನಾಟಕ.

    Original price was: ₹70.00.Current price is: ₹42.00.
    Add to cart
  • -40%

    ಯಯಾತಿ

    0

    ‘ಕವಿಯಾಗಬೇಕು’ ಎಂದು ಕೊಂಡಿದ್ದ ಗಿರೀಶ್ ಕಾರ್ನಾಡ್ ಅವರು ಬರೆದ ಮೊದಲ ನಾಟಕ. ರೋಡ್ಸ್ ಸ್ಕಾಲರ್ಶಿಪ್ ಮೇಲೆ ಇಂಗ್ಲೆಂಡಿಗೆ ತೆರಳುವ ಮುನ್ನ ತನ್ನ ’ಯಯಾತಿ’ಯ ಹಸ್ತಪ್ರತಿಯನ್ನು ಮನೋಹರ ಗ್ರಂಥಮಾಲೆಯ ಜಿ.ಬಿ. ಜೋಶಿ ಅವರ ಬಳಿ ನೀಡಿದ್ದರು ಗಿರೀಶ್ ಕಾರ್ನಾಡ್ ಅವರು.

    Original price was: ₹80.00.Current price is: ₹48.00.
    Add to cart
  • -40%

    ಆಡಾಡತ ಆಯುಷ್ಯ

    0

    ಆಡಾಡತ ಆಯುಷ್ಯ – ಈ ಕ್ರತಿಯು ಗಿರೀಶ ಕಾರ್ನಾಡ ಅವರ ಆತ್ಮಕಥೆಯಾಗಿದ್ದು, ಆತ್ಮಕಥೆಯ ಪೂರ್ವಾರ್ಧವನ್ನು ಒಳಗೊಂಡಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಗಿರೀಶ್ ಕಾರ್ನಾಡ್ ಅವರ ಆತ್ಮಕತೆ ‘ಆಡಾಡತ ಆಯುಷ್ಯ’.

    Original price was: ₹375.00.Current price is: ₹225.00.
    Add to cart