• -40%

    ಅನಾಥ ಹಕ್ಕಿಯ ಕೂಗು

    0

    ‘ಅನಾಥ ಹಕ್ಕಿಯ ಕೂಗು’ ಒಂದು ಮನೋವೈಜ್ಞಾನಿಕ ಕಾದಂಬರಿ. ಹೆತ್ತವರಿದ್ದೂ ತಬ್ಬಲಿಯಾದ ಮಕ್ಕಳ ಬದುಕು ಸಂಕಟಕ್ಕೆ ಬಿದ್ದರೆ ಅದರ ನೋವು ತಟ್ಟುವುದು ಕೊನೆಗೂ ಹೆತ್ತವರಿಗೇ. ಅದರಲ್ಲೂ ಅಮ್ಮನಿಗೆ! ಏಕೆಂದರೆ ಹತ್ತು ತಿಂಗಳು ಹೊಟ್ಟೆಯಲ್ಲಿಟ್ಟು ಬೆಳೆಸಿದ ಅವಳದೇ ಒಂದು ಭಾಗ ಅದು. ನಂತರ ಅದರ ರಕ್ಷಣೆಗೆ ನಿಲ್ಲಬೇಕಾದ ಅಪ್ಪನಿಗೆ! ಇಬ್ಬರ ಪ್ರೀತಿಯೂ ಸಿಗದೆ ಹೋದರೆ ಮಗುವಿನ ಗತಿ? ‘ಹೆತ್ತವರ ಪ್ರೀತಿ ಇಲ್ಲದೆ ಬೆಳೆದ ಮಗು ಸಮಾಜಘಾತಕರಾಗಬಹುದು’ ಎಂದು ಎಚ್ಚರಿಸುತ್ತಾರೆ ಮನಃಶಾಸ್ತ್ರಜ್ಞರು. ‘ಬೇರೇನೂ ದಾರಿಯಿಲ್ಲ; ಬದುಕೇ ಘೋರವಾಗುತ್ತದೆ’ ಎನ್ನುವ ಸಂದರ್ಭದ ಹೊರತಾಗಿ ಡಿವೋರ್ಸ್ ಪಡೆದುಕೊಳ್ಳಬೇಕಾದರೆ ನೂರು ಬಾರಿ ಯೋಚಿಸಬೇಕು. ಹಾಗಿಲ್ಲವಾದರೆ ಆಗುವ ಪರಿಣಾಮಗಳ ಬಗ್ಗೆ ಒಂದು ಚಿತ್ರ ಇದರಲ್ಲಿ ಸಿಗಬಹುದು. ಎಲ್ಲ ಮಕ್ಕಳಿಗೂ ಹೀಗೇ ಆಗುತ್ತದೆ ಎಂದಲ್ಲ; ಹೀಗಾಗುವ ಸಾಧ್ಯತೆ ಹೆಚ್ಚು!

    Original price was: ₹130.00.Current price is: ₹78.00.
    Add to cart
  • -40%

    ಮನುಷ್ಯರ ಮನಸ್ಸು ಮತ್ತು ಸ್ವಭಾವಗಳು ಭಾಗ-1

    0

    ಶ್ರೀ ಗಿರಿಮನೆ ಶ್ಯಾಮರಾವ್ ಅವರ ಚಿಂತನೆ-ಅನುಭವ- ಜೀವನ ಪ್ರೀತಿಯಿಂದ ಮೂಡಿ ಬಂದಿರುವ `ಮನುಷ್ಯರ ಮನಸ್ಸು ಮತ್ತು ಸ್ವಭಾವಗಳು’ ಒಂದು ವಿಶಿಷ್ಟ ಕೃತಿ. ಸಣ್ಣ ಸಣ್ಣ ಅಧ್ಯಾಯಗಳಲ್ಲಿ ಅವರು ಮನುಷ್ಯರ ಮಾತು, ವರ್ತನೆ, ನಂಬಿಕೆ, ಧೋರಣೆ, ಯಾವುದೇ ವಿಷಯ/ವಸ್ತು/ ಸಂದರ್ಭದಲ್ಲಿ ಅವರ ಪ್ರತಿಕ್ರಿಯೆಗಳು, ಅವರ ಭಾವನೆಗಳು, ಅವರ ತಪ್ಪು-ಒಪ್ಪುಗಳು, ಬಲಾಬಲಗಳು, ಸಾಮರ್ಥ್ಯ-ದೌರ್ಬಲ್ಯಗಳನ್ನು ಅನಾವರಣ ಮಾಡಿದ್ದಾರೆ.

    Original price was: ₹120.00.Current price is: ₹72.00.
    Add to cart
  • -40%

    ಮಕ್ಕಳನ್ನು ಬೆಳೆಸುವುದು ಹೇಗೆ-ಭಾಗ1

    0

    `ಮಕ್ಕಳನ್ನು ಹೇಗೋ ಬೆಳೆಸುವ ಬದಲು ಹೀಗೂ ಬೆಳೆಸಬಹುದು’ ಎನ್ನುವುದನ್ನು ಉದಾಹರಣೆಗಳ ಸಮೇತ ಲೇಖಕ ಗಿರಿಮನೆ ಶ್ಯಾಮರಾವ್ ಇಲ್ಲಿ ವಿವರಿಸಿದ್ದಾರೆ. ಇದರಲ್ಲಿ ಮಕ್ಕಳ ಅಭ್ಯುದಯಕ್ಕಾಗಿಯೇ ಬರೆದ ಸಣ್ಣ ಸಣ್ಣ ಅಧ್ಯಾಯಗಳಿವೆ. ಮಕ್ಕಳ ಬಗ್ಗೆ ಬರೆಯುವುದು ಸುಲಭವಲ್ಲ. ಆದರೆ ಇದರಲ್ಲಿ ಬರೆದ ಅಷ್ಟೂ ಅಧ್ಯಾಯಗಳ ಬಗ್ಗೆಯೂ ನನ್ನ ತಕರಾರಿಲ್ಲ. ಎಲ್ಲವೂ ಮಕ್ಕಳನ್ನು ಹೆತ್ತವರಿಗೆ ಅತ್ಯುಪಯುಕ್ತವಾದವುಗಳೇ. ಒಂದೇ ಸಲ ಓದಿ ಮುಗಿಸುವುದಕ್ಕಿಂತ ದಿನಕ್ಕೊಂದು ಅಧ್ಯಾಯದಂತೆ ಓದಿ ಮನನ ಮಾಡಿಕೊಳ್ಳುವುದು ಸೂಕ್ತ. ಮಕ್ಕಳಿಗೆ ಕತೆ ಯಾವ ರೀತಿ ಹೇಳಬಹುದು, ಕೆಲಸ ಹೇಗೆ ಕಲಿಸಬಹುದು, ಅವರ ತಪ್ಪುಗಳನ್ನು ಯಾವ ರೀತಿ ತಿದ್ದಿ ಅವರಿಗೆ ಹೇಗೆ ಮಾರ್ಗದರ್ಶನ ಮಾಡಬಹುದು, ಅವರೊಂದಿಗೆ ಹೇಗೆ ನಡೆದುಕೊಳ್ಳಬಹುದು’ ಎಂಬ ಬೇರೆ ಬೇರೆ ವಿಷಯಗಳ ಬಗ್ಗೆ ಅತ್ಯಂತ ಸರಳ ಮತ್ತು ಸುಲಭವಾಗಿ ಉದಾಹರಣೆಗಳ ಸಮೇತ ಪ್ರತಿಯೊಂದು ಅಧ್ಯಾಯದಲ್ಲೂ ಎಲ್ಲರಿಗೂ ಅರ್ಥವಾಗುವಂತೆ ವಿವರಿಸಲಾಗಿದೆ. ಇಂದಿನ ಬದುಕಲ್ಲಿ ಮಕ್ಕಳನ್ನು ಅರಿಯಲು ಹೆತ್ತವರಿಗೆ ತೀರಾ ಅವಶ್ಯವಾದ ಪುಸ್ತಕ ಇದು…
    ಡಾ|| ನಾ. ಸೋಮೇಶ್ವರ
    (ಖ್ಯಾತ ವೈದ್ಯಕೀಯ ಬರಹಗಾರರು)

    Original price was: ₹100.00.Current price is: ₹60.00.
    Add to cart
  • -40%

    ಮಲೆನಾಡಿನ ಮರೆಯದ ನೆನಪುಗಳು

    0

    ಮಲೆನಾಡಿನ ಮರೆಯದ ನೆನಪುಗಳು
    (`ಮಲೆನಾಡಿನ ರೋಚಕ ಕತೆಗಳು’ ಭಾಗ- 8)
    ಮಲೆನಾಡಿನ ರೋಚಕ ಕತೆಗಳ ಸರಣಿಯ ಎಂಟನೆಯ ಭಾಗ ಇದು.

    Original price was: ₹160.00.Current price is: ₹96.00.
    Add to cart
  • -40%

    ಮನುಷ್ಯರ ಮನಸ್ಸು ಮತ್ತು ಸ್ವಭಾವಗಳು: ಭಾಗ 2

    0

    ಈ ಪುಸ್ತಕವು  ಮನುಷ್ಯರ ಮಾತು, ವರ್ತನೆ, ನಂಬಿಕೆ, ಧೋರಣೆ, ಯಾವುದೇ ವಿಷಯ/ವಸ್ತು/ಸಂದರ್ಭದಲ್ಲಿ ಅವರ ಪ್ರತಿಕ್ರಿಯೆಗಳು, ಅವರ ಭಾವನೆಗಳು, ಅವರ ತಪ್ಪು-ಒಪ್ಪುಗಳು, ಬಲಾಬಲಗಳು, ಸಾಮರ್ಥ್ಯ-ದೌರ್ಬಲ್ಯಗಳನ್ನೂ ಅನಾವರಣ ಗೊಳಿಸುವ ಕೃತಿಯಾಗಿದೆ.

    Original price was: ₹120.00.Current price is: ₹72.00.
    Add to cart
  • -40%

    ಆಕಾಶಕ್ಕೆ ಏಣಿ ಭಾಗ – 2

    0

    ಗಿರಿಮನೆ ಶ್ಯಾಮರಾವ್  ಅವರ ಈ ಪುಸ್ತಕವು  ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ವಿಕಸನ ಮಾಲೆಯಾಗಿದೆ.

    Original price was: ₹90.00.Current price is: ₹54.00.
    Add to cart
  • -40%

    ಗಿರಿ ಕಂದರ ಎಸ್ಟೇಟ್

    0

    ಕಷ್ಟಕರ ಸನ್ನಿವೇಶಗಳನ್ನು ತಿಳುವಳಿಕೆಯಿಂದ ಹೇಗೆ ಪರಿವರ್ತಿಸಿಕೊಳ್ಳಬಹುದು? ಎನ್ನುವ ಕಥಾವಸ್ತುವೇ ಈ ಕಾದಂಬರಿಯಾಗಿದೆ.

    Original price was: ₹200.00.Current price is: ₹120.00.
    Add to cart
  • -40%

    ಕಾಡು ತಿಳಿಸಿದ ಸತ್ಯಗಳು

    0

    ವಿದ್ಯೆ, ವಿಚಾರವಂತಿಕೆಯ ಉತ್ತುಂಗಕ್ಕೇರಿದ ದಂಪತಿ ಹಾಗೆ ಬದುಕಿಗಾಗಿ ಓಡುವವರನ್ನು ನೋಡುತ್ತಾ ತಮ್ಮ ಪ್ರಶ್ನೆಗಳಿಗೆ ಸರಿ ಉತ್ತರ ಕಂಡುಕೊಳ್ಳುವುದೇ ಈ ಕಾದಂಬರಿಯ ಕಥಾವಸ್ತುವಾಗಿದೆ.

    Original price was: ₹200.00.Current price is: ₹120.00.
    Add to cart
  • -40%

    ಮುಂಗಾರಿನ ಕರೆ

    0

    ಈ ಪುಸ್ತಕವು  ಜನಪ್ರಿಯ `ಮಲೆನಾಡಿನ ರೋಚಕ ಕತೆಗಳು’ ಸರಣಿಯ ಏಳನೇ ಭಾಗ.ಪಶ್ಚಿಮಘಟ್ಟದ ಒಳಗನ್ನು ಇಂಚಿಂಚಾಗಿ ಬೇರೆ ಬೇರೆ ರೀತಿಯಲ್ಲಿ ತೆರೆದಿಡುವ ಕಥೆಯಾಗಿದೆ.

    Original price was: ₹160.00.Current price is: ₹96.00.
    Add to cart
  • -40%

    ಒಂದು ಆನೆಯ ಸುತ್ತ

    0

    ಒಂದು ಆನೆಯ ಸುತ್ತ

    (ವಸ್ತುಸ್ಥಿತಿಯನ್ನು ಆಧರಿಸಿದ ಕಾಲ್ಪನಿಕ ಕಾದಂಬರಿ)

    ವನ್ಯಜೀವಿಗಳ ಬಗ್ಗೆ ಮಾತಾಡುತ್ತೇವೆ. ಅವುಗಳ ಅಳಿವಿನ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತೇವೆ. ಆದರೆ ಬರಿಯ ಮಾತು, ಕಾಳಜಿಗಳಿಂದ ಅವು ಉಳಿಯಲಾರವು.  ಅವುಗಳ ಅಳಿವಿಗೆ ಕಾರಣವಾಗುವ ಅಂಶಗಳ ಬಗ್ಗೆ ನಮ್ಮ ಗಮನ ಹರಿಯಬೇಕು. ಆನೆಗಳಂತಹಾ ದೈತ್ಯಜೀವಿಗಳು ಊರೊಳಗೆ ನುಗ್ಗಿ ಆಸ್ತಿ, ಮನೆ, ಬೆಳೆ, ಜೀವಹಾನಿಗಳನ್ನು ಮಾಡಿದಾಗ ಅದರ ನೇರ ಪರಿಣಾಮ ಎದುರಿಸುವವರ ಬವಣೆ ವರ್ಣನಾತೀತ. ಆಗೆಲ್ಲಾ ಸಹಜವಾಗಿಯೇ ಅವುಗಳ ಮೇಲೆ ಆಕ್ರೋಶ ವ್ಯಕ್ತವಾಗುತ್ತದೆ.   ಈಗ ಮಲೆನಾಡಿನ ಕೆಲವೆಡೆ ಆಗುತ್ತಿರುವುದು ಇದೇ. ತಿಳಿದೋ ತಿಳಿಯದೆಯೋ ಅನಿವಾರ್ಯ ಎಂದುಕೊಂಡು ಪ್ರಾಣಿಗಳ ವಾಸಸ್ಥಳಗಳನ್ನೆಲ್ಲಾ ನಾವು ಆಕ್ರಮಿಸಿಕೊಳ್ಳುತ್ತಿದ್ದೇವೆ. ವಿಧಿ ಇಲ್ಲದೆ ಅವೇ ಊರೊಳಗೆ ನುಗ್ಗುವ ಪರಿಸ್ಥಿತಿ ನಿರ್ಮಾಣ ಮಾಡಿದ್ದೇವೆ. ತೊಂದರೆಯಾದಾಗ ಮಾತ್ರ ಹಾಹಾಕಾರ ವೆಬ್ಬಿಸುತ್ತೇವೆ.   ಆನೆಗಳ ಸ್ವಚ್ಛಂದ ತಿರುಗಾಟಕ್ಕೆ ಅಡ್ಡಿ ಮಾಡಿ ಅವುಗಳ ಆಹಾರ, ನೆಲೆ ನಾಶ ಮಾಡಿದ್ದೇವೆ. ಊರೊಳಗೆ ಬಂದಾಗ ಅವುಗಳನ್ನು ಕೊಲ್ಲುವ ಮಾತೂ ಬರುತ್ತದೆ.   ಅಲ್ಲ, ತೊಂದರೆಗೊಳಗಾದ ಜನರೇ ತಮಗೆ ತೋಚಿದ ಯಾವುದಾದರೂ ಒಂದು ರೀತಿಯಲ್ಲಿ ಅವುಗಳನ್ನು ಕೊಲ್ಲುತ್ತಿದ್ದಾರೆ. ಇದಕ್ಕೆಲ್ಲಾ ಪರಿಹಾರವೇ ಇಲ್ಲವೇ ಇಲ್ಲ ಎಂದಲ್ಲ; ಇದೆ, ಪೂರ್ತಿಯಾಗಿ ಅಲ್ಲದಿದ್ದರೂ ಮಿತಿ ಮೀರದಷ್ಟು ಖಂಡಿತಾ ಇದೆ.   ಆದರೆ ಒಬ್ಬಿಬ್ಬರು ಮಾಡುವಂಥದ್ದಲ್ಲ.   ಸಂಕಲ್ಪ ಬೇಕು.   ಘನಸರ್ಕಾರದ ಕೃಪೆಯಾಗಬೇಕು.   ಆದಷ್ಟೂ ಈ ಅಪೂರ್ವವಾದ ಪಶ್ಚಿಮಘಟ್ಟವನ್ನು ಭೇದಿಸಬಾರದು. ಅಲ್ಲಿ ಜನ ಜಾತ್ರೆ ಕೂಡದು.   ಈಗಿರುವ ಹೆದ್ದಾರಿಗಳ ಹೊರತಾಗಿ ಹೊಸ ದಾರಿಗಳನ್ನು ನಿರ್ಮಿಸಬಾರದು. ಇರುವ ರಸ್ತೆಗಳನ್ನೇ ಸುವ್ಯವಸ್ಥೆಗೊಳಿಸಬೇಕು. ಗೊತ್ತು ಗುರಿ ಇಲ್ಲದೆ ಅರೆಕಟ್ಟುಗಳನ್ನು ಕಟ್ಟಲೇ ಬಾರದು. ಹಾಗಾದರೆ ಅಭಿವೃದ್ಧಿ ಬೇಡವೇ? ಅವಶ್ಯ ಇರುವ ವಿದ್ಯುತ್ತಿನ ಉತ್ಪಾದನೆ ನಿಲ್ಲಿಸಬೇಕೇ? ಎಂದೂ ಅನಿಸಬಹುದು. ಈಗ ದುಬಾರಿ ಎನಿಸಿದರೂ ಅದನ್ನು ಬೇರೆ ಬಗೆಯಲ್ಲಿ ಉತ್ಪಾದಿಸಬೇಕು.   ಲಾಭ ನಷ್ಟದ ತೂಕ ಹಾಕಿ ನೋಡಿದರೆ ಮುಂದಾಲೋಚನೆ ಇಲ್ಲದೆ ಮಾಡುವ ಈ ರೀತಿಯ ಕೆಲಸಗಳಿಂದ ಲಾಭಕ್ಕಿಂತ ಅಪಾರವಾದ ನಷ್ಟವೇ ಜಾಸ್ತಿ ಎನ್ನುವುದು ಪ್ರಕೃತಿಯ ಒಳಹೊರಗು ತಿಳಿದವರಿಗೆ ಅರ್ಥವಾಗುತ್ತದೆ.   ಇದರ ಪರಿಣಾಮ ಅನುಭವಿಸುವವರು ನಮ್ಮ ಮುಂದಿನ ಪೀಳಿಗೆಯವರು. ಅಂದರೆ ನಮ್ಮ ಮಕ್ಕಳು, ಮೊಮ್ಮಕ್ಕಳು! ಇದು ಒಂದು ತರಹ ‘ಚಿನ್ನದ ಮೊಟ್ಟೆ ಇಡುವ ಕೋಳಿಯ ಹೊಟ್ಟೆ ಸೀಳಿದಂತೆ!’ ಮಳೆ ತರಿಸುವ ಮಳೆಕಾಡುಗಳು, ಪ್ರಕೃತಿಯ ಸಮತೋಲನ ಸಾಧಿಸುವ ವನ್ಯಜೀವಿಗಳು, ಇಡೀ ನಮ್ಮ ದೇಶಕ್ಕೇ ಸಾಲುವಷ್ಟು ಅಪೂರ್ವವಾದ ಔಷಧಿ ಸಂಪತ್ತನ್ನು ಹೊಂದಿದ ಸಸ್ಯಗಳು ಎಲ್ಲಕ್ಕೂ ಮೂಲ ಪಶ್ಚಿಮಘಟ್ಟಗಳ ಸಾಲುಗಳು. ಅವುಗಳ ಮೂಲಗಳನ್ನೇ ನಾಶಮಾಡಿ ನಾವು ಸುಖಪಡುವುದಲ್ಲ.  ಅದಕ್ಕೆ ಹಾನಿ ಮಾಡದೆ ಅದರಿಂದ ಸಿಗುವ ಲಾಭವನ್ನು ಪಡೆಯುವುದೇ ವಿವೇಚನೆ.   ತೊಂದರೆ ಕೊಡುವ ಆನೆಗಳಂತಹಾ ಪ್ರಾಣಿಗಳು ಊರಿಗೆ ಬಂದರೆ ಅಲ್ಲಿನ ಜನಗಳ ಬದುಕು ನರಕವಾಗುತ್ತದೆ. ಅದಕ್ಕೂ ವ್ಯವಸ್ಥೆಯಾಗಬೇಕು.   ಕೆಲವೆಡೆ ತಡೆಗೋಡೆ, ಕೆಲವೆಡೆ ಕಂದಕಗಳನ್ನು ತೋಡಿಯಾದರೂ ಅವು ಊರಿಗೆ ಬಾರದಂತೆ ತಡೆಯಬೇಕು. ಗುಡ್ಡ, ಬೆಟ್ಟ, ತೊರೆ, ಪ್ರಪಾತಗಳಿರುವ ಸಾವಿರಾರು ಕಿ.ಮೀ. ಉದ್ದಕ್ಕೆಲ್ಲಾ ಅದನ್ನು ಮಾಡುವುದೆಂತು? ಎನಿಸಬಹುದು.  ವಿಪರೀತ ಖರ್ಚಿನ ಬಾಬ್ತು ನಿಜ, ಆದರೆ ಯಾವ್ಯಾವುದಕ್ಕೋ ಕೋಟಿ ಕೋಟಿ ಖರ್ಚು ಮಾಡುವ ನಮಗೆ ಅದು ಖಂಡಿತಾ ಅಸಾಧ್ಯವಲ್ಲ. ಅಲ್ಲದೆ ಚೀನದ ಮಾಹಾಗೋಡೆಯ ಮುಂದೆ ಇದೆಷ್ಟರ ಕೆಲಸ? ಮನಸ್ಸಿದ್ದರೆ ಮಾರ್ಗ!

    Original price was: ₹120.00.Current price is: ₹72.00.
    Add to cart
  • -40%

    ಮಕ್ಕಳ ಮನೋಲೋಕ-೨ ಆಕಾಶಕ್ಕೆ ಏಣಿ

    0

    ಮಕ್ಕಳ ಮನೋಲೋಕ-೨ ಆಕಾಶಕ್ಕೆ ಏಣಿ:

    (ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ವಿಕಸನ ಮಾಲೆ)

    ನಾವು ಮಕ್ಕಳಿಗಾಗಿ ಮಾಡುವ ಎಲ್ಲ ಪ್ರಯತ್ನಗಳ ಅಂತಿಮ ಗುರಿ-ಮಕ್ಕಳ ಅರಳುವಿಕೆ.  ಪರಿಸರ, ಸಂಸ್ಕಾರ, ಸಾಹಿತ್ಯ, ಕಲೆ ಇವುಗಳೆಲ್ಲಾ ಪೂರಕವಾಗಿದ್ದಾಗ ಮಾತ್ರ ಮಕ್ಕಳ ಪೂರ್ಣ ಮಾನಸಿಕ ವಿಕಸನ ಸಾಧ್ಯ.   ವೃಷ್ಟಿಯಿಂದ ಸಮಷ್ಟಿ, ಪ್ರತಿಯೊಬ್ಬ ಮಗುವೂ ಶಕ್ತಿಯಾದಾಗಲೇ ರಾಷ್ಟ್ರದ ಬೆಳೆವಣಿಗೆ, ರಾಷ್ಟ್ರದ ಚಾರಿತ್ರ್ಯ, ರಾಷ್ಟ್ರದ ಸಾಮರ್ಥ್ಯ.  ಈ ಪೂರ್ಣತ್ವಕ್ಕಾಗಿಯೇ ಸತತ ಅನ್ವೇಷಣೆ ಮತ್ತು ಪ್ರಯತ್ನಶೀಲತೆಯ ಅಗತ್ಯ.
    ಯಾವ ಜೀವಿಯಲ್ಲೇ ಆಗಲಿ ಅದರ ಒಂದೊಂದು ವರ್ತನೆಗೆ ಸಂಬಂಧಪಟ್ಟಂತೆ ಒಂದೊಂದು ಮನೋವೃತ್ತಿ ಇರುತ್ತದೆ.  ಮೂಕ ಪ್ರಾಣಿಗಳ ಮತ್ತು ಸಣ್ಣ ಮಕ್ಕಳ ಮನೋವೃತ್ತಿಯನ್ನು ನಡವಳಿಕೆ, ಹೇಳಿಕೆಗಳ ಮೂಲಕ ನಾವು ಊಹಿಸಿ ತಿಳಿಯಬೇಕೇ ಹೊರತು ನೇರವಾಗಿ ತಿಳಿಯುವುದು ಅಸಾಧ್ಯ.  ಮಕ್ಕಳು ಬೆಳೆದು ಶಾಲೆಗೆ ಹೋಗಿ ಜ್ಞಾನ ಸಂಪಾದಿಸುವುದರ ಜೊತೆಗೆ ಅವರಿಗೆ ನೈತಿಕ ಬುನಾದಿಯಾಗಿ ಪ್ರಾಮಾಣಿಕತೆ, ಗುರು ಹಿರಿಯರಿಗೆ ಗೌರವ ತೋರಿಸುವುದು, ವಿನಯ ಶೀಲತೆ, ಶ್ರದ್ಧೆ, ಅಚ್ಚುಕಟ್ಟುತನ ಇವುಗಳನ್ನು ಕಲಿಸಿಕೊಟ್ಟು ಅವರ ಚಾರಿತ್ರ್ಯನಿರ್ಮಾಣ ಮಾಡುವ ಮನೋಶಿಕ್ಷಣದ ಅವಶ್ಯಕತೆಯೂ ಇದೆ.

    Original price was: ₹90.00.Current price is: ₹54.00.
    Add to cart
  • -40%

    ಹುಡುಗಾಟ- ಹುಡುಕಾಟ

    0

    ಹುಡುಗಾಟ- ಹುಡುಕಾಟ

    ‘ತರಂಗ’ ವಾರಪತ್ರಿಕೆ ಧಾರವಾಹಿ
    (ಹದಿಹರೆಯದವರಿಗಾಗಿ )

    ಇದು ಜನಪ್ರಿಯ ‘ತರಂಗ ವಾರಪತ್ರಿಕೆ’ಯಲ್ಲಿ ಧಾರಾವಾಹಿಯಾಗಿ ಹರಿದುಬಂದ ಹದಿ ಹರೆಯದವರಿಗಾಗಿ ಬರೆದ ಕಾದಂಬರಿ.  ಸರಿಯಾದ ಕ್ರಮದಲ್ಲಿ ಬೆಳೆದ ಮಕ್ಕಳ ಮನಸ್ಸಿನಲ್ಲಿ ಅದೆಷ್ಟು ಆತ್ಮವಿಶ್ವಾಸವಿರುತ್ತದೆ, ಎಂತಹಾ ಕಷ್ಟ ಬಂದರೂ ಅದನ್ನು ಹೇಗೆ ಎದುರಿಸುತ್ತಾರೆ, ಎನ್ನುವುದನ್ನು ವಿವರಿಸುವ ಪಶ್ಚಿಮಘಟ್ಟದ ಒಳಗನ್ನು ಸ್ವಲ್ಪವಾದರೂ ತೆರೆದಿಡಲು ಯತ್ನಿಸಿದ ಕಾದಂಬರಿ.  ಕಷ್ಟ ಬಂದಾಗ ಮನುಷ್ಯ ಇನ್ನಿಲ್ಲದಂತೆ ಹೋರಾಡುತ್ತಾನೆ.  ದೊಡ್ಡವರಾದರೂ ಅಷ್ಟೆ; ಮಕ್ಕಳೂ ಅಷ್ಟೆ.  ಪಶ್ಚಿಮಘಟ್ಟದ ಇದು ಜನಪ್ರಿಯ ‘ತರಂಗ ವಾರಪತ್ರಿಕೆ’ಯಲ್ಲಿ ಧಾರಾವಾಹಿಯಾಗಿ ಹರಿದುಬಂದ ಹದಿ ಹರೆಯದವರಿಗಾಗಿ ಬರೆದ ಕಾದಂಬರಿ.  ಸರಿಯಾದ ಕ್ರಮದಲ್ಲಿ ಬೆಳೆದ ಮಕ್ಕಳ ಮನಸ್ಸಿನಲ್ಲಿ ಅದೆಷ್ಟು ಆತ್ಮವಿಶ್ವಾಸವಿರುತ್ತದೆ, ಎಂತಹಾ ಕಷ್ಟ ಬಂದರೂ ಅದನ್ನು ಹೇಗೆ ಎದುರಿಸುತ್ತಾರೆ, ಎನ್ನುವುದನ್ನು ವಿವರಿಸುವ ಪಶ್ಚಿಮಘಟ್ಟದ ಒಳಗನ್ನು ಸ್ವಲ್ಪವಾದರೂ ತೆರೆದಿಡಲು ಯತ್ನಿಸಿದ ಕಾದಂಬರಿ.  ಕಷ್ಟ ಬಂದಾಗ ಮನುಷ್ಯ ಇನ್ನಿಲ್ಲದಂತೆ ಹೋರಾಡುತ್ತಾನೆ.  ದೊಡ್ಡವರಾದರೂ ಅಷ್ಟೆ; ಮಕ್ಕಳೂ ಅಷ್ಟೆ.  ಪಶ್ಚಿಮಘಟ್ಟದ ಅರಣ್ಯ ಈಗಲೂ ನಿಗೂಢವೇ.  ದಾರಿ ತಿಳಿದವರೂ ಅದರೊಳಗೆ ಸುತ್ತಿ ಬೆವರುವುದುಂಟು.  ದಾರಿ ತಿಳಿಯದ ಚಾರಣಿಗರೇ ಮಳೆಗಾಲದಲ್ಲಿ ದಿಕ್ಕು-ದೆಸೆ ತಿಳಿಯದೆ ಬದುಕು ಕಳೆದುಕೊಂಡಿರುವುದೂ ಉಂಟು. ಅರಣ್ಯವೆಂದರೇನೆಂದೇ ತಿಳಿಯದ ಮೂವರು ಉತ್ಸಾಹಿ ಹದಿಹರೆಯದವರು ಅಕಸ್ಮಾತ್ತಾಗಿ ಇಂತಹಾ ದಟ್ಟವಾದ ಅರಣ್ಯದೊಳಗೆ ಸಿಕ್ಕಿ ಹಾಕಿಕೊಂಡು ಬದುಕಿಗಾಗಿ ಹೋರಾಡುವುದನ್ನು ವಿವರಿಸುವುದೇ ಹುಡುಗಾಟವಾಡಲು ಹೋಗಿ ಹುಡುಕಾಟಕ್ಕೆ ದಾರಿಯಾದ ಈ ಹದಿಹರೆಯದವರ ಕಾದಂಬರಿ. ಆ ಪ್ರಾಯದವರ ಮನೋಭಾವ ಹೇಗಿರುತ್ತದೆ? ಅದರೊಂದು ಚಿತ್ರಣ ನೀಡುವ ಯತ್ನವೂ ಇಲ್ಲಿದೆ.  ‘ಕಷ್ಟ ಬಂದಾಗ ಎದೆಗುಂದದೆ ಅದನ್ನು ಎದುರಿಸುವುದು ಹೇಗೆ?’ ಎಂಬ ಚಿಂತನೆ ಹೇಗೆ ಕಷ್ಟವನ್ನು ಕೊನೆಗೂ ದೂರ ಮಾಡುತ್ತದೆ ಎನ್ನುವುದನ್ನು ಹದಿಹರೆಯದವರ ಜೊತೆಗೆ ದೊಡ್ಡವರೂ ಓದಬಹುದು.

    Original price was: ₹130.00.Current price is: ₹78.00.
    Add to cart